ಕರ್ನಾಟಕ

karnataka

ETV Bharat / bharat

ಕೇವಲ 200 ರೂಪಾಯಿಗಾಗಿ ಯುವಕನ ಕೊಲೆ! - ಆನಂದ್ ಪರ್ವತ್

ಪ್ರಕರಣವೊಂದರಲ್ಲಿ ಸೆರೆವಾಸ ಅನುಭವಿಸಿ ಹೊರಬಂದಿದ್ದ ವ್ಯಕ್ತಿಯನ್ನು 200 ರೂಪಾಯಿ ವಿಚಾರಕ್ಕೆ ಯುವಕನೊಬ್ಬ ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ಕೇವಲ 200 ರೂಪಾಯಿಗಾಗಿ ಯುವಕನ ಕೊಲೆ
ಕೇವಲ 200 ರೂಪಾಯಿಗಾಗಿ ಯುವಕನ ಕೊಲೆ

By

Published : Oct 17, 2021, 1:29 PM IST

ನವದೆಹಲಿ:ಕೇವಲ 200 ರೂಪಾಯಿಗಾಗಿ ಯುವಕನನ್ನು ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದು, ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ದೆಹಲಿಯ ಆನಂದ್ ಪರ್ವತ್ ಪ್ರದೇಶದ ನಿವಾಸಿಗಳಾದ ಸೋನು (24) ಮತ್ತು ವಿವೇಕ್ ಎಂಬ ಯುವಕರ ನಡುವೆ ಈ ಹಿಂದೆ ಗಲಾಟೆಯಾಗಿತ್ತು. ಪ್ರಕರಣವೊಂದರಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಸೋನು ಮೊನ್ನೆ ಶುಕ್ರವಾರವಷ್ಟೇ ಜೈಲಿನಿಂದ ಹೊರಬಂದಿದ್ದ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮದುವೆಯಾದ್ರೂ ಇನಿಯನ ತೆಕ್ಕೆಯಲ್ಲಿ ಮಹಿಳೆ: ಬೆಂಗಳೂರಲ್ಲಿ ಬಿತ್ತು ಹೆಣ.. ಠಾಣೆಗೆ ಶವ ತಂದು ಆರೋಪಿಗಳು ಶರಣು

ನಿನ್ನೆ ಆನಂದ್ ಪರ್ವತ್ ಪ್ರದೇಶದಲ್ಲಿರುವ ರಾಮಲೀಲಾ ಮೈದಾನದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಸೋನು ಪತ್ತೆಯಾಗಿದ್ದನು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದೊಯ್ದರು. ಆದರೆ ಸೋನು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ 200 ರೂಪಾಯಿ ವಿವಾದದಲ್ಲಿ ಸೋನು ಮತ್ತು ವಿವೇಕ್ ನಡುವೆ ಜಗಳವಾಗಿದ್ದು, ಈ ವೇಳೆ ಸೋನುಗೆ ವಿವೇಕ್​ ಚಾಕುವಿನಿಂದ ಇರಿದು ಕೊಂದಿರುವುದು ಬೆಳಕಿಗೆ ಬಂದಿತ್ತು. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ವಿವೇಕ್​ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ABOUT THE AUTHOR

...view details