ಕರ್ನೂಲ್(ಆಂಧ್ರಪ್ರದೇಶ):ಮುಖ್ಯಮಂತ್ರಿ ವೈ ಎಸ್ ಜಗನ್ಮೋಹನ್ ರೆಡ್ಡಿ ಅವರ ತಾಯಿ ವಿಜಯಮ್ಮ ಪ್ರಯಾಣಿಸುತ್ತಿದ್ದ ಕಾರು ಕರ್ನೂಲ್ ಬಳಿ ಅಪಘಾತಕ್ಕೀಡಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಎರಡು ಟೈರ್‌ಗಳು ಏಕಕಾಲದಲ್ಲಿ ಸ್ಫೋಟಗೊಂಡು ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಕಾರು ನಿಯಂತ್ರಿಸುವಲ್ಲಿ ಚಾಲಕ ಯಶಸ್ವಿಯಾಗಿದ್ದು, ಅನಾಹುತ ಸಂಭವಿಸಿಲ್ಲ.
ಮಾಜಿ ಶಾಸಕಿ ವಿಜಯಮ್ಮ ತಮ್ಮ ಪತಿ ದಿವಂಗತ ವೈ.ಎಸ್ ರಾಜಶೇಖರರೆಡ್ಡಿ ಸ್ನೇಹಿತನ ಕುಟುಂಬವನ್ನು ಭೇಟಿ ಮಾಡಲು ಕರ್ನೂಲ್ಗೆ ತೆರಳಿದ್ದರು. ಅಲ್ಲಿಂದ ವಾಪಸ್ ಬರುತ್ತಿದ್ದಾಗ ಗುತ್ತಿ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆದಿದೆ. ಆ ಬಳಿಕ ಅವರು ಮತ್ತೊಂದು ಕಾರಿನ ಮೂಲಕ ಹೈದರಾಬಾದ್ಗೆ ತೆರಳಿದ್ದಾರೆ.