ನವದೆಹಲಿ :ಹಿಜಾಬ್ ವಿವಾದ ವಿಚಾರವಾಗಿ ಪರ-ವಿರೋಧಗಳ ತೀವ್ರತೆ ಹೆಚ್ಚಾಗಿದೆ. ಹಿಜಾಬ್ ವಿವಾದವೂ ಬೇರೆ ಬೇರೆ ಮಗ್ಗಲುಗಳಿಗೆ ಹೊರಳಿದೆ. ಈಗ ಬಾಲಿವುಡ್ ನಟಿ ಝೈರಾ ವಾಸಿಮ್ ಹಿಜಾಬ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಹಿಜಾಬ್ ತಮ್ಮ ತಮ್ಮ ಆಯ್ಕೆ ಎಂಬುದು ತಪ್ಪು ತಿಳುವಳಿಕೆ ಹೊಂದಿದೆ. ಹಿಜಾಬ್ ಇಸ್ಲಾಂನಲ್ಲಿ ಒಂದು ಆಯ್ಕೆಯಲ್ಲ. ಆದರೆ, ಒಂದು ಜವಾಬ್ದಾರಿಯಾಗಿದೆ. ಹಿಜಾಬ್ ಧರಿಸಿದ ಮಹಿಳೆ ದೇವರು ವಿಧಿಸಿರುವ ಕಟ್ಟುಪಾಡುಗಳನ್ನು ಪೂರೈಸುತ್ತಾಳೆ ಎಂದು ಝೈರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾನೂ ಕೃತಜ್ಞತೆ ಮತ್ತು ನಮ್ರತೆಯಿಂದ ಹಿಜಾಬ್ ಅನ್ನು ಧರಿಸಿಸುತ್ತೇನೆ. ಕೇವಲ ಧಾರ್ಮಿಕತೆಯ ಕಾರಣದಿಂದ ಮುಸ್ಲಿಂ ಮಹಿಳೆಯರಿಗೆ ಕಿರುಕುಳ ನೀಡುವ ಈ ವ್ಯವಸ್ಥೆಯನ್ನು ನಾನು ಸಂಪೂರ್ಣ ವಿರೋಧಿಸುತ್ತೇನೆ ಎಂದು ಝೈರಾ ಟ್ವಿಟರ್ನಲ್ಲಿ ಹೇಳಿದ್ದಾರೆ.
ಮುಸ್ಲಿಂ ಮಹಿಳೆಯರಿಗೆ ವಿರುದ್ಧ ಪಕ್ಷಪಾತ ಮಾಡುವುದು, ಹಿಜಾಬ್ ವಿಚಾರಕ್ಕೆ ಶಿಕ್ಷಣವನ್ನು ನಿರಾಕರಿಸುವುದು ಅನ್ಯಾಯವಾಗಿದೆ. ಮಹಿಳಾ ಸಬಲೀಕರಣದ ಹೆಸರಿನಲ್ಲಿ ಇದೆಲ್ಲವೂ ನಡೆಯುತ್ತಿರುವುದು ದುಃಖ ತಂದಿದೆ ಎಂದು ಝೈರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕಲಬುರಗಿ: ಹಿಜಾಬ್-ಕೇಸರಿ ವಿವಾದದ ನಡುವೆ ಸಿಂಧೂರ ಚಳುವಳಿ