ಕರ್ನಾಟಕ

karnataka

ETV Bharat / bharat

ತಾಯಿಗೆ ಅವಮಾನ ಮಾಡಿದ್ದಕ್ಕೆ ಬಾಲಕನ ಹತ್ಯೆ ಮಾಡಿದ ಯುವಕ.. ಏನಿದು ಘಟನೆ..?

ಸೂರಜ್ ತಾಯಿಯೊಂದಿಗೆ ಮಾಂಗ್ಲುಪಾಂಡೆ ಚಿಕ್ಕಪ್ಪ ಕೆಟ್ಟದ್ದಾಗಿ ವರ್ತಿಸಿ ಅವಮಾನ ಮಾಡಿದ್ದನಂತೆ. ಇದರಿಂದ ಕುಪಿತಗೊಂಡ ಸೂರಜ್, ಆರೋಪಿಯ ಅಣ್ಣನ ಮಗನನ್ನು ಕಿಡ್ನ್ಯಾಪ್ ಮಾಡಿದ್ದಾನೆ ಎಂದು ಎಂಐಡಿಸಿ ಠಾಣೆಯ ಪೊಲೀಸ್​​ ಅಧಿಕಾರಿ ತಿಳಿಸಿದ್ದಾರೆ.

ತಾಯಿಗೆ ಅವಮಾನ ಮಾಡಿದ್ದಕ್ಕೆ ಬಾಲಕನ ಹತ್ಯೆಗೈದ ಯುವಕ
ತಾಯಿಗೆ ಅವಮಾನ ಮಾಡಿದ್ದಕ್ಕೆ ಬಾಲಕನ ಹತ್ಯೆಗೈದ ಯುವಕ

By

Published : Jun 12, 2021, 3:16 PM IST

ಮುಂಬೈ: ತನ್ನ ತಾಯಿಗೆ ವ್ಯಕ್ತಿಯೊಬ್ಬ ಅವಮಾನ ಮಾಡಿದ್ದಕ್ಕಾಗಿ, ಯುವಕನೊಬ್ಬ 15 ವರ್ಷದ ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಸೂರಜ್​ ಸಾಹು ಎಂಬಾತ 15 ವರ್ಷದ ಮಾಂಗ್ಲುಪಾಂಡೆಯನ್ನು ಅಪಹರಿಸಿ ಕಲ್ಲಿನಿಂದ ಜಜ್ಜಿ ಹತ್ಯೆಗೈದಿದ್ದಾನೆ.

ಸೂರಜ್ ತಾಯಿಯೊಂದಿಗೆ ಮಾಂಗ್ಲುಪಾಂಡೆ ಚಿಕ್ಕಪ್ಪ ಕೆಟ್ಟದ್ದಾಗಿ ವರ್ತಿಸಿ ಅವಮಾನ ಮಾಡಿದ್ದನಂತೆ. ಇದರಿಂದ ಕುಪಿತಗೊಂಡ ಸೂರಜ್, ಆರೋಪಿಯ ಅಣ್ಣನ ಮಗನನ್ನು ಕಿಡ್ನ್ಯಾಪ್ ಮಾಡಿದ್ದಾನೆ ಎಂದು ಎಂಐಡಿಸಿ ಠಾಣೆಯ ಪೊಲೀಸ್​​ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ:ಶ್ರೀಲಂಕಾ ಪ್ರಜೆಗಳ ಬಂಧನ ಕೇಸ್​: ತನಿಖೆಗಾಗಿ ಮಂಗಳೂರಿಗೆ ಆಗಮಿಸಿದ ತಮಿಳುನಾಡು ಪೊಲೀಸ್ ತಂಡ

ಆರೋಪಿಗಳು ಮಾಂಗ್ಲುವನ್ನು ಬಿಡಬೇಕಾದರೆ, ಅವನ ಚಿಕ್ಕಪ್ಪನ ತಲೆ ಕಡಿದು ವಾಟ್ಸ್​ಆ್ಯಪ್​​ನಲ್ಲಿ ಫೋಟೋ ಕಳಿಸಬೇಕು. ಇಲ್ಲವಾದಲ್ಲಿ, ನಿಮ್ಮ ಮಗನನ್ನು ಕೊಲೆ ಮಾಡುತ್ತೇವೆ ಎಂದು ಬಾಲಕನ ಪೋಷಕರಿಗೆ ಬೆದರಿಕೆ ಹಾಕಿದ್ದರಂತೆ. ಬೆದರಿಕೆ ಹಾಕಿದ ಕೆಲವೇ ನಿಮಿಷಗಳಲ್ಲಿ ಕಿಡಿಗೇಡಿಗಳು ಮಾಂಗ್ಲುವನ್ನು ಹತ್ಯೆ ಮಾಡಿದ್ದರು.

ABOUT THE AUTHOR

...view details