ಮಯೂರ್‌ಭಂಜ್(ಒಡಿಶಾ): 100 ರೂಪಾಯಿ ನೀಡಲು ನಿರಾಕರಿಸಿದ್ದಕ್ಕೆ ಯುವಕನೋರ್ವ ಹೆತ್ತ ತಾಯಿಯನ್ನು ಹೊಡೆದು ಕೊಂದಿರುವ ಘಟನೆ ಒಡಿಶಾದ ಮಯೂರ್ಭಂಜ್ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಯ ಬಂಧನ ಮಾಡಿದ್ದಾರೆ.
ಮಯೂರ್ಭಂಜ್ನ ಜಶಿಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಹಟಪಾಡಿಯಾ ಸಾಹಿ ಎಂಬಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಶಾಲಂಡಿ ನಾಯಕ ಎಂದು ಗುರುತಿಸಲಾಗಿದೆ. ಔಷಧಿ ಖರೀದಿ ಮಾಡಲು ಹಣ ನೀಡುವಂತೆ ತಾಯಿ ಬಳಿ ಪುತ್ರ ಸರೋಜ್ ನಾಯಕ್ ಎಂಬಾತ ಕೇಳಿಕೊಂಡಿದ್ದನೆಂದು ತಿಳಿದು ಬಂದಿದೆ.