ಹಿಮಾಚಲ ಪ್ರದೇಶ:ಅನೇಕರು ಓಟು ಮಾಡುವುದನ್ನು ತಪ್ಪಿಸಿಕೊಂಡು ಮೋಜು ಮಾಡುವ ಮನಸ್ಸು ಮಾಡುತ್ತಾರೆೆ. ಆದ್ರೆ ಇಲ್ಲೊಬ್ಬ 102 ಹರೆಯದ ವ್ಯಕ್ತಿ ಸ್ವತಂತ್ರ್ಯ ಭಾರತದ ಮೊದಲ ಚುನಾವಣೆಯಿಂದ ಇಲ್ಲೀವರೆಗೂ ಮತದಾನ ಪ್ರಕ್ರಿಯೆಯಲ್ಲಿ ಸತತವಾಗಿ ಭಾಗಿಯಾಗುತ್ತಿದ್ದಾರೆ.
ದೇಶದ ಮೊದಲ ಚುನಾವಣೆಯಲ್ಲಿ ಮತ ಹಾಕಿದ ವ್ಯಕ್ತಿ ಮತ್ತೆ ಓಟ್ ಹಾಕ್ತಿದ್ದಾರೆ ನೋಡಿ! - 102-yr old Shyam Saran Negi from Kalpa to vote again
ದೇಶದಲ್ಲಿ ಮೊದಲ ಚುನಾವಣೆ ನಡೆದು ಆರು ದಶಕಗಳೇ ಕಳೆದಿವೆ. ಇಲ್ಲೊಬ್ಬ ಅಪರೂಪದ ವ್ಯಕ್ತಿ ಇದ್ದಾರೆ. ಶತಾಯುಷಿಯಾಗಿರುವ ತಾತ ಮತ್ತೆ ಈ ಬಾರಿ ವೋಟ್ ಮಾಡಲು ಸಿದ್ಧರಾಗಿ ನಿಂತಿದ್ದಾರೆ.
ಶತಾಯುಷಿಯಿಂದ ಮತ್ತೊಮ್ಮೆ ವೋಟ್
ಈ ವ್ಯಕ್ತಿಯ ಹೆಸರು ಶ್ಯಾಮ ಸರಣ್ ನೇಗಿ. ವಯಸ್ಸು 102. 1952ರಲ್ಲಿ ನಡೆದ ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಓಟ್ ಮಾಡಿದ ಇವರು ಇದೀಗ 17ನೇ ಲೋಕಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲೂ ಮತ ಹಾಕುವ ಹುಮ್ಮಸ್ಸಿನಲ್ಲಿದ್ದಾರೆ.
ಇಲ್ಲಿನ ಜಿಲ್ಲಾಧಿಕಾರಿ ಕಿನ್ನೌರ್ ಮಾತನಾಡಿ, ಶ್ಯಾಮ್ ಸರಣ್ ನೇಗಿ ಅವರನ್ನು ಎಲೆಕ್ಷನ್ ಬೂತ್‌ಗೆ ಕರೆದೊಯ್ಯಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು, ಗೌರವಯುತವಾಗಿ ನಡೆದುಕೊಳ್ಳಲಾಗುತ್ತದೆ ಎಂದು ಹೇಳಿದ್ರು.