ಕರ್ನಾಟಕ

karnataka

ETV Bharat / bharat

ಉನ್ನಾವೋ: ಅತ್ಯಾಚಾರ ಸಂತ್ರಸ್ತೆಯ ಮನೆ ಮುಂದೆ ಗುಂಡು ಹಾರಿಸಿದ ಆರೋಪಿಗಳು- ವಿಡಿಯೋ

ಅತ್ಯಾಚಾರ ಸಂತ್ರಸ್ತೆಯ ಮನೆಯ ಹೊರಗೆ ನಿಂತು ಗುಂಡು ಹಾರಿಸಿ ಆರೋಪಿಗಳು ಪರಾರಿಯಾಗಿದ್ದಾರೆ. ಬಾಲಕಿಯ ಸಂಬಂಧಿಕರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

unnao
ಉನ್ನಾವೋ

By

Published : Jun 3, 2023, 4:05 PM IST

ಅತ್ಯಾಚಾರ ಸಂತ್ರಸ್ತೆಯ ಮನೆ ಮುಂದೆ ಗುಂಡು ಹಾರಿಸಿದ ಆರೋಪಿಗಳು- ವಿಡಿಯೋ

ಉನ್ನಾವೋ (ಉತ್ತರ ಪ್ರದೇಶ): ಗಂಗಾ ಘಾಟ್​ ಕೊಟ್ಟಾಲಿ ಪ್ರದೇಶದ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದ ಬಾಲಕಿಯೊಬ್ಬಳು ಆರು ವರ್ಷಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿದ್ದಳು. ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಇದೀಗ ಬಂಧನದಿಂದ ಬಿಡುಗಡೆಗೊಂಡಿರುವ ದುಷ್ಕರ್ಮಿಗಳು ಅದೇ ಬಾಲಕಿಯ ಮನೆಯ ಮುಂಭಾಗದಲ್ಲಿ ಗುಂಡು ಹಾರಿಸಿದ್ದಾರೆ. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಏನಿದು ಘಟನೆ?:ಕೊಟ್ಟಾಲಿ ಗ್ರಾಮದಲ್ಲಿ ವಾಸಿಸುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ 6 ವರ್ಷಗಳ ಹಿಂದೆ ಅತ್ಯಾಚಾರ ನಡೆದಿತ್ತು. ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಹಾಕಿದ್ದರು. ಶುಕ್ಲಗಂಜ್​ ನಿವಾಸಿಗಳಾದ ವೀರೇಂದ್ರ, ರವಿ ಮತ್ತು ಸಂದೀಪ್​ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳು.

ಈ ಮೂವರು ಕೆಲ ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿ ಹೊರಬಂದಿದ್ದರು. ಬಳಿಕ ಬುಧವಾರ ರಾತ್ರಿ ಸುಮಾರು 11 ಗಂಟೆಯ ಹೊತ್ತಿಗೆ ಸಂತ್ರಸ್ತ ಬಾಲಕಿಯ ಮನೆಗೆ ಬೈಕ್​ನಲ್ಲಿ ಬಂದಿದ್ದಾರೆ. ಮೂವರು ಹೆಲ್ಮೆಟ್​ ಧರಿಸಿದ್ದರು. ಮನೆಯ ಮುಂಭಾಗದಲ್ಲಿ ನಿಂತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಶುಕ್ರವಾರ ಪೊಲೀಸರಿಗೆ ದೊರೆತಿದೆ.

ಇದನ್ನೂ ಓದಿ:ಮಗಳ ಮೇಲೆ ನಿರಂತರ ಅತ್ಯಾಚಾರ ಪ್ರಕರಣ: ತಂದೆಗೆ 20 ವರ್ಷ ಜೈಲು ಶಿಕ್ಷೆ

ಸಂತ್ರಸ್ತೆಗೆ ಪೊಲೀಸರು ರಕ್ಷಣೆ ಒದಗಿಸಿದ್ದು, ಸ್ಥಳದಲ್ಲಿ ತನಿಖೆ ಆರಂಭಿಸಿದ್ದಾರೆ. ಬಾಲಕಿಯ ಸಂಬಂಧಿಕರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಈ ವೇಳೆ ಕುಟುಂಬಸ್ಥರು ಸಂಪೂರ್ಣ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಗಂಗಾ ಘಾಟ್ ಕೊಟ್ವಾಲಿ ಉಸ್ತುವಾರಿ ಅವ್ನಿಶ್ ಕುಮಾರ್ ಸಿಂಗ್, ಈ ಘಟನೆ ಅನುಮಾನಾಸ್ಪದವಾಗಿದೆ. ತನಿಖೆ ನಡೆಸಲಾಗುತ್ತಿದೆ. ತನಿಖೆಯಲ್ಲಿ ಏನೆಲ್ಲಾ ಸತ್ಯಾಂಶ ಹೊರಬೀಳಲಿದೆಯೋ ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬಿಹಾರದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ:ಶೌಚಾಲಯಕ್ಕೆಂದು ತೆರಳುತ್ತಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿರುವ ಘಟನೆ ಇತ್ತೀಚೆಗೆ ಬಿಹಾರದಲ್ಲಿ ನಡೆದಿತ್ತು. ರಾತ್ರಿ ವೇಳೆ ಬಾಲಕಿ ಶೌಚಕ್ಕೆಂದು ಹೊರಬರುವುದನ್ನೇ ಕಾದು ಕುಳಿತಿದ್ದ ಐವರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದರು. ಅಷ್ಟೇ ಅಲ್ಲದೇ ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಬಾಲಕಿಗೆ ಕೀಟನಾಶಕಗಳನ್ನು ಕುಡಿಸಿದ್ದರು. ಆದರೆ ಬಾಲಕಿ ಹೇಗೋ ತನ್ನ ಮನೆಗೆ ತಲುಪಿ ಅಜ್ಜಿಗೆ ವಿಷಯ ತಿಳಿಸಿದ ಬಳಿಕ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೀಟನಾಶಕ ನೀಡಿದ್ದರಿಂದ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಸದ್ಯ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಚುರುಕಿನ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಅತ್ಯಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ: ಸಂತ್ರಸ್ತೆಯನ್ನು ಮನೆಗೆ ಬಿಟ್ಟು ಹೋಗಿದ್ದ ಆರೋಪಿಯ ವಿರುದ್ಧದ ಪ್ರಕರಣ ರದ್ದು

ABOUT THE AUTHOR

...view details