ಗ್ವಾಲಿಯರ್(ಮಧ್ಯಪ್ರದೇಶ):30 ವರ್ಷದ ವ್ಯಕ್ತಿಯೋರ್ವ 9 ತಿಂಗಳ ಅವಧಿಯಲ್ಲಿ ಬರೋಬ್ಬರಿ ಮೂರು ಸಲ ಕೋವಿಡ್ ಸೋಂಕಿಗೊಳಗಾಗಿರುವ ಘಟನೆ ನಡೆದಿದೆ.
ಮಧ್ಯಪ್ರದೇಶ ಗ್ವಾಲಿಯಾರ್ನಲ್ಲಿ ಈ ಘಟನೆ ನಡೆದಿದ್ದು, 30 ವರ್ಷದ ವ್ಯಕ್ತಿ ಮೇಲಿಂದ ಮೇಲೆ ಕೊರೊನಾ ಸೋಂಕಿಗೊಳಗಾಗಿದ್ದಾನೆ. ಜುಲೈ 26, 2020ರಲ್ಲಿ ಪ್ರಥಮ ಬಾರಿಗೆ ಕೋವಿಡ್ ಸೋಂಕಿಗೊಳಗಾಗಿದ್ದ ವ್ಯಕ್ತಿ ತದನಂತರ ಮನೆಯಲ್ಲೇ ಚೇತರಿಸಿಕೊಂಡಿದ್ದನು. ಇದಾದ ಬಳಿಕ ಮತ್ತೊಮ್ಮೆ ಅಕ್ಟೋಬರ್ 15, 2020ರಲ್ಲಿ ಕೊರೊನಾ ಸೋಂಕಿಗೊಳಗಾಗಿ, ಚೇತರಿಕೆ ಕಂಡಿದ್ದನು. ಆದರೆ, ಇದೀಗ ಮತ್ತೊಮ್ಮೆ ಸೋಂಕಿಗೊಳಗಾಗಿದ್ದಾನೆ.
ಓರ್ವ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಸೋಂಕಿಗೊಳಗಾಗಿ ಗುಣಮುಖನಾದ ಬಳಿಕ ಆತನಲ್ಲಿ ಪ್ರತಿಕಾಯ ಅಭಿವೃದ್ಧಿಗೊಳ್ಳುತ್ತದೆ. ಜತೆಗೆ ಹೊಸದಾಗಿ ಕೊರೊನಾ ಸೋಂಕು ಒಳಗಾಗದಂತೆ ರಕ್ಷಣೆ ಮಾಡುತ್ತದೆ. ಆದರೆ, ಈ ವ್ಯಕ್ತಿಗೆ 9 ತಿಂಗಳಲ್ಲಿ ಮೂರು ಸಲ ಕೋವಿಡ್ ಸೋಂಕು ತಗುಲಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.