ಕರ್ನಾಟಕ

karnataka

ETV Bharat / bharat

ತಾನು ಪ್ರೀತಿಸುತ್ತಿದ್ದ ಯುವತಿಗೆ ಚಾಕುವಿನಿಂದ ಚುಚ್ಚಿದ.. ಬೆಂಕಿ ಹಚ್ಚಿ ಆತ್ಮಹತ್ಯೆಗೆ ಶರಣಾದ ಭಗ್ನ ಪ್ರೇಮಿ - ಯುವತಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ ಸಾವು

ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿಗೆ ಚಾಕುವಿನಿಂದ ಚುಚ್ಚಿ, ಬೆಂಕಿ ಹಚ್ಚಿ ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದ ಕೋಯಿಕ್ಕೋಡ್​ನಲ್ಲಿ ನಡೆದಿದೆ.

Youth kills himself after setting woman on fire  fire in front of Gram Panchayat Kozhikode  man dies after killing woman in kerala  man and woman from Thikkodi dead after sets on fire  ಯುವತಿಗೆ ಬೆಂಕಿ ಹಚ್ಚಿದ ಯುವಕ  ಕೇರಳದಲ್ಲಿ ಯುವತಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ಯುವಕ  ಯುವತಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ ಸಾವು  ಕೇರಳ ಅಪರಾಧ ಸುದ್ದಿ
ಬೆಂಕಿ ಹಚ್ಚಿ ಆತ್ಮಹತ್ಯೆಗೆ ಶರಣಾದ ಭಗ್ನ ಪ್ರೇಮಿ

By

Published : Dec 18, 2021, 2:04 PM IST

ಕೋಯಿಕ್ಕೋಡ್: ನಿನ್ನೆ ತಿಕ್ಕೋಡಿಯಲ್ಲಿ ಯುವತಿಗೆ ಚಾಕು ಚುಚ್ಚಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಬಳಿಕ ತಾನೂ ಚಾಕುವಿನಿಂದ ಚುಚ್ಚಿಕೊಂಡು ಬೆಂಕಿ ಹಚ್ಚಿಕೊಂಡಿದ್ದ ಭಗ್ನ ಪ್ರೇಮಿ ನಂದಕುಮಾರ್ (31) ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಏನಿದು ಪ್ರಕರಣ:ತಿಕ್ಕೋಡಿಯ ಪಳ್ಳಿತಾಳಂ ನಿವಾಸಿ ಮೋಹನನ್ ಅವರ ಪುತ್ರ ನಂದಕುಮಾರ್​ ಕೃಷ್ಣಪ್ರಿಯಾ ಎಂಬ ಯುವತಿಯನ್ನು ಪ್ರೀತಿಸುವಂತೆ ಕಾಡುತ್ತಿದ್ದನು. ಆದ್ರೆ ಕೃಷ್ಣಪ್ರಿಯಾ ನಂದಕುಮಾರ್​ ಪ್ರೀತಿಯನ್ನು ನಿರಾಕರಿಸುತ್ತಲೇ ಬಂದಿದ್ದಾಳೆ ಎಂದು ಯುವತಿ ಸಂಬಂಧಿಕರು ಹೇಳಿದ್ದಾರೆ.

ಓದಿ:ಭಾರತದ ಲಿಂಗಾನುಪಾತದಲ್ಲಿ ಭಾರಿ ಸುಧಾರಣೆ: ಪುರುಷರಿಗಿಂತ ಹೆಚ್ಚಾಯ್ತು ಮಹಿಳೆಯರ ಸಂಖ್ಯೆ

ಬಿಎಸ್​ಸಿ ಕಂಪ್ಯೂಟರ್ ಸೈನ್ಸ್​​​ ಪದವಿ ಮುಗಿಸಿರುವ ಕೃಷ್ಣಾಪ್ರಿಯಾಗೆ ಕಳೆದ ನಾಲ್ಕು ದಿನಗಳ ಹಿಂದೆ ತಿಕ್ಕೋಡಿ ಪಂಚಾಯತ್​ ಕಚೇರಿಯಲ್ಲಿ ಕೆಲಸ ಸಿಕ್ಕಿದೆ. ಶುಕ್ರವಾರ ಬೆಳಗ್ಗೆ ಕೃಷ್ಣಪ್ರಿಯಾ ಕೆಲಸಕ್ಕೆ ಹೋಗಿದ್ದಾಳೆ. 9.50 ಸುಮಾರಿಗೆ ನಂದಕುಮಾರ್​ ಪಂಚಾಯತ್​ ಕಚೇರಿಗೆ ತೆರಳಿದ್ದಾನೆ. ಮತ್ತೆ ಅವರ ಮಧ್ಯೆ ಜಗಳವಾಗಿದೆ. ಕೋಪಗೊಂಡ ನಂದು ಕೃಷ್ಣಪ್ರಿಯಾಗೆ ಮೊದಲು ಚಾಕುವಿನಿಂದ ಚುಚ್ಚಿದ್ದಾನೆ. ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಇನ್ನು ತಾನು ತಂದಿದ್ದ ಚಾಕುವಿನಿಂದ ತಾನು ಚುಚ್ಚಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ನಂದಕುಮಾರ್​ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಓದಿ:ಮುಂದುವರೆದ ಎಂಇಎಸ್‌-ಶಿವಸೇನೆ ಪುಂಡಾಟ: ಕೊಲ್ಹಾಪುರದಲ್ಲಿ ಕನ್ನಡಿಗರ ಅಂಗಡಿಗಳು ಬಂದ್

ಕಿರುಚಾಟದ ಶಬ್ದ ಕೇಳಿದ ಸ್ಥಳೀಯರು ಪಂಚಾಯತ್​ ಕಚೇರಿಗೆ ತೆರಳಿದ್ದಾರೆ. ಬಳಿಕ ಇಬ್ಬರಿಗೆ ಹೊತ್ತಿದ್ದ ಬೆಂಕಿಯನ್ನು ನಂದಿಸಿದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಕೃಷ್ಣಪ್ರಿಯಾ ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ 5 ಗಂಟೆ ಸುಮಾರು ಮೃತಪಟ್ಟಿದ್ದಾಳೆ. ಶೇ.99ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದ ನಂದು ಅನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ನಂದು ಸಾವನ್ನಪ್ಪಿದ್ದಾನೆ.

ಬೆಂಕಿ ಹಚ್ಚುವ ಮುನ್ನವೇ ನಂದು ಚಾಕುವಿನಿಂದ ಇರಿದುಕೊಂಡಿರುವುದಾಗಿ ಮತ್ತು ಕೃಷ್ಣಪ್ರಿಯಾಗೆ ಚಾಕುವಿನಿಂದ ದಾಳಿ ಮಾಡಿರುವುದಾಗಿ ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ್ದನು. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details