ಧೋಲ್ಪುರ್(ರಾಜಸ್ಥಾನ):ಮೊಬೈಲ್ ಖರೀದಿಸಲು ಕುಟುಂಬಸ್ಥರು 20 ಸಾವಿರ ರೂಪಾಯಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮನನೊಂದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಜಸ್ಥಾನದ ಧೋಲ್ಪುರ್ ಎಂಬಲ್ಲಿ ಈ ಘಟನೆ ನಡೆದಿದೆ.
ಸರ್ಮಥುರಾ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೌಲಿ ಗ್ರಾಮದಲ್ಲಿ 18 ವರ್ಷದ ಯುವಕ ಕಂಟ್ರಿ ಮೇಡ್ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಯುವಕ ಸಂಗ್ರಾಮ್ ಭಾರತೀಯ ಸೇನೆ ಸೇರಿಕೊಳ್ಳಲು ತಯಾರಿ ನಡೆಸುತ್ತಿದ್ದನಂತೆ. ಕೆಲವು ತಿಂಗಳ ಕಾಲ ಜೈಪುರದಲ್ಲಿ ತರಬೇತಿ ಪಡೆದುಕೊಂಡು ಮನೆಗೆ ಹಿಂತಿರುಗಿದ್ದ.