ಕರ್ನಾಟಕ

karnataka

ETV Bharat / briefs

ಉದ್ಯೋಗ ಖಾತರಿ ಕಾಮಗಾರಿ ವೇಳೆ ಮಣ್ಣು ಕುಸಿದು 10 ದಿನಗೂಲಿ ನೌಕರರ ಸಾವು - ಗ್ರಾಮೀಣ ಉದ್ಯೋಗ ಖಾತರಿ

ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿತ್ತು. ಬೇಸಿಗೆಯಲ್ಲಿ ಬರಿದಾಗುವ ಕೆರೆಯೊಂದಲ್ಲಿ ಶೇಖರಣೆಯಾಗಿದ್ದ ಮಣ್ಣನ್ನುಹೊರಹಾಕಲಾಗುತ್ತಿತ್ತು. ಈ ವೇಳೆ ಮೇಲಿದ್ದ ಮಣ್ಣು ಕುಸಿದು ಅವಘಡ ಜರುಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ನೌಕರರ ಸಾವು

By

Published : Apr 10, 2019, 3:13 PM IST

ನಾರಾಯಣಪೇಟೆ:ತೆಲಂಗಾಣದ ಮರಿಕಲ್​ ತಾಲೂಕಿನ ತಿಲೇರುಲ ಗ್ರಾಮದಲ್ಲಿ ಹಳ್ಳ ತೋಡುತ್ತಿರುವಾಗ ಮಣ್ಣು ಕುಸಿದು ಹತ್ತು ದಿನಗೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ.

ರಕ್ಷಣಾ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಅವಶೇಷಗಳಡಿ ಇನ್ನಷ್ಟು ಜನ ಸಿಲುಕಿರುವ ಆತಂಕ ಎದುರಾಗಿದೆ.

ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿತ್ತು. ಬೇಸಿಗೆಯಲ್ಲಿ ಬರಿದಾಗುವ ಕೆರೆಯೊಂದಲ್ಲಿ ಶೇಖರಣೆಯಾಗಿದ್ದ ಮಣ್ಣನ್ನುಹೊರಹಾಕಲಾಗುತ್ತಿತ್ತು. ಈ ವೇಳೆ ಮೇಲಿದ್ದ ಮಣ್ಣು ಕುಸಿದು ಅವಘಡ ಜರುಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೃತರ ದೇಹಗಳನ್ನು ಹೊರತೆಗೆಯಲಾಗಿದ್ದು, ಘಟನಾ ಸ್ಥಳದಲ್ಲಿ ದುಃಖ ಮಡುಗಟ್ಟಿದೆ.

ABOUT THE AUTHOR

...view details