ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ಮತ್ತೆ 14 ಜನರಿಗೆ ಝಿಕಾ ದೃಢ : ಕರ್ನಾಟಕದಲ್ಲಿ ಹೆಚ್ಚಿದ ಆತಂಕ - majority are health workers

ಕೇರಳದಲ್ಲಿ ಝಿಕಾ ವೈರಸ್ ಪತ್ತೆಯಾಗಿರುವ ಹಿನ್ನೆಲೆ ರಾಜ್ಯದ ಗಡಿ ಪ್ರದೇಶದ ಜನರಲ್ಲಿ ಆತಂಕ ಹೆಚ್ಚಾಗಿದೆ. ಈಗಾಗಲೇ ಕೋವಿಡ್​ನಿಂದ ತತ್ತರಿಸಿರುವ ಜನತೆಗೆ ಝಿಕಾ ಮತ್ತೊಂದು ಆಘಾತ ನೀಡಿದೆ..

ಕೇರಳದಲ್ಲಿ ಮತ್ತೆ 14 ಜನರಿಗೆ ಝಿಕಾ ದೃಢ
ಕೇರಳದಲ್ಲಿ ಮತ್ತೆ 14 ಜನರಿಗೆ ಝಿಕಾ ದೃಢ

By

Published : Jul 9, 2021, 1:29 PM IST

ತಿರುವನಂತಪುರಂ(ಕೇರಳ): ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಝಿಕಾ ವೈರಸ್​ ಮತ್ತೆ 14 ಜನರಿಗೆ ವಕ್ಕರಿಸಿದೆ. ಈ ಮೂಲಕ ಝಿಕಾ ಸೋಂಕಿತರ ಸಂಖ್ಯೆ 15ಕ್ಕೆ ಏರಿದೆ. ಈ ರೋಗವು ಸೊಳ್ಳೆಗಳಿಂದ ಹರಡಲಿದೆ ಎಂದು ತಿಳಿದು ಬಂದಿದೆ.

ತಿರುವನಂಪುರಂನ ಪರಶಾಲದ 24 ವರ್ಷದ ಗರ್ಭಿಣಿಯಲ್ಲಿ ಈ ಸೋಂಕು ಮೊದಲಿಗೆ ಕಾಣಿಸಿತ್ತು. ಜ್ವರ, ತಲೆನೋವು, ಚರ್ಮದ ಮೇಲೆ ಕೆಂಪು ಗುರುತುಗಳಂಥ ರೋಗ ಲಕ್ಷಣ ಹೊಂದಿರುವ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯಿಂದ ಸಂಗ್ರಹಿಸಿದ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳಿಸಲಾಗಿದೆ.

ಮಹಿಳೆಗೆ ಚಿಕಿತ್ಸೆ ನೀಡಿದ ಆರೋಗ್ಯ ಕಾರ್ಯಕರ್ತರು ಸೇರಿದಂತೆ 19 ಜನರ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳಿಸಲಾಗಿದ್ದು, 15 ಜನರಿಗೆ ಸೋಂಕು ದೃಢಪಟ್ಟಿದೆ.

ಝಿಕಾ ವೈರಸ್​ನ ಲಕ್ಷಣಗಳು

ಜ್ವರ, ಚರ್ಮ ಸಂಬಂಧಿ ಕಾಯಿಲೆಗಳು, ಸ್ನಾಯು-ಕೀಲು ನೋವು, ಸುಸ್ತು, ತಲೆನೋವು

ಕರ್ನಾಟಕದಲ್ಲೂ ಹೆಚ್ಚಿದ ಆತಂಕ

ಕೇರಳದಲ್ಲಿ ಝಿಕಾ ವೈರಸ್ ಪತ್ತೆಯಾಗಿರುವ ಹಿನ್ನೆಲೆ ರಾಜ್ಯದ ಗಡಿ ಪ್ರದೇಶದ ಜನರಲ್ಲಿ ಆತಂಕ ಹೆಚ್ಚಾಗಿದೆ. ಈಗಾಗಲೇ ಕೋವಿಡ್​ನಿಂದ ತತ್ತರಿಸಿರುವ ಜನತೆಗೆ ಝಿಕಾ ಮತ್ತೊಂದು ಆಘಾತ ನೀಡಿದೆ.

ಇದನ್ನೂ ಓದಿ: ಕೇರಳ: 24 ವರ್ಷದ ಗರ್ಭಿಣಿಯಲ್ಲಿ ಝಿಕಾ ವೈರಸ್‌ ಪತ್ತೆ

ABOUT THE AUTHOR

...view details