ಕರ್ನಾಟಕ

karnataka

ETV Bharat / bharat

ಶಿವ ದೇವಸ್ಥಾನದ ವಿಚಾರವಾಗಿ ನಡೀತು ಘರ್ಷಣೆ.. ಉತ್ಸವದ ವೇಳೆ ಯುವಕನ ಬರ್ಬರ ಹತ್ಯೆ - ಕೇರಳದಲ್ಲಿ ಯುವಕನ ಹತ್ಯೆ

ದೇವಸ್ಥಾನದ ಉತ್ಸವದ ವೇಳೆ ಯುವಕನೋರ್ವನ ಹತ್ಯೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ..

Youth murdered following clash at temple
Youth murdered following clash at temple

By

Published : Apr 9, 2022, 8:47 PM IST

ಕೊಲ್ಲಂ(ಕೇರಳ) :ದೇವರನಾಡು ಕೇರಳದ ಕೊಕ್ಕಡ್​ದಲ್ಲಿರುವ ಶಿವನ ದೇವಸ್ಥಾನದ ವಿಚಾರವಾಗಿ ನಡೆದ ಘರ್ಷಣೆ ಕೊಲೆಯಲ್ಲಿ ಅಂತ್ಯವಾಗಿದೆ. ಶುಕ್ರವಾರ ರಾತ್ರಿ ನಡೆದ ಉತ್ಸವದ ವೇಳೆ ಯುವಕನೋರ್ವನ ಹತ್ಯೆ ಮಾಡಲಾಗಿದೆ. ಮೃತ ಯುವಕನನ್ನ ಯುವ ಮೋರ್ಚಾದ ಅಧ್ಯಕ್ಷ ಮನೋಜ್​ ಎಂದು ಗುರುತಿಸಲಾಗಿದೆ.

ಅರೆಪ್ರಜ್ಞಾವಸ್ಥೆಯಲ್ಲಿ ರಸ್ತೆ ಬದಿಯಲ್ಲಿ ಬಿದ್ದ ಮನೋಜ್​ನನ್ನ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆತ ಸಾವನ್ನಪ್ಪಿದ್ದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ. ಮನೋಜ್ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿಗಳು ಕುತ್ತಿಗೆ ಭಾಗ ಕೊಯ್ದಿದ್ದು, ಕೈ-ಕಾಲಿನ ಬೆರಳು ಕತ್ತರಿಸಿದ್ದಾರೆಂದು ತಿಳಿದು ಬಂದಿದೆ.

ಇದನ್ನೂ ಓದಿ:ನಡು ರಸ್ತೆಯಲ್ಲೇ ಪೊಲೀಸ್​ ಕಾನ್ಸ್​ಟೇಬಲ್​ ಮೇಲೆ ಅಮಾನುಷ ಹಲ್ಲೆ.. ವಿಡಿಯೋ ವೈರಲ್​!

ಮನೋಜ್ ಸಾವಿನ ಹಿಂದೆ ಕಾಂಗ್ರೆಸ್ ಪಕ್ಷದವರ ಕೈವಾಡವಿದೆ ಎಂದು ಸ್ಥಳೀಯ ಶಾಸಕ ಕೆ.ಬಿ ಗಣೇಶ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಈ ಆರೋಪ ತಳ್ಳಿ ಹಾಕಿರುವ ಕಾಂಗ್ರೆಸ್​, ಹತ್ಯೆಗೂ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿರುವ ಪೊಲೀಸರು ಆದಷ್ಟು ಬೇಗ ಆರೋಪಿಗಳ ಬಂಧನ ಮಾಡುವ ಭರವಸೆ ನೀಡಿದ್ದಾರೆ.

ABOUT THE AUTHOR

...view details