ಡಾಲ್ಹೌಸಿ(ಹಿಮಾಚಲಪ್ರದೇಶ): ಖಾಸಗಿ ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 12 ಮಂದಿ ಸಾವನ್ನಪ್ಪಿರುವ ದುರಂತ ಹಿಮಾಚಲಪ್ರದೇಶದ ಡಾಲ್ಹೌಸಿಯಲ್ಲಿ ನಡೆದಿದೆ.
ಡಾಲ್ಹೌಸಿ ಹಾಗೂ ಪಠಾಣ್ಕೋಟ್ ರೋಡ್ ಮಧ್ಯೆ ಸಂಚರಿಸುತ್ತಿದ್ದಾಗ ಪಂಚಪೂಲಾದ ಬಳಿ ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ. ಘಟನೆ ನಡೆದು ಗಂಟೆಗಟ್ಟಲೆ ಕಳೆದರೂ ರಕ್ಷಣಾ ಕಾರ್ಯಾಚರಣೆ ಆರಂಭಗೊಳ್ಳದ ಕಾರಣ, ಸಾವಿನ ಸಂಖ್ಯೆ ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ. ಇನ್ನು ಘಟನೆಯಲ್ಲಿ 26 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.