ಕರ್ನಾಟಕ

karnataka

ETV Bharat / bharat

ಬಾಲ್ಯದಲ್ಲೇ ಪ್ರೀತಿ, ಮದುವೆ, ಮಗು, ಶಿಕ್ಷೆ.. 20ನೇ ವಯಸ್ಸಿನ ನರ್ಸ್​ ಬದುಕಿಗೆ ಕೊಳ್ಳಿ ಇಟ್ಟ ಯುವಕ! - ಫೌಸಿಯಾ ಎಂಬ 20 ವರ್ಷದ ವಿದ್ಯಾರ್ಥಿನಿ

Chennai Nurse Murder: ಕೇರಳ ಮೂಲದ ಜೋಡಿಯೊಂದು ಜಗಳಕ್ಕೆ ಇಳಿದಿದ್ದು, ಗೆಳತಿಯನ್ನು ಕೊಂದು ಫೋಟೋ ವಾಟ್ಸ್​ಆ್ಯಪ್​​​ ಸ್ಟೇಟಸ್​ನಲ್ಲಿ ಹಾಕಿದ್ದ ಯುವಕನನ್ನು ತಮಿಳುನಾಡಿನ ಪೊಲೀಸರು ಬಂಧಿಸಿದ್ದಾರೆ.

Chennai Nurse Murder  Youth killed Girlfriend  Posts Shocking Photo  Photo on WhatsApp Status  20ನೇ ವಯಸ್ಸಿನ ನರ್ಸ್​ ಬದುಕಿಗೆ ಕೊಳ್ಳಿ  ಬಾಲ್ಯದಲ್ಲೇ ಪ್ರೀತಿ  ಕೇರಳ ಮೂಲದ ಜೋಡಿ  ಗೆಳತಿಯನ್ನು ಕೊಂದು ಫೋಟೋ  ದುರಂತ ಘಟನೆ  ಪೊಲೀಸ್​ ಠಾಣೆ ವ್ಯಾಪ್ತಿಯ ಲಾಡ್ಜ್  ಫೌಸಿಯಾ ಎಂಬ 20 ವರ್ಷದ ವಿದ್ಯಾರ್ಥಿನಿ  ಕೊಲ್ಲಂ ಪ್ರದೇಶದ ಆಶಿಕ್
20ನೇ ವಯಸ್ಸಿನ ನರ್ಸ್​ ಬದುಕಿಗೆ ಕೊಳ್ಳಿ ಇಟ್ಟ ಯುವಕ!

By ETV Bharat Karnataka Team

Published : Dec 2, 2023, 3:36 PM IST

ಚೆನ್ನೈ, ತಮಿಳುನಾಡು:ನಗರದಲ್ಲಿ ದುರಂತ ಘಟನೆಯೊಂದು ನಡೆದಿದೆ. ಕ್ರೊಂಬೆಟ್ಟೈನ ಪೊಲೀಸ್​ ಠಾಣೆ ವ್ಯಾಪ್ತಿಯ ಲಾಡ್ಜ್​ವೊಂದರಲ್ಲಿ ಭೀಕರ ಹತ್ಯೆ ನಡೆದಿದೆ. ಐದು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದ ಹೆಂಡ್ತಿಯನ್ನೇ ಗಂಡ ಕೊಲೆ ಮಾಡಿ ವಾಟ್ಸ್​ಆ್ಯಪ್​ ​ಸ್ಟೇಟಸ್​ ಹಾಕಿದ್ದಾನೆ.

20ನೇ ವಯಸ್ಸಿನ ನರ್ಸ್​ ಬದುಕಿಗೆ ಕೊಳ್ಳಿ ಇಟ್ಟ ಯುವಕ!

ದೂರಿನಲ್ಲಿ ಉಲ್ಲೇಖಿಸಿರುವ ಪ್ರಕಾರ: ಫೌಸಿಯಾ ಎಂಬ 20 ವರ್ಷದ ವಿದ್ಯಾರ್ಥಿನಿ ಕೇರಳದ ಕೊಲ್ಲಂ ಮೂಲದವಳು. ಚೆನ್ನೈನ ಕ್ರೊಂಬೆಟ್ಟೈನಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ 2ನೇ ವರ್ಷದ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದು, ಸಮೀಪದ ಖಾಸಗಿ ಹಾಸ್ಟೆಲ್‌ನಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.

ವಿದ್ಯಾರ್ಥಿನಿ ತನ್ನ ಹುಟ್ಟೂರು ಕೊಲ್ಲಂ ಪ್ರದೇಶದ ಆಶಿಕ್ (20) ಎಂಬ ಯುವಕನನ್ನು ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಇಬ್ಬರೂ ಮನೆಯವರಿಗೆ ತಿಳಿಯದಂತೆ ಹೋಟೆಲ್‌ಗಳಲ್ಲಿ ಭೇಟಿಯಾಗುತ್ತಿದ್ದರಂತೆ. ಈ ವೇಳೆ ವಿದ್ಯಾರ್ಥಿನಿ ಕಳೆದ 3 ದಿನಗಳಿಂದ ಕಾಲೇಜಿಗೆ ಬಾರದೇ ಕ್ರೊಂಬೆಟ್ಟೈನ ಖಾಸಗಿ ಹೊಟೇಲ್‌ನಲ್ಲಿ ಪ್ರಿಯಕರನೊಂದಿಗೆ ಒಂಟಿಯಾಗಿದ್ದಳು ಎನ್ನಲಾಗಿದೆ. ಆಗ ಆಗಾಗ ಆಗುವ ಸಮಸ್ಯೆಯಂತೆ ನಿನ್ನೆಯೂ ಇಬ್ಬರ ನಡುವೆ ಸಮಸ್ಯೆ ಉಂಟಾಗಿ ವಾಗ್ವಾದ ನಡೆದಿದೆ. ಒಂದು ಹಂತದಲ್ಲಿ ಜಗಳ ವಿಕೋಪಕ್ಕೆ ತಿರುಗಿದ್ದು, ಕುಪಿತಗೊಂಡ ಪ್ರೇಮಿ ಏಕಾಏಕಿ ತನ್ನ ಗೆಳತಿಯ ಮೇಲೆ ಹಲ್ಲೆ ನಡೆಸಿದ್ದಾನೆ.

ಇದರಿಂದ ಕುಪಿತಗೊಂಡ ವಿದ್ಯಾರ್ಥಿನಿ ಪ್ರತಿದಾಳಿ ನಡೆಸಿದ್ದು, ಬಳಿಕ ಇಬ್ಬರ ನಡುವಿನ ಮಾರಾಮಾರಿ ನಡೆದಿದೆ. ಈ ವೇಳೆ ಯುವಕ ಆಕೆ ಹಾಕಿದ್ದ ಟೀ ಶರ್ಟ್​ನಿಂದ ಆಕೆಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ಆ ಬಳಿಕ ಯುವಕ ತನ್ನ ಸೆಲ್‌ಫೋನ್‌ನಲ್ಲಿ ಮೃತ ವಿದ್ಯಾರ್ಥಿನಿಯ ಫೋಟೋ ತೆಗೆದು ವಾಟ್ಸ್​ಆ್ಯಪ್​ ಸ್ಟೇಟಸ್ ಹಾಕಿದ್ದಾನೆ. ಅದನ್ನು ನೋಡಿ ಬೆಚ್ಚಿಬಿದ್ದ ವಿದ್ಯಾರ್ಥಿನಿಯ ಸ್ನೇಹಿತರು ನೇರವಾಗಿ ಕ್ರೊಂಬೆಟ್ಟೈನ ಹೋಟೆಲ್ ಗೆ ತೆರಳಿದ್ದಾರೆ. ವಿದ್ಯಾರ್ಥಿನಿ ಮೃತಪಟ್ಟಿರುವುದನ್ನು ಕಂಡು ಕೂಡಲೇ ಕ್ರೊಂಬೆಟ್ಟೈನ ಠಾಣೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ವಿದ್ಯಾರ್ಥಿನಿಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆ ನಂತರ ಪೊಲೀಸರು ಯುವಕನನ್ನು ಬಂಧಿಸಿ ವಿಚಾರಣೆಗಾಗಿ ಠಾಣೆಯಲ್ಲಿ ಇರಿಸಿದ್ದಾರೆ.

ಪ್ರಕರಣದ ಬಗ್ಗೆ ಪೊಲೀಸರು ಹೇಳಿದ್ದಿಷ್ಟು: "ಇಬ್ಬರು 16 ವರ್ಷದವರಾಗಿದ್ದಾಗ ಪ್ರೀತಿಸಿ ಮದುವೆಯಾಗಿದ್ದರು. ಆಗ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದು, ಮಗುವಿಗೆ ಜನ್ಮ ನೀಡಿದ್ದಾಳೆ. ಆ ಮಗುವನ್ನು ಕರ್ನಾಟಕ ರಾಜ್ಯದ ಆಶ್ರಮದಲ್ಲಿ ಬಿಟ್ಟು, 16 ನೇ ವಯಸ್ಸಿನಲ್ಲಿ ಮದುವೆಯಾದ ಕಾರಣ ಕೇರಳ ರಾಜ್ಯ ಪೊಲೀಸರು ಯುವಕನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ ಜೈಲಿನಲ್ಲಿಟ್ಟದ್ದರು. ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರ ಬಂದ ಯುವಕ ಆಗಾಗ ಹೋಟೆಲ್​ನಲ್ಲಿ ಇಬ್ಬರು ಭೇಟಿಯಾಗ್ತಿದ್ದರು. ನಿನ್ನೆ (ಡಿ.1) ಹೋಟೆಲ್​ನಲ್ಲಿ ವಿದ್ಯಾರ್ಥಿನಿ ಸೆಲ್ ಫೋನ್ ತೆಗೆದುಕೊಂಡು ನೋಡಿದಾಗ ಯುವಕನಿರುವುದು ಗೊತ್ತಾಗಿದೆ. ಇದರಿಂದ ಇಬ್ಬರ ಮಧ್ಯೆ ಜಗಳವಾಗಿದೆ ಎಂದು ತಿಳಿದು ಬಂದಿದೆ. ಇನ್ನು ಯುವಕ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ‘‘ ಎಂದು ಪೊಲೀಸರು ಹೇಳಿದ್ದಾರೆ. ಕ್ರೊಂಬೆಟ್ಟೈನ ಪೊಲೀಸರು ಯುವಕನ ವಿರುದ್ಧ ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಆ ಪ್ರದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಓದಿ:ಮಧ್ಯಾಹ್ನದ ಊಟ ಸೇವಿಸಿ 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಮುಂದುವರಿದ ಚಿಕಿತ್ಸೆ

ABOUT THE AUTHOR

...view details