ಕರ್ನೂಲ್ (ಆಂಧ್ರಪ್ರದೇಶ): ತನ್ನ ಗೆಳತಿಯ ನಗ್ನ ವಿಡಿಯೋಗಳನ್ನು ಯುವಕನೊಬ್ಬ ಸೆಲ್ ಫೋನ್‌ನಲ್ಲಿ ಸಂಗ್ರಹಿಸಿಕೊಂಡಿದ್ದನು. ಈ ವಿಡಿಯೋಗಳನ್ನು ಆತನ ಸ್ನೇಹಿತ ಸಹ ತನ್ನ ಫೋನ್‌ಗೆ ಡೌನ್‌ಲೋಡ್ ಮಾಡಿಕೊಂಡು ಯುವತಿಗೆ ಬೆದರಿಕೆ ಹಾಕಿದ್ದು, ಕಿರುಕುಳದಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಮಂಡಲ್ನ ಬಾಲಜಿನಗರದಲ್ಲಿ ನಡೆದಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಕರ್ನೂಲ್ ಮಂಡಲ್ನ ಬಾಲಜಿನಗರದ ನಿವಾಸಿ ಎರುಕಾಲಿ ದಿನೇಶ್ ಪದವಿ ವ್ಯಾಸಂಗ ಮಾಡುತ್ತಿದ್ದು, ಈತ ಫ್ಲವರ್ ಡೆಕೊರೇಟರ್ ಮಲ್ಲೆಪೋಗು ಮುರಳಿಕೃಷ್ಣ (22) ಎಂಬ ಆಪ್ತ ಸ್ನೇಹಿತನನ್ನು ಹೊಂದಿದ್ದರು. ದಿನೇಶ್ ತನ್ನ ಫೋನ್‌ನಲ್ಲಿ ಪ್ರೀತಿಸಿದ ಹುಡುಗಿಯ ನಗ್ನ ವಿಡಿಯೋಗಳನ್ನು ಇಟ್ಟುಕೊಂಡಿದ್ದನು. ಈ ವಿಡಿಯೋಗಳನ್ನು ಮುರಳಿಕೃಷ್ಣ ಸಹ ನೋಡಿ, ತನ್ನ ಫೋನ್‌ಗೆ ಡೌನ್‌ಲೋಡ್ ಮಾಡಿಕೊಂಡಿದ್ದಾನೆ.
ನಂತರ, ದಿನೇಶ್ ಪ್ರೀತಿಸುತ್ತಿದ್ದ ಹುಡುಗಿಯನ್ನು ಕರೆದು ಆಕೆಯ ನಗ್ನ ವಿಡಿಯೋಗಳನ್ನು ತೋರಿಸಿ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಅಷ್ಟೇ ಅಲ್ಲದೆ, ವಿಡಿಯೋಗಳನ್ನು ಆಕೆಯ ಕುಟುಂಬ ಸದಸ್ಯರು ಮತ್ತು ಸಂಬಂಧಿಕರಿಗೆ ಕಳುಹಿಸುವಂತೆ ಬೆದರಿಕೆ ಹಾಕಿದ್ದಾನೆ. ಈತನ ಕಿರುಕುಳ ಸಹಿಸಲು ಸಾಧ್ಯವಾಗದ ಯುವತಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದಳು.
ಇದನ್ನೂ ಓದಿ:ಪ್ರತ್ಯೇಕ ಪ್ರಕರಣ: ಹಣಕ್ಕಾಗಿ ತಂದೆ ಕೊಲೆ ಮಾಡಿದ ಮಗ.. ಹೊಲಕ್ಕೆ ತಂದೆ ಭೇಟಿಗೆ ಹೋದ ಪುತ್ರ ಕಾಲುವೆಯಲ್ಲಿ ಬಿದ್ದು ಸಾವು