ಕರ್ನಾಟಕ

karnataka

ETV Bharat / bharat

ಪ್ರಿಯತಮೆಗೆ ವಿಭಿನ್ನ ರೀತಿಯಲ್ಲಿ ಪ್ರಪೋಸ್.. ಹೋರ್ಡಿಂಗ್​​​ ಮೂಲಕ ಮದುವೆ ಪ್ರಸ್ತಾಪ ಮಾಡಿದ ಯುವಕ! - ಹೋರ್ಡಿಂಗ್​​​ ಮೂಲಕ ಮದುವೆ ಪ್ರಸ್ತಾಪ

ತಾನು ಮದುವೆ ಮಾಡಿಕೊಳ್ಳಲು ಮುಂದಾದ ಪ್ರಿಯತಮೆಗೆ ಯುವಕನೊಬ್ಬ ವಿಭಿನ್ನ ರೀತಿಯಲ್ಲಿ ಪ್ರಪೋಸ್ ಮಾಡಿದ್ದಾನೆ. ಅದು, ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

Unique Marriage Proposal
Unique Marriage Proposal

By

Published : May 19, 2022, 5:30 PM IST

ಕೊಲ್ಹಾಪುರ(ಮಹಾರಾಷ್ಟ್ರ):ತಾವು ಇಷ್ಟಪಡುವ ಪ್ರಿಯತಮೆಗೆ ರಿಂಗ್​, ಗುಲಾಬಿ ಸೇರಿ ವಿವಿಧ ವಸ್ತು ನೀಡಿ ಲವ್​​​ ಪ್ರಪೋಸ್ ಮಾಡುವುದು ಸರ್ವೆ ಸಾಮಾನ್ಯ. ಆದರೆ, ಕೊಲ್ಹಾಪುರದ ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿಗೆ ಎಲ್ಲರಿಗಿಂತಲೂ ವಿಭಿನ್ನವಾಗಿ ಪ್ರಪೋಸ್ ಮಾಡಿದ್ದಾನೆ. ಈ ಮೂಲಕ ಅನೇಕರ ಮನಗೆದ್ದಿದ್ದಾನೆ. ಬೃಹತ್​ ಆಕಾರದ ಹೋರ್ಡಿಂಗ್​ವೊಂದರಲ್ಲಿ 'ಮ್ಯಾರಿ ಮೀ ಉತ್ಕರ್ಷ' ಎಂದು ದಪ್ಪ ಅಕ್ಷರಗಳಲ್ಲಿ ಬರೆಯಿಸಿ, ಮದುವೆ ಪ್ರಸ್ತಾಪ ಮಾಡಿದ್ದಾನೆ. ಇದಕ್ಕೆ ಯುವತಿ ಸಹ ಒಪ್ಪಿಕೊಂಡಿದ್ದಾಳಂತೆ.

ಪ್ರಿಯತಮೆಗೆ ವಿಭಿನ್ನ ರೀತಿಯಲ್ಲಿ ಪ್ರಪೋಸ್

ಏನಿದು ಲವ್ ಕಹಾನಿ?:2017ರಿಂದಲೂ ಒಂದೇ ಕಾಲೇಜ್​​ನಲ್ಲಿ ಸೌರಭ್ ಮತ್ತು ಉತ್ಕರ್ಷ್​​ ಇಂಜಿನಿಯರಿಂಗ್​ ವ್ಯಾಸಂಗ ಮಾಡಿದ್ದಾರೆ. ಸಾಂಗ್ಲಿಯ ವಸಂತವಾಡ ಪಾಟೀಲ್ ಇನ್​​​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿಯ ಸಿವಿಲ್​ ವಿಭಾಗದಲ್ಲಿ ಇವರಿಬ್ಬರು ಓದಿದ್ದಾರೆ. ಇವರ ವ್ಯಾಸಂಗ ಮುಕ್ತಾಯದವರೆಗೂ ಉತ್ಕರ್ಷ್​-ಸೌರಭ್​ ಒಬ್ಬರಿಗೊಬ್ಬರು ಪರಿಚಯವಿರಲಿಲ್ಲ.

ಆದರೆ, ಇಂಜಿನಿಯರಿಂಗ್ ಮುಗಿಯುತ್ತಿದ್ದಂತೆ ಸೌರಭ್ ಮನೆಯಲ್ಲಿ ಮದುವೆ ಪ್ರಸ್ತಾಪ ಮಾಡಿದ್ದಾರೆ. ಈ ವೇಳೆ, ಕಾಲೇಜ್​​ನಲ್ಲಿ ಯಾರಾದರೂ ಇದ್ದರೆ ಹೇಳು, ನಾವು ಅವರ ಮುಂದೆ ಮದುವೆ ಪ್ರಸ್ತಾಪ ಇಡುತ್ತೇವೆಂದು ಕೇಳಿದ್ದಾರೆ.

ಹೋರ್ಡಿಂಗ್​​​ ಮೂಲಕ ಮದುವೆ ಪ್ರಸ್ತಾಪ ಮಾಡಿದ ಯುವಕ

ಇದನ್ನೂ ಓದಿ:75 ವರ್ಷಗಳ ಬಳಿಕ ಭಾರತದಲ್ಲಿರುವ ಕುಟುಂಬ ಸೇರಿಕೊಂಡ ಪಾಕ್​ ಮಹಿಳೆ

ತಕ್ಷಣವೇ, ಕಾಲೇಜ್​ನಲ್ಲಿ ಉತ್ಕರ್ಷ್ ಎಂಬ ಹುಡುಗಿ ಇದ್ದಾಳೆ ಎಂದು ಸೌರಭ್​ ತಿಳಿಸಿದ್ದಾನೆ. ಹುಡುಗಿಯ ಮನೆಯವರ ಬಳಿ ಸೌರಭ್ ತಂದೆ ಮದುವೆ ಪ್ರಸ್ತಾಪ ಇಟ್ಟಿದ್ದಾರೆ. ಕೆಲ ದಿನಗಳವರೆಗೆ ಮಾತುಕತೆ ಮುಂದುವರೆದಿದ್ದು, ಕೊನೆಯದಾಗಿ ಹುಡುಗಿ ಮನೆಯಿಂದ ಒಪ್ಪಿಗೆ ಬಂದಿದೆ.

ಆದರೆ, ಸೌರಭ್ ಮಾತ್ರ ವಿಶಿಷ್ಟ ರೀತಿಯಲ್ಲಿ ಲವ್​ ಪ್ರಪೋಸ್ ಮಾಡಲು ಮುಂದಾಗಿದ್ದಾನೆ. ಅದರಂತೆ ಸಾಂಗ್ಲಿ-ಕೊಲ್ಹಾಪುರ ಹೆದ್ದಾರಿಯಲ್ಲಿ ಬೃಹತ್ ಹೋರ್ಡಿಂಗ್ಸ್​ನಲ್ಲಿ 'MARRY ME UTKARSH' ಎಂದು ಬರೆಯಿಸಿ, ಲವ್​ ಪ್ರಸ್ತಾಪ ಮಾಡಿದ್ದಾನೆ. ಇದಕ್ಕೆ ಹುಡುಗಿ ಸಹ ಒಪ್ಪಿಗೆ ಸೂಚಿಸಿದ್ದಾಳೆ. ಇಬ್ಬರು ಹೋರ್ಡಿಂಗ್​ ಮುಂದೆ ನಿಂತು ಒಟ್ಟಿಗೆ ಫೋಟೋ ಕೂಡ ತೆಗೆಸಿಕೊಂಡಿದ್ದಾರೆ. ಈ ವಿಭಿನ್ನ ಪ್ರೇಮಕಥೆ ಇದೀಗ ಜಿಲ್ಲೆಯಾದ್ಯಂತ ಚರ್ಚೆಯಾಗ್ತಿದೆ.

ಒಂದೇ ಕಾಲೇಜ್​ನಲ್ಲಿ ವ್ಯಾಸಂಗ ಮಾಡಿದ್ದ ಸೌರಭ್​-ಉತ್ಕರ್ಷ್

ಉತ್ಕರ್ಷ್​-ಸೌರಭ್​ ಮೇ. 27ರಂದು ಸಪ್ತಪದಿ ತುಳಿಯಲು ಮುಂದಾಗಿದ್ದು, ಎರಡು ಕುಟುಂಬ ಖುದ್ದಾಗಿ ಮುಂದೆ ನಿಂತು ಇವರ ಮದುವೆ ಮಾಡಿಸುತ್ತಿದೆ.

ABOUT THE AUTHOR

...view details