ಪಾಲಕ್ಕಾಡ್, ಕೇರಳ :ಬೈಕ್ ಕಳ್ಳತನ ಮಾಡಿದ ಆರೋಪದಲ್ಲಿ ಯುವಕನೊಬ್ಬನನ್ನು ಗುಂಪೊಂದು ಹೊಡೆದು ಕೊಂದಿರುವ ಘಟನೆ ಕೇರಳದ ಪಾಲಕ್ಕಾಡ್ನಲ್ಲಿ ನಡೆದಿದೆ. ಮಲಂಪುಳ ಕಡುಕ್ಕಂಕುನ್ನಂ ಮೂಲದ 27 ವರ್ಷದ ರಫೀಕ್ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಒಲವಕ್ಕೋಡ್ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಒಲವಕ್ಕೋಡ್ನ ಬಾರ್ನ ಮುಂದೆ ನಿಲ್ಲಿಸಿದ್ದ ಬೈಕ್ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಸಿಸಿಟಿವಿ ಪರಿಶೀಲಿಸಿದಾಗ ಯುವಕನೊಬ್ಬ ಬೈಕ್ ಕದ್ದಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ವಿಚಾರಿಸುವು ವೇಳೆ, ಗುಂಪೊಂದು ಗಲಾಟೆ ನಡೆಸಿದೆ. ಈ ವೇಳೆ ಗಲಾಟೆ ಹಿಂಸಾಚಾರಕ್ಕೆ ತಲುಪಿದ್ದು, ರಫೀಕ್ನನ್ನು ಆ ಜನರ ಗುಂಪು ಹೊಡೆದು ಕೊಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.