ಕರ್ನಾಟಕ

karnataka

ETV Bharat / bharat

ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಶಾಸಕರ ಹೊಯ್​ಕೈ: ಟಿಡಿಪಿ ಮೇಲೆ ವೈಸಿಪಿ ಹಲ್ಲೆ ಆರೋಪ - ಆಡಳಿತಾರೂಢ ವೈಸಿಪಿ ಶಾಸಕರ ದೌರ್ಜನ್ಯ

ಆಂಧ್ರಪ್ರದೇಶ ವಿಧಾನಸಭೆ ಕಲಾಪದಲ್ಲಿ ಶಾಸಕರ ಮಧ್ಯೆ ಕಿತ್ತಾಟ ನಡೆದಿದೆ. ಪ್ರತಿಭಟಿಸುತ್ತಿದ್ದ ಆಡಳಿತಾರೂಢ ವೈಸಿಪಿ ಶಾಸಕರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಟಿಡಿಪಿ ಶಾಸಕರು ಆರೋಪಿಸಿದ್ದಾರೆ.

ಟಿಡಿಪಿ ಮೇಲೆ ವೈಸಿಪಿ ಹಲ್ಲೆ ಆರೋಪ
ಟಿಡಿಪಿ ಮೇಲೆ ವೈಸಿಪಿ ಹಲ್ಲೆ ಆರೋಪ

By

Published : Mar 20, 2023, 1:32 PM IST

ಅಮರಾವತಿ (ಆಂಧ್ರಪ್ರದೇಶ):ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಶಾಸಕರ ಮಧ್ಯೆ ಸಂಘರ್ಷ ನಡೆದಿದೆ. ಮುಖ್ಯಮಂತ್ರಿ ಜಗನ್​ಮೋಹನ್​ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಶಾಸಕರು, ತೆಲುಗು ದೇಶಂ ಪಕ್ಷದ (ಟಿಡಿಪಿ) ಶಾಸಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ಟಿಡಿಪಿ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಕೂಡ ಖಂಡಿಸಿದ್ದಾರೆ.

ಟಿಡಿಪಿ ಶಾಸಕ ಡೋಲಾ ವೀರಾಂಜನೇಯಸ್ವಾಮಿ ಅವರ ಮೇಲೆ ಆಡಳಿತ ಪಕ್ಷದ ವೈಸಿಪಿ ಶಾಸಕ ಸುಧಾಕರ್​ಬಾಬು ಹಲ್ಲೆ ಮಾಡಿದರೆ, ಗೋರಂಟ್ಲ ಬುಚ್ಚಯ್ಯಚೌಧರಿ ಅವರನ್ನು ಇನ್ನೊಬ್ಬ ಎಂಎಲ್​ಎಯಾದ ವೆಲ್ಲಂಪಲ್ಲಿ ದೂಡಿದ್ದಾರೆ ಎಂದು ಟಿಡಿಪಿ ಶಾಸಕರು ಆರೋಪಿಸಿದ್ದಾರೆ.

ಸ್ಪೀಕರ್​ ಮುಂದೆ ನಾವು ಪ್ರತಿಭಟನೆ ನಡೆಸುತ್ತಿದ್ದಾಗ ಅಲ್ಲಿಗೆ ಬಂದ ವೈಸಿಪಿ ಶಾಸಕರು ನಮ್ಮನ್ನು ತಳ್ಳಾಡಿದರು. ಈ ವೇಳೆ ಕೆಲ ಶಾಸಕರು ದಾಳಿ ಕೂಡ ಮಾಡಿದರು. ಅಲ್ಲಿಗೆ ಅವರ ಬಂದಿದ್ದು ಏಕೆ?, ನಮ್ಮ ಆಕ್ಷೇಪಗಳನ್ನು ಸ್ಪೀಕರ್​ ಮುಂದಿಡುತ್ತಿದ್ದಾಗ ಆಡಳಿತ ಪಕ್ಷ ಅಡ್ಡಿಪಡಿಸಿತು. ಇದನ್ನು ಸ್ಪೀಕರ್​ ಕೂಡ ನೋಡಿದ್ದಾರೆ. ಅವರು ನಮ್ಮ ಮೇಲೆ ಹೇಗೆ ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ದಾಳಿ ಮಾಡಿ ನಮ್ಮ ಮೇಲೆಯೇ ಆರೋಪ:ಆಡಳಿತಾರೂಢ ವೈಸಿಪಿ ಶಾಸಕರು ಹಲ್ಲೆ ನಡೆಸಿದ್ದು ಮಾತ್ರವಲ್ಲದೆ ಈಗ ಅದನ್ನು ನಮ್ಮ ಮೇಲೆ ಹಾಕುತ್ತಿದ್ದಾರೆ. ಅವರೇ ಹಲ್ಲೆ ಮಾಡಿದ್ದಾರೆ. ಸದನದಲ್ಲಿ ಏನಾಯಿತು ಎಂಬುದು ಸ್ಪೀಕರ್‌ಗೆ ಸ್ಪಷ್ಟವಾಗಿ ಗೊತ್ತಿದೆ. ನಾವು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ. ವೈಸಿಪಿ ಶಾಸಕರ ವಿರುದ್ಧವೂ ಕ್ರಮ ಜರುಗಿಸಬೇಕು. ಸಭೆಯ ದೃಶ್ಯಾವಳಿಗಳನ್ನು ಸ್ಪೀಕರ್​ ಪರಿಶೀಲಿಸಿದರೆ ಸತ್ಯ ಗೊತ್ತಾಗುತ್ತದೆ ಎಂದು ಟಿಡಿಪಿ ಶಾಸಕರು ಹೇಳಿದರು.

ಸದನದಲ್ಲಿ ನಡೆದಿದ್ದೇನು?:ವಿಧಾನಸಭೆ ಕಲಾಪದ ವೇಳೆ ಟಿಡಿಪಿ ಶಾಸಕರು ಮತ್ತು ವೈಸಿಪಿ ಸದಸ್ಯರ ನಡುವೆ ಮಾರಾಮಾರಿ ನಡೆದಿರುವುದನ್ನು ಬಹಿರಂಗಪಡಿಸಿದ ಶಾಸಕರು, ಸ್ಪೀಕರ್ ವೇದಿಕೆಯ ಮುಂಭಾಗ ನಾವು ಧರಣಿ ನಿರತರಾಗಿದ್ದ ಮಾಜಿ ಸಚಿವ ವೆಲ್ಲಂಪಲ್ಲಿ ಮತ್ತು ವೈಸಿಪಿ ಶಾಸಕ ಟಿಜೆಆರ್ ಸುಧಾಕರ್ ಬಾಬು ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಕೋಪಗೊಂಡ ಸುಧಾಕರ್ ಬಾಬು ಬಲವೀರಾಂಜನೇಯಸ್ವಾಮಿ ಅವರ ಮೇಲೆ ಹಲ್ಲೆ ಮಾಡಿದರು. ಇನ್ನೊಬ್ಬ ಶಾಸಕ ವೆಲ್ಲಂಪಲ್ಲಿ ವಿರೋಧ ಪಕ್ಷದತ್ತ ಧಾವಿಸಿ ಬುಚ್ಚಯ್ಯ ಚೌಧರಿ ಅವರನ್ನು ದೂಡಿ ಹಲ್ಲೆ ನಡೆಸಿದರು ಎಂದು ವಿವರಿಸಿದರು.

ಎಂಎಲ್‌ಸಿ ಚುನಾವಣೆಯಲ್ಲಿ ವೈಸಿಪಿ ಅಭ್ಯರ್ಥಿ ಸೋಲಿನಿಂದಾಗಿ ಅವರ ಹುಚ್ಚಾಟ ಹೆಚ್ಚಾಗಿದೆ. ಟಿಡಿಪಿ ಶಾಸಕ ಸ್ವಾಮಿ ಹಿಡಿದಿದ್ದ ಫಲಕವನ್ನೂ ಸ್ಪೀಕರ್ ಕಿತ್ತುಕೊಂಡರು. ಘರ್ಷಣೆ ಹೆಚ್ಚಾದ ಕಾರಣ ಕಲಾಪವನ್ನು ಸ್ವಲ್ಪ ಹೊತ್ತು ಮುಂದೂಡಲಾಯಿತು. ಇದಾದ ಬಳಿಕ ನಮ್ಮ ಶಾಸಕರೂ ಸೇರಿ ಕೆಲವರನ್ನು ವಿಧಾನಸಭೆ ಕಲಾಪದಿಂದ ಅಮಾನತುಗೊಳಿಸಲಾಗಿದೆ ಎಂದು ಸ್ಪೀಕರ್ ಹೇಳಿದರು. ಆದರೆ, ದಾಳಿ ಮಾಡಿದ್ದು ವೈಸಿಪಿ ಶಾಸಕರು. ನಮ್ಮ ಮೇಲೆ ಕ್ರಮವೇಕೆ ಎಂದು ಪ್ರಶ್ನಿಸಿದೆವು. ಆದರೆ ಸ್ಪೀಕರ್​ ಇದಕ್ಕೆ ಸೊಪ್ಪು ಹಾಕಲಿಲ್ಲ.

ಆಡಳಿತಾರೂಢ ವೈಸಿಪಿಗೆ ಧೈರ್ಯವಿದ್ದರೆ ವಿಧಾನಸಭೆಯಲ್ಲಿ ಏನಾಯಿತು ಎಂಬ ಸಂಪೂರ್ಣ ವಿಡಿಯೋವನ್ನು ಬಿಡುಗಡೆ ಮಾಡಲಿ. ವಿಡಿಯೋದಲ್ಲಿ ನಮ್ಮ ಶಾಸಕರು ತಪ್ಪು ಮಾಡಿದ್ದರೆ, ಯಾವುದೇ ಕ್ರಮ ಬೇಕಾದರೂ ಕೈಗೊಳ್ಳಲಿ ಎಂದು ಟಿಡಿಪಿ ಶಾಸಕರು ಸವಾಲು ಹಾಕಿದರು.

ದಾಳಿ ಖಂಡಿಸಿದ ಚಂದ್ರಬಾಬು ನಾಯ್ಡು:ವಿಧಾನಸಭೆಯಲ್ಲಿ ಟಿಡಿಪಿ ಶಾಸಕರ ಮೇಲಿನ ದಾಳಿಯನ್ನು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಖಂಡಿಸಿದ್ದಾರೆ. ವಿಧಾನಸಭೆಯ ಇತಿಹಾಸದಲ್ಲಿ ಇಂದು ಕರಾಳ ದಿನವಾಗಿದೆ. ರಾಜ್ಯದ ಇತಿಹಾಸದಲ್ಲಿ ಇದುವರೆಗೂ ವಿಧಾನಸಭೆಯೊಳಗೆ ಶಾಸಕರ ಮೇಲೆ ಹಲ್ಲೆ ನಡೆದಿರಲಿಲ್ಲ. ಮಾತಿನ ಚಕಮಕಿಯ ಮಧ್ಯೆ ಹಲ್ಲೆ ನಡೆಸಿರುವುದು ಅಪರಾಧ. ಶಾಸಕಾಂಗಕ್ಕೆ ಕಳಂಕ ತಂದ ವ್ಯಕ್ತಿಯಾಗಿ ಸಿಎಂ ಜಗನ್ ಉಳಿಯಲಿದ್ದಾರೆ. ವೈಸಿಪಿಯ ಬಗ್ಗೆ ಜನತೆಗೆ ಅರ್ಥವಾಗಿದೆ. ಇದು ಶಾಸಕಾಂಗ ಸಭೆಯಲ್ಲ, ಕೌರವ ಸಭೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ:ರಾಹುಲ್​ ಹೇಳಿಕೆ, ಅದಾನಿ ತನಿಖೆ ಗದ್ದಲ: ಸಂಸತ್​ ಸಮಯ ವ್ಯರ್ಥ, ಕಲಾಪ ಮುಂದೂಡಿಕೆ

ABOUT THE AUTHOR

...view details