ಕರ್ನಾಟಕ

karnataka

ETV Bharat / bharat

ಗ್ಲಾಸ್​ ಕೆಳಗೆ ಪಟಾಕಿ ಹಚ್ಚಿ ವಿಡಿಯೋ ರೆಕಾರ್ಡ್​.. ಯುವಕನ ಖಾಸಗಿ ಭಾಗಕ್ಕೆ ಚುಚ್ಚಿಕೊಂಡ ಗಾಜು! - ಯುವಕ ಖಾಸಗಿ ಭಾಗಕ್ಕೆ ತಗುಲಿ ರಕ್ತಸ್ರಾವ

ರಾಜಸ್ಥಾನದ ಭರತ್‌ಪುರದಲ್ಲಿ ಯುವಕನೊಬ್ಬ ಗ್ಲಾಸ್​ ಕೆಳಗೆ ಪಟಾಕಿ ಸಿಡಿಸುವುದನ್ನು ವಿಡಿಯೋ ಮಾಡುತ್ತಿದ್ದ. ಈ ವೇಳೆ ಗ್ಲಾಸ್​ ಚೂರು-ಚೂರು ಆಗಿದ್ದು, ಇದರ ಒಂದು ತುಕುಡಿ ಯುವಕನ ಖಾಸಗಿ ಭಾಗಕ್ಕೆ ತಗುಲಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.

Youth private part injured  injured during bomb blast for making video  firecracker blast for making video in Rajasthan  accident due to bursting of firecrackers  ಗ್ಲಾಸ್​ ಕೆಳಗೆ ಪಟಾಕಿ ಹಚ್ಚಿ ವಿಡಿಯೋ ರೆಕಾರ್ಡ್  ಯುವಕನ ಖಾಸಗಿ ಭಾಗಕ್ಕೆ ಚುಚ್ಚಿಕೊಂಡ ಗಾಜು  ಯುವಕನೊಬ್ಬ ಗ್ಲಾಸ್​ ಕೆಳಗೆ ಪಟಾಕಿ ಸಿಡಿಸುವುದನ್ನು ವಿಡಿಯೋ  ಯುವಕನ ಖಾಸಗಿ ಭಾಗ  ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ  ಯುವಕ ಖಾಸಗಿ ಭಾಗಕ್ಕೆ ತಗುಲಿ ರಕ್ತಸ್ರಾವ  ಯುವಕನ ಸ್ಥಿತಿ ಚಿಂತಾಜನಕ
ಗ್ಲಾಸ್​ ಕೆಳಗೆ ಪಟಾಕಿ ಹಚ್ಚಿ ವಿಡಿಯೋ ರೆಕಾರ್ಡ್

By

Published : Oct 29, 2022, 10:47 AM IST

ಭರತಪುರ, ರಾಜಸ್ಥಾನ:ವಿಡಿಯೋ ಮಾಡುವ ಭರದಲ್ಲಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಜಿಲ್ಲೆಯಿಂದ ಬೆಳಕಿಗೆ ಬಂದಿದೆ. ಗಾಯಗೊಂಡ ಯುವಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಡಿಯೋ ಮಾಡಲು ಯುವಕ ಗಾಜಿನೊಳಗೆ ಪಟಾಕಿಯಿಟ್ಟು ಸಿಡಿಸುತ್ತಿದ್ದ. ಈ ವೇಳೆ, ಗಾಜು ಸಿಡಿದು ಯುವಕನ ಖಾಸಗಿ ಭಾಗಕ್ಕೆ ಸಿಲುಕಿದೆ. ತೀವ್ರ ರಕ್ತಸ್ರಾವವಾಗಿ ಯುವಕ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ ಎಂದು ಹೇಳಲಾಗಿದೆ. ಘಟನೆಯ ನಂತರ ಅವರನ್ನು ಕುಟುಂಬ ಸದಸ್ಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುವಕನ ಸ್ಥಿತಿ ಚಿಂತಾಜನಕವಾಗಿದೆ.

ದೊರೆತ ಮಾಹಿತಿಯ ಪ್ರಕಾರ, ಶುಕ್ರವಾರ ತಡರಾತ್ರಿ ಭರತ್‌ಪುರದ ಹಲೈನಾ ಪಟ್ಟಣದ ಇಂದಿರಾ ಕಾಲೋನಿಯಲ್ಲಿ ಕೆಲವು ಯುವಕರು ಪಾತ್ರೆಯೊಳಗೆ ಪಟಾಕಿಗಳನ್ನಿಟ್ಟು ಸಿಡಿಸುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದ 20 ವರ್ಷದ ಬಿಟ್ಟು ಎಂಬಾತ ಗಾಜಿನೊಳಗೆ ಪಟಾಕಿಗಳನ್ನಿಟ್ಟು ಸಿಡಿಸುತ್ತಿದ್ದನು. ಬಳಿಕ ಅದನ್ನು ಬಿಟ್ಟು ವಿಡಿಯೋ ಮಾಡಲು ಗ್ಲಾಸ್ ಅಡಿ ಪಟಾಕಿಗಳನ್ನು ಸಿಡಿಸಲು ಮುಂದಾಗಿದ್ದ.

ಗ್ಲಾಸ್​ ಕೆಳಗೆ ಪಟಾಕಿ ಸಿಡಿಸಿದ ಬಳಿಕ ಗಾಜು ಛಿದ್ರಗೊಂಡು ಅದರ ಒಂದು ಭಾಗ ಯುವಕನ ಖಾಸಗಿ ಭಾಗಕ್ಕೆ ತಗುಲಿ ರಕ್ತಸ್ರಾವವಾಗಲು ಪ್ರಾರಂಭಿಸಿದ್ದು, ಸ್ಥಳದಲ್ಲೇ ಯುವಕ ಕುಸಿದು ಬಿದ್ದಿದ್ದಾನೆ. ಸ್ಥಳೀಯರು ಮತ್ತು ಪೋಷಕರು ಯುವಕನನ್ನು ಆಸ್ಪತ್ರೆಗೆ ಕರೆದೊಯ್ದರು. ಮಾಹಿತಿ ಪಡೆದು ಅಕ್ಕಪಕ್ಕದಲ್ಲಿದ್ದ ವೈದ್ಯರು ಗಾಯಗೊಂಡಿದ್ದ ಯುವಕನನ್ನು ನೋಡಲು ಬಂದರು. ಸದ್ಯ ಯುವಕನ ಸ್ಥಿತಿ ಚಿಂತಾಜನಕವಾಗಿದೆ.

ಓದಿ:ತುಮಕೂರು: ಚಡ್ಡಿಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದ ಬಾಲಕನ ಗುಪ್ತಾಂಗ ಸುಟ್ಟ ಶಿಕ್ಷಕಿ!

ABOUT THE AUTHOR

...view details