ಕರ್ನಾಟಕ

karnataka

ETV Bharat / bharat

ಬಿಹಾರದ ವಿಕ್ರಮಶಿಲಾ ಎಕ್ಸ್‌ಪ್ರೆಸ್‌ನಲ್ಲಿ ಸ್ಫೋಟ.. ಯುವಕನಿಗೆ ಗಾಯ - ಜಮಾಲ್‌ಪುರ ನಿಲ್ದಾಣದ ಪ್ಲಾಟ್‌ಫಾರ್ಮ್

ಬಿಹಾರದ ಜಮಾಲ್‌ಪುರ ರೈಲು ನಿಲ್ದಾಣದಲ್ಲಿ ಸಂಭವಿಸಿದ ಬಾಂಬ್​ ಸ್ಫೋಟದಲ್ಲಿ ಯುವಕನೊಬ್ಬ ಗಾಯಗೊಂಡಿದ್ದಾನೆ. ಗಾಯಾಳು ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಫೋಟಕ್ಕೆ ಇನ್ನೂ ಕಾರಣ ತಿಳಿದುಬಂದಿಲ್ಲ.

ಬಿಹಾರದ ವಿಕ್ರಮಶಿಲಾ ಎಕ್ಸ್‌ಪ್ರೆಸ್‌ನಲ್ಲಿ ಸ್ಫೋಟ
ಬಿಹಾರದ ವಿಕ್ರಮಶಿಲಾ ಎಕ್ಸ್‌ಪ್ರೆಸ್‌ನಲ್ಲಿ ಸ್ಫೋಟ

By

Published : Mar 16, 2023, 11:03 PM IST

ಜಮಾಲ್‌ಪುರ (ಬಿಹಾರ) : ಜಮಾಲ್‌ಪುರ ರೈಲು ನಿಲ್ದಾಣದ ಬಳಿ ವಿಕ್ರಮಶಿಲಾ ಎಕ್ಸ್‌ಪ್ರೆಸ್‌ನಲ್ಲಿ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಓರ್ವ ಗಾಯಗೊಂಡಿದ್ದಾರೆ. ರೈಲ್ವೇ ಅಧಿಕಾರಿಗಳ ಪ್ರಕಾರ, ರೈಲು ಭಾಗಲ್ಪುರದಿಂದ ಆನಂದ್ ವಿಹಾರ್ ಕಡೆಗೆ ಸಾಗುತ್ತಿತ್ತು ಮತ್ತು S-9 ಬೋಗಿಯಲ್ಲಿ ಸ್ಫೋಟ ಸಂಭವಿಸಿದಾಗ ಅದನ್ನು ಪ್ಲಾಟ್‌ಫಾರ್ಮ್ ನಂ 1 ನಲ್ಲಿ ನಿಲ್ಲಿಸಲಾಯಿತು.

ಇದನ್ನೂ ಓದಿ :ಪ್ರಾಚೀನ ಜ್ಞಾನ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ: ನ್ಯಾಕ್ ಅಧ್ಯಕ್ಷ ಡಾ.ಅನಿಲ್ ಸಹಸ್ರಬುದ್ದೆ

ಗಾಯಗೊಂಡವರನ್ನು ಹವೇಲಿ ಖರಗ್‌ಪುರದ ಭಲ್ವಾಯಿ ಗ್ರಾಮದ ನಿವಾಸಿ ರಾಜ್​ಕುಮಾರ್ ಅವರ ಪುತ್ರ ಸಂದೀಪ್ ಕುಮಾರ್ (20) ಎಂದು ಗುರುತಿಸಲಾಗಿದೆ. ಈ ಸ್ಫೋಟ ಹೇಗೆ ಸಂಭವಿಸಿತು ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ರೈಲ್ವೆ ಅಧಿಕಾರಿಗಳು, ರೈಲ್ವೆ ಪೊಲೀಸರು ಮತ್ತು ಪ್ರಯಾಣಿಕರು ಪ್ರಯಾಣಿಕರ ಮೊಬೈಲ್ ಸ್ಫೋಟಗೊಂಡಿರಬಹುದು ಎಂದು ನಂಬಿದ್ದಾರೆ.

ಇದನ್ನೂ ಓದಿ :ಕೋವಿಡ್​ ಪ್ರಕರಣಗಳು ಏರಿಕೆ: ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ ಆರೋಗ್ಯ ಕಾರ್ಯದರ್ಶಿ

ಬರಿಯಾರ್‌ಪುರದಿಂದ ಆನಂದ್‌ ವಿಹಾರ್‌ಗೆ ತೆರಳಲು ಎಸ್‌-9 ಬೋಗಿ ಹತ್ತಿದ್ದೆ. ರೈಲಿನಲ್ಲಿ ಜನದಟ್ಟಣೆ ಹೆಚ್ಚಾದ ಕಾರಣ ಅವರು ಗೇಟ್‌ನಲ್ಲಿ ನಿಂತಿದ್ದರು ಮತ್ತು ರೈಲು ಜಮಾಲ್‌ಪುರ ನಿಲ್ದಾಣದ ಪ್ಲಾಟ್‌ಫಾರ್ಮ್ ನಂ 1ರಲ್ಲಿ ನಿಂತಿತು. ಸ್ವಲ್ಪ ಸಮಯದ ನಂತರ ಮಹಿಳೆಯ ಬ್ಯಾಗ್‌ನಿಂದ ಹೊಗೆ ಬರಲಾರಂಭಿಸಿತು. ತದನಂತರ ಸ್ಫೋಟ ಸಂಭವಿಸಿದೆ ಎಂದು ಸಂದೀಪ್‌ ತಿಳಿಸಿದ್ದಾರೆ.

ಇದನ್ನೂ ಓದಿ :29 ದಿನದ ಮಗು ಸಾವು.. ತಾಯಿ ಮತ್ತು ಹಿರಿಯ ಮಗನ ಶವ ಬಾವಿಯಲ್ಲಿ ಪತ್ತೆ

ಪ್ಲಾಟ್‌ಫಾರ್ಮ್‌ನಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು:ಸ್ಫೋಟದ ನಂತರ ರೈಲಿನೊಳಗೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರೈಲಿನಲ್ಲಿದ್ದ ಮಹಿಳೆಯೊಬ್ಬರ ಬ್ಯಾಗ್‌ನಿಂದ ಬೆಂಕಿ ಕಾಣಿಸಿಕೊಂಡಿರುವುದನ್ನು ನೋಡಿದ್ದೇನೆ ಮತ್ತು ಬೋಗಿಗೆ ಬೆಂಕಿ ಆವರಿಸಿದ್ದರಿಂದ ಸುಟ್ಟ ಗಾಯಗಳಾಗಿವೆ ಎಂದು ಅವರು ಹೇಳಿದರು. ನಿಲ್ದಾಣದಲ್ಲಿ ನಿಯೋಜಿಸಲಾಗಿದ್ದ ಆರ್‌ಪಿಎಫ್ ಜವಾನ್ ಅವರನ್ನು ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿಸಿದರು ಮತ್ತು ನನಗೆ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು ಎಂದು ಗಾಯಗೊಂಡಿರುವ ಸಂದೀಪ್​​ ಹೇಳಿದರು.

ಇದನ್ನೂ ಓದಿ :80 ಲಕ್ಷ ನಗದು, ಕೃಷಿ ಭೂಮಿ, 41 ತೊಲ ಚಿನ್ನ, 3 ಕೆಜಿ ಬೆಳ್ಳಿ, ಹೊಸ ಟ್ರ್ಯಾಕ್ಟರ್: ಸೊಸೆಗೆ ಕೃಷಿಕ ಸೋದರ ಮಾವಂದಿರ ಭರ್ಜರಿ ಉಡುಗೊರೆ

ಪ್ರಯಾಣಿಕರಿಗೆ ಸ್ಫೋಟದಲ್ಲಿ ಸಣ್ಣಪುಟ್ಟ ಗಾಯ : ಮಾಹಿತಿ ಪಡೆದ ವೈದ್ಯಕೀಯ ತಂಡವು ಗಾಯಾಳು ಪ್ರಯಾಣಿಕರಿಗೆ ಚಿಕಿತ್ಸೆ ನೀಡಲು ಅರ್ಧ ಗಂಟೆಯ ನಂತರ ಪ್ಲಾಟ್‌ಫಾರ್ಮ್‌ಗೆ ತಲುಪಿತು. ಈ ಮಧ್ಯೆ ಗಾಯಗೊಂಡ ಪ್ರಯಾಣಿಕರು ಜಮಾಲ್ಪುರದ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಂದೀಪ್​ನನ್ನು ಹೊರತುಪಡಿಸಿ ರೈಲಿನಲ್ಲಿದ್ದ ಇತರ ಅನೇಕ ಪ್ರಯಾಣಿಕರಿಗೆ ಸ್ಫೋಟದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಅವರು ದೆಹಲಿಗೆ ಹೋಗುತ್ತಿದ್ದರಿಂದ ರೈಲಿನಿಂದ ಇಳಿಯಲಿಲ್ಲ ಎಂದು ಸಂದೀಪ್​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ಸೇನಾ ಅಭ್ಯಾಸದ ವೇಳೆ ಸಿಡಿದ ಫಿರಂಗಿ, ಮನೆ ಮೇಲೆ ಬಿದ್ದ ಶೆಲ್​​ : ಮೂವರ ದುರ್ಮರಣ

ABOUT THE AUTHOR

...view details