ಕರ್ನಾಟಕ

karnataka

ETV Bharat / bharat

ವಿಶ್ವದ ಮೊದಲ ಡಿಎನ್​ಎ ಲಸಿಕೆ 'ಜೈಕೋವ್-ಡಿ' ತುರ್ತುಬಳಕೆ! - ಪ್ಯಾರಾಮಕ್ಯುಟಿಕಲ್​ ಕ್ಯಾಡಿಲಾ

ಜೈಕೋವ್-ಡಿ ಎಂಬುದು ಡಿಎನ್‌ಎ ಕೋವಿಡ್ ಲಸಿಕೆ. ಸೈಡಿಸ್ ಕ್ಯಾಡಿಲಾವು ತಮ್ಮ ಮೂರನೇ ಹಂತದ ಅಧ್ಯಯನಕ್ಕಾಗಿ 28,000 ಕ್ಕೂ ಹೆಚ್ಚು ಸ್ವಯಂಸೇವಕರನ್ನು ದಾಖಲಿಸಿದ್ದಾರೆ ಎಂದು ನೀತಿ ಆಯೋಗ್ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್ ಮಾಧ್ಯಮಕ್ಕೆ ತಿಳಿಸಿದರು.

ಜೈಕೋವ್-ಡಿ
ಜೈಕೋವ್-ಡಿ

By

Published : Jun 18, 2021, 10:52 PM IST

ನವದೆಹಲಿ:ಮುಂದಿನ ಏಳು - ಎಂಟು ದಿನಗಳಲ್ಲಿ ಜೈಕೋವ್-ಡಿ ಲಸಿಕೆಯ ತುರ್ತು ಬಳಕೆ ದೃಢೀಕರಣಕ್ಕೆ (ಇಯುಎ) ಅರ್ಜಿ ಸಲ್ಲಿಸಬಹುದು ಎಂದು ಔಷಧೀಯ ಪ್ರಮುಖ ಪ್ಯಾರಾಮಕ್ಯುಟಿಕಲ್​ ಕ್ಯಾಡಿಲಾ ಕೇಂದ್ರಕ್ಕೆ ತಿಳಿಸಿದೆ. ಈ ದೃಢೀಕರಣಕ್ಕೆ ಅರ್ಜಿ ಸಲ್ಲಿಸುವ ಎರಡನೇ ಸ್ಥಳೀಯ ಕೋವಿಡ್​-19 ಲಸಿಕೆಯಾಗಿದೆ.

ಜೈಕೋವ್-ಡಿ ಎಂಬುದು ಡಿಎನ್‌ಎ ಕೋವಿಡ್ ಲಸಿಕೆ. ಸೈಡಿಸ್ ಕ್ಯಾಡಿಲಾವು ತಮ್ಮ ಮೂರನೇ ಹಂತದ ಅಧ್ಯಯನಕ್ಕಾಗಿ 28,000 ಕ್ಕೂ ಹೆಚ್ಚು ಸ್ವಯಂಸೇವಕರನ್ನು ದಾಖಲಿಸಿದ್ದಾರೆ ಎಂದು ನೀತಿ ಆಯೋಗ್ ಸದಸ್ಯ (ಆರೋಗ್ಯ) ಡಾ.ವಿ.ಕೆ. ಪಾಲ್​ ಮಾಧ್ಯಮಕ್ಕೆ ತಿಳಿಸಿದರು.

"ಈ ಸಂಸ್ಥೆ ಮುಂದಿನ ದಿನಗಳಲ್ಲಿ ಅರ್ಜಿ ಸಲ್ಲಿಸುತ್ತಾರೆ ಎಂದು ನಾವು ಭಾವಿಸುತ್ತೇವೆ. ಅವರ ಹೆಚ್ಚಿನ ಅಧ್ಯಯನವು ಪೂರ್ಣಗೊಂಡಿದೆ. ಅವರು 3 ನೇ ಹಂತದ ಅಧ್ಯಯನಕ್ಕೆ 28,000 ಕ್ಕೂ ಹೆಚ್ಚು ಸ್ವಯಂಸೇವಕರನ್ನು ಬಳಸಿಕೊಂಡಿದ್ದಾರೆ. ಅವರು ಶೀಘ್ರದಲ್ಲೇ ಫಲಿತಾಂಶಗಳನ್ನು ಸಲ್ಲಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಈ ಲಸಿಕೆಯ ಬಗ್ಗೆ ನಾವು ಭರವಸೆ ಹೊಂದಿದ್ದೇವೆ. ಏಕೆಂದರೆ ಇದು ವಿಶ್ವದ ಮೊದಲ ಡಿಎನ್‌ಎ ಲಸಿಕೆಯಾಗಿದೆ. ಅವರ ಕೆಲಸದ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ "ಎಂದು ಅವರು ಹೇಳಿದರು.

ಜೈವಿಕ ತಂತ್ರಜ್ಞಾನ ವಿಭಾಗದ ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ನೆರವು ಮಂಡಳಿಯ ಭಾಗವಾಗಿ ಕೇಂದ್ರದ ರಾಷ್ಟ್ರೀಯ ಬಯೋಫಾರ್ಮಾ ಮಿಷನ್‌ನ ಬೆಂಬಲದೊಂದಿಗೆ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ABOUT THE AUTHOR

...view details