ಕರ್ನಾಟಕ

karnataka

ETV Bharat / briefs

ಗುಜರಾತ್​​ನಲ್ಲಿ 15-20 ಕಾಂಗ್ರೆಸ್​ ಶಾಸಕರು ಪಕ್ಷ ಬಿಡಲು ಸಿದ್ಧ: ಅಲ್ಪೇಶ್ ಠಾಕೂರ್ ಬಾಂಬ್​

ಕಾಂಗ್ರೆಸ್ ತೊರೆದಿರುವ ಗುಜರಾತ್​​ ಶಾಸಕ ಅಲ್ಪೇಶ್ ಠಾಕೂರ್, ಇದೀಗ ಹೊಸದೊಂದು ಬಾಂಬ್​ ಸಿಡಿಸಿದ್ದು, ಕೈ ಪಕ್ಷದ 15-20 ಶಾಸಕರು ಪಕ್ಷ ತೊರೆಯಲಿದ್ದಾರೆಂದು ಹೇಳಿದ್ದಾರೆ.

ಅಲ್ಪೇಶ್ ಠಾಕೂರ್

By

Published : May 28, 2019, 2:14 PM IST

ಅಹಮದಾಬಾದ್​:ಕಾಂಗ್ರೆಸ್​ನ ಮಾಜಿ ನಾಯಕ ಹಾಗೂ ಹಿಂದುಳಿದ ಸಮುದಾಯದ ಮುಖಂಡ, ಶಾಸಕ ಅಲ್ಪೇಶ್​ ಠಾಕೂರ್​ ದಿಢೀರ್​ ಸುದ್ದಿಗೋಷ್ಠಿ ನಡೆಸಿ, ಮಹತ್ವದ ಮಾಹಿತಿ ಹೊರ ಹಾಕಿದ್ದಾರೆ. ಗುಜರಾತ್​ ಡೆಪ್ಯುಟಿ ಸಿಎಂ ನಿತಿನ್​ ಪಟೇಲ್​ ಭೇಟಿಯಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹೊರಹಾಕಿದ್ದಾರೆ.

ಗುಜರಾತ್​​ನಲ್ಲಿ 15-20 ಕಾಂಗ್ರೆಸ್​ ಶಾಸಕರು ಪಕ್ಷ ತೊರೆಯಲು ಮುಂದಾಗಿದ್ದು, ಆದಷ್ಟು ಬೇಗ ಪಕ್ಷಕ್ಕೆ ಗುಡ್​ಬೈ ಹೇಳಲಿದ್ದಾರೆ ಎಂಬ ಮಾಹಿತಿ ಹೊರಹಾಕಿದ್ದಾರೆ. ಈಗಾಗಲೇ ಕಾಂಗ್ರೆಸ್​ ಪಕ್ಷ ತೊರೆದಿರುವ ಶಾಸಕ ಅಲ್ಪೇಶ್​, ಕಾಂಗ್ರೆಸ್​ ಪಕ್ಷದಲ್ಲಿ ನಾಯಕತ್ವದ ಕೊರತೆ ಉದ್ಭವವಾಗಿದ್ದು, ರಾಜ್ಯದಲ್ಲಿ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಪಕ್ಷದಲ್ಲಿ ನಮ್ಮ ಧ್ವನಿ ಕೇಳಲು ಯಾರು ಸಿದ್ಧರಿಲ್ಲ. ಜನರಿಗಾಗಿ ನಾವು ಕೆಲಸ ಮಾಡಲು ಇಷ್ಟಪಡುತ್ತೇವೆ. ಆದರೆ ಪಕ್ಷದಲ್ಲಿ ಅದಕ್ಕೆ ಜಾಗ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡಿರುವ ಠಾಕೂರ್​,ಗುಜರಾತ್​ನ ಪ್ರತಿಯೊಬ್ಬರಿಗೂ ಮೋದಿಯವರ ಮೇಲೆ ಗೌರವವಿದೆ. ಅವರ ಉತ್ತಮ ಕೆಲಸ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ. 2017ರ ಅಕ್ಟೋಬರ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಠಾಕೂರ್​, ಕಳೆದ ಏಪ್ರಿಲ್​ ತಿಂಗಳಲ್ಲಿ ಕೈ ತೊರೆದಿದ್ದರು. ಇದರ ಮಧ್ಯೆ ಅವರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾತು ಸಹ ಕೇಳಿ ಬರುತ್ತಿವೆ.

ABOUT THE AUTHOR

...view details