ಕರ್ನಾಟಕ

karnataka

ETV Bharat / bharat

ಭೀಕರ ರಸ್ತೆ ಅಪಘಾತ: ಸೋಶಿಯಲ್ ಮೀಡಿಯಾ ಸ್ಟಾರ್​​ ಗಾಯತ್ರಿ ದುರ್ಮರಣ - Youtuber Gayatri died

Youtuber Gayatri dies in a road accident.. ಭೀಕರ ರಸ್ತೆ ಅಪಘಾತದಲ್ಲಿ ಯೂಟ್ಯೂಬರ್ ಖ್ಯಾತಿಯ ಗಾಯತ್ರಿ ದುರ್ಮರಣಕ್ಕೀಡಾಗಿದ್ದು, ಕುಡಿದ ಮತ್ತಿನಲ್ಲಿ ವೇಗವಾಗಿ ಕಾರು ಚಲಾವಣೆ ಮಾಡಿರುವುದು ಈ ಘಟನೆಗೆ ಕಾರಣ ಎನ್ನಲಾಗಿದೆ.

Youtuber Gayatri died in a Road accident
Youtuber Gayatri died in a Road accident

By

Published : Mar 19, 2022, 10:42 PM IST

Updated : Mar 21, 2022, 12:05 PM IST

ಗಚ್ಚಿಬೌಲಿ(ತೆಲಂಗಾಣ): ಪಬ್​​ನಿಂದ ವಾಪಸ್​ ಆಗುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಖ್ಯಾತ ಯೂಟ್ಯೂಬರ್​​, ಜೂನಿಯರ್​ ಆರ್ಟಿಸ್ಟ್​​ ಗಾಯತ್ರಿ ಸಾವನ್ನಪ್ಪಿದ್ದಾರೆ. ಹೈದರಾಬಾದ್​ನ ಗಚ್ಚಿಬೌಲಿ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಜೂನಿಯರ್​ ಆರ್ಟಿಸ್ಟ್​​ ಗಾಯತ್ರಿ

ತನ್ನ ಸ್ನೇಹಿತನಾದ ರೋಹಿತ್ ಜೊತೆಗೆ ಸೈಬರಾಬಾದ್​ ವಿಪ್ರೋ ಜಂಕ್ಷನ್​​ನಿಂದ ಗಚ್ಚಿಬೌಲಿಗೆ ಕಾರಿನಲ್ಲಿ ಬರುತ್ತಿದ್ದ ವೇಳೆ ನಿಯಂತ್ರಣ ಕಳೆದಕೊಂಡಿರುವ ಕಾರು ಫುಟ್​ಪಾತ್​ನಲ್ಲಿ ಉರುಳಿಬಿದ್ದಿದೆ. ಪರಿಣಾಮ ಗಾಯತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ರೋಹಿತ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ರಸ್ತೆ ಅಪಘಾತದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ನಿಧನ

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಡ್ರಂಕ್​ ಆ್ಯಂಡ್​ ಡ್ರೈವ್​​ನಿಂದಾಗಿ ಈ ಅಪಘಾತ ನಡೆದಿದೆ ಎಂದು ತಿಳಿಸಿದ್ದಾರೆ. ಹೋಳಿ ಸಂಭ್ರಮದಲ್ಲಿ ಭಾಗಿಯಾಗಿದ್ದ ರೋಹಿತ್ ಹಾಗೂ ಗಾಯತ್ರಿ ಕಂಠಪೂರ್ತಿ ಮದ್ಯಪಾನ ಮಾಡಿದ್ದರು ಎಂದು ವರದಿಯಾಗಿದೆ.

ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಜೂನಿಯರ್​ ಆರ್ಟಿಸ್ಟ್​​

ಅಪಘಾತದ ವೇಳೆ ಕಾರು 120ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿತ್ತು ಎನ್ನಲಾಗಿದ್ದು, ಹೆಚ್ಚು ವೇಗದಲ್ಲಿ ಬಂದ ಕಾರಣವೇ ಈ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಭೀಕರ ಅಪಘಾತ: ಸೋಶಿಯಲ್ ಮೀಡಿಯಾ ಸ್ಟಾರ್​​ ಗಾಯತ್ರಿ ದುರ್ಮರಣ
Last Updated : Mar 21, 2022, 12:05 PM IST

ABOUT THE AUTHOR

...view details