ಕೋಲ್ಕತ್ತಾ (ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಅಲ್ಲಿನ ವಿಧಾನಸಭಾ ಚುನಾವಣಾ ನಂತರದ ಹಿಂಸಾಚಾರದ ವಿಡಿಯೋವೊಂದನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಆದರೆ, ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದ ಆರೋಪದಲ್ಲಿ ವೆಬ್‌ಸೈಟ್‌ನ ಅಧಿಕಾರಿಗಳು ಆ ವಿಡಿಯೋವನ್ನು ತೆಗೆದುಹಾಕಿದ್ದಾರೆ.
ಟ್ಟಿಟರ್‌ನಲ್ಲಿ ಶೇರ್ ಮಾಡಿದ್ದ ಕ್ರೂರ ಹಿಂಸಾಚಾರದ ವಿಡಿಯೋಗಳನ್ನು ಘೋಷ್ ಹಂಚಿಕೊಂಡಿದ್ದರು. ಸದ್ಯ ಅದನ್ನು ಅಳಿಸಿಹಾಕಲಾಗಿದೆ. ಆದರೆ, ಇದು ಪಶ್ಚಿಮ ಬಂಗಾಳದ ನಿಜವಾದ ಪರಿಸ್ಥಿತಿ ಇದು ಎಂದು ರಾಜ್ಯ ಬಿಜೆಪಿ ವಕ್ತಾರ ಶಾಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ.
ತನ್ನ ಟ್ವಿಟರ್ ಖಾತೆಯಲ್ಲಿ ದಿಲೀಪ್ ಘೋಷ್, ತೃಣಮೂಲ ಕಾಂಗ್ರೆಸ್ ಸರ್ಕಾರದ ಅದ್ಭುತ ಸಾಧನೆಗಳು ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆದಾಗ್ಯೂ ಈ ಸಂದೇಶದೊಂದಿಗೆ ಯೂಟ್ಯೂಬ್‌ನಿಂದ ದೃಶ್ಯಗಳನ್ನು ಶೀಘ್ರದಲ್ಲೇ ತೆಗೆದುಹಾಕಲಾಗಿದೆ. ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ಈ ಪೋಸ್ಟ್‌ಗಳನ್ನು ತೆಗೆದುಹಾಕುತ್ತದೆ. ಅದು ನಮ್ಮ ಸಮುದಾಯವನ್ನು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪ.ಬಂಗಾಳ ಫಲಿತಾಂಶದ ಬಳಿಕ ಬಿಜೆಪಿಯ 37 ಕಾರ್ಯಕರ್ತರ ಹತ್ಯೆಯಾಗಿದೆ: ದಿಲೀಪ್ ಘೋಷ್
ದ್ವೇಷದ ಮಾತು ಮತ್ತು ಕಿರುಕುಳ, ಮೋಸಗೊಳಿಸುವ ಅಭ್ಯಾಸಗಳು, ಹಿಂಸಾತ್ಮಕ ಅಥವಾ ಗ್ರಾಫಿಕ್ ವಿಷಯ ನೀತಿ ಮತ್ತು ಅದರ ಸೇವಾ ನಿಯಮಗಳ ಉಲ್ಲಂಘನೆಯಾಗಿದೆ. ಜುಲೈ 21 ರಂದು ಸಂಸದ ಘೋಷ್, ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆ ನಂತರದ ಘರ್ಷಣೆಯಲ್ಲಿ 30 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದರು.