ಕರ್ನಾಟಕ

karnataka

ETV Bharat / bharat

ಅವಳು ನನ್ನವಳು, ಇಲ್ಲ ನನ್ನವಳು.. ಚಾಲೆಂಜ್​ಗೆ ಬಿದ್ದು ಬಾಲಕಿ ರೇಪ್​ ಮಾಡಿದ ಯುವಕ ಜೈಲುಪಾಲು!

ಅವಳಿಗಾಗಿ ಕಿತ್ತಾಡಿದ ಇಬ್ಬರು ಪ್ರೇಮಿಗಳು ಕೊನೆಗೆ ನನ್ನವಳು ಎಂದು ಸಾಬೀತು ಮಾಡಲು ಯುವಕನೊಬ್ಬ ಆಕೆಯನ್ನು ಅತ್ಯಾಚಾರ ಮಾಡಿದ್ದಲ್ಲದೇ, ವಿಡಿಯೋ ಸೆರೆ ಹಿಡಿದು ಈಗ ಜೈಲು ಪಾಲು ಆಗಿದ್ದಾನೆ.

youth-raped-and-filmed-video
ಚಾಲೆಂಜ್​ಗೆ ಬಿದ್ದು ಬಾಲಕಿ ರೇಪ್​ ಮಾಡಿದ ಯುವಕ ಜೈಲುಪಾಲು

By

Published : Sep 19, 2022, 10:01 PM IST

ಧನ್‌ಬಾದ್, ಜಾರ್ಖಂಡ್​​:ಅವಳು ನಿನ್ನ ಪ್ರೇಯಸಿಯಲ್ಲ ಅಂತ ಸ್ನೇಹಿತ ರೇಗಿಸ್ತಾನೆ. ಇವನೋ ಹಠಕ್ಕೆ ಬಿದ್ದವನಂತೆ ಅವಳು ನನ್ನ ಪ್ರೇಯಿಸಿಯೇ ಎಂದು ವಾದಿಸುತ್ತಾನೆ. ಅವಳು ನಿನ್ನನ್ನು, ನೀನು ಅವಳನ್ನು ಪ್ರೀತಿಸುತ್ತಿದ್ದರೆ ಸಾಕ್ಷಿ ಕೊಡು ಎಂದು ಆ ಸ್ನೇಹಿತ ಕೇಳ್ತಾನೆ. ಇವನು ಇಗೋ ಸಾಕ್ಷಿ ತರುವೆ ಎಂದು ಹೇಳಿ ಆಕೆಯನ್ನು ಪುಸಲಾಯಿಸಿ ದೈಹಿಕ ಸಂಬಂಧ ಹೊಂದಿದ್ದಲ್ಲದೇ, ಅದನ್ನು ವಿಡಿಯೋ ಮಾಡಿ ಆ ಸ್ನೇಹಿತನಿಗೆ ಕಳುಹಿಸುತ್ತಾನೆ.

ಇದು ಯಾವುದೋ ಸಿನಿಮಾದ ಎಳೆಯಲ್ಲ. ಜಾರ್ಖಂಡ್​ನ ಧನಬಾದ್​ನಲ್ಲಿ ನಡೆದ ನಿಜ ಘಟನೆ. ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ತನ್ನ ಪ್ರೇಮಿ ಎಂದು ಸಾಬೀತುಪಡಿಸಲು ಸ್ನೇಹಿತರೊಂದಿಗೆ ಸವಾಲು ಹಾಕಿ, ಆಕೆಯನ್ನು ಅತ್ಯಾಚಾರ ಮಾಡಿದ ಕೇಸಲ್ಲಿ ಜೈಲು ಕಂಬಿ ಎಣಿಸುತ್ತಿದ್ದಾನೆ.

ಪ್ರಕರಣವೇನು?:ಸ್ನೇಹಿತರು ಹರಟೆ ಹೊಡೆಯುತ್ತಿದ್ದಾಗ ಬಾಲಕಿಯ ಜೊತೆ ತಾನು ಪ್ರೇಮ ಸಂಬಂಧ ಹೊಂದಿದ್ದಾಗಿ ಒಬ್ಬ ಹೇಳಿದ್ದಾನೆ. ಇನ್ನೊಬ್ಬ ಅವಳು ನನ್ನ ಪ್ರೇಯಸಿ ಎಂದು ವಾದಿಸಿದ್ದಾನೆ. ಇಬ್ಬರ ಮಧ್ಯೆ ಅವಳಿಗಾಗಿ ಕಿತ್ತಾಟ ನಡೆದಿದೆ. ಈ ವೇಳೆ ಯುವಕ ಅವಳು ನನ್ನ ಪ್ರೇಯಸಿ ಎಂಬುದಕ್ಕೆ ಸಾಕ್ಷಿ ನೀಡುವೆ ಎಂದು ಚಾಲೆಂಜ್​ ಹಾಕಿದ್ದಾನೆ.

ಮರುದಿನ ಆ ಯುವಕ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಪೊದೆಗೆ ಕರೆದೊಯ್ದು ಆಕೆಯ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ತಾನು ಚಾಲೆಂಜ್​ ಹಾಕಿದ ಗೆಳೆಯನಿಗೆ ಸಾಕ್ಷಿಯಾಗಿ ನೀಡಲು ತನ್ನ ರಾಸಲೀಲೆಯನ್ನು ವಿಡಿಯೋ ಕೂಡ ಮಾಡಿದ್ದಾನೆ. ಅವಳು ನನ್ನವಳು ಎಂಬುದರ ಸಾಕ್ಷಿಯಾಗಿ ಯುವಕ ಆ ವಿಡಿಯೋವನ್ನು ಚಾಲೆಂಜ್​ ಹಾಕಿದ ಸ್ನೇಹಿತನಿಗೆ ಕಳುಹಿಸಿದ್ದಾನೆ.

ಇಲ್ಲೇ ನೋಡಿ ಯಡವಟ್ಟಾಗಿದ್ದು, ಈ ವಿಡಿಯೋವನ್ನು ನೋಡಿದ ಆ ಸ್ನೇಹಿತ ಇದನ್ನು ಅಪ್ರಾಪ್ತೆಯ ಕುಟುಂಬಸ್ಥರಿಗೆ ತೋರಿಸಿದ್ದಾನೆ. ಇದರಿಂದ ಕೆರಳಿದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿ ಯುವಕನ ಬಂಧನ:ವಿಷಯ ಗಮನಕ್ಕೆ ಬಂದ ನಂತರ ಸಂಬಂಧಿಕರು ಸ್ಥಳೀಯ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಬಾಲಕಿಯನ್ನು ಅತ್ಯಾಚಾರ ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಿಕೊಂಡು, ಯುವಕನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಸ್ನೇಹಿತನ ಮಾತಿಗೆ ಕಟ್ಟುಬಿದ್ದು ಪ್ರೀತಿಸುತ್ತಿದ್ದ ಹುಡುಗಿಯನ್ನು ರೇಪ್​ ಮಾಡಿ, ಅದನ್ನು ವಿಡಿಯೋ ಮಾಡಿ ಪ್ರೇಮಿ ಜೈಲುಗಳ ಹಿಂದೆ ಸರಳುಗಳನ್ನು ಎಣಿಸುವಂತಾಗಿದೆ.

ಓದಿ:ತಂದೆ ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ

ABOUT THE AUTHOR

...view details