ಐಜ್ವಾಲ್(ಮಿಜೋರಾಂ):ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆಗೂ ಮುನ್ನ ಜೋರಾಮ್ ಪೀಪಲ್ಸ್ ಮೂವ್ಮೆಂಟ್ನ (ಝಡ್‌ಪಿಎಂ) ಅಧ್ಯಕ್ಷ ಮತ್ತು ಸೆರ್ಚಿಪ್ ಕ್ಷೇತ್ರದ ಅಭ್ಯರ್ಥಿ ಲಾಲ್ದುಹೋಮ ಅವರು ರಾಜ್ಯದಲ್ಲಿ ಸ್ಥಿರ ಸರ್ಕಾರ ರಚಿಸುವ ಕುರಿತು ಮಾತನಾಡಿದ್ದಾರೆ.
"ನಾವು ಸರ್ಕಾರ ರಚಿಸುವ ವಿಶ್ವಾಸ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಎಕ್ಸಿಟ್ ಪೋಲ್ ಕೂಡಾ ವಿಶ್ವಾಸಾರ್ಹವಾಗಿವೆ. ಎಲ್ಲಾ ಎಕ್ಸಿಟ್ ಪೋಲ್ ಫಲಿತಾಂಶಗಳು ನಮ್ಮತ್ತ ಬೊಟ್ಟು ಮಾಡಿವೆ" ಎಂದರು.
"ಸರ್ಕಾರ ರಚಿಸಲು ನಮಗೆ ಬೇರೆ ಯಾವುದೇ ರಾಜಕೀಯ ಪಕ್ಷಗಳ ಸಹಾಯ ಬೇಕಿಲ್ಲ. ಮೊದಲಿನಿಂದಲೂ ನಾವು ಬಹುಮತ ಪಡೆಯುತ್ತೇವೆ ಎಂದು ಹೇಳುತ್ತಲೇ ಬಂದಿದ್ದೇವೆ. ನಾವು ಸ್ಥಿರ ಸರ್ಕಾರ ರಚಿಸಲಿದ್ದೇವೆ. ಜೆಡ್‌ಪಿಎಂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ನಂಬಿಕೆ ಇದೆ. ಕೋಳಿ ಮೊಟ್ಟೆಯೊಡೆಯವ ಮುನ್ನವೇ ನೀವು ಅವುಗಳನ್ನು ಎಣಿಸುವ ಕೆಲಸ ಮಾಡಬೇಡಿ" ಎಂದರು.