ಕರ್ನಾಟಕ

karnataka

ETV Bharat / bharat

ಮೊಬೈಲ್​ನಲ್ಲಿ ಮುಳುಗಿದ್ದಕ್ಕೆ ಗದರಿಸಿದ ತಂದೆ; ಕೋಪಗೊಂಡು ಡೆಟಾಲ್ ಕುಡಿದ ಮಗ - ನಿರಂತರ ಮೊಬೈಲ್​ನಲ್ಲಿ ಮುಳುಗಿದ್ದ ಮಗ

ಮೊಬೈಲ್​ನಲ್ಲಿ ಮುಳುಗಿದ್ದ ಮಗನನ್ನು ತಂದೆ ಗದರಿಸಿದ್ದು, ಕೋಪಗೊಂಡ ಮಗ ಡೆಟಾಲ್ ಕುಡಿದಿರುವ ಘಟನೆ ನಗರದ ಪೋಲಿಸ್ ಠಾಣಾ ವ್ಯಾಪ್ತಿಯ ಮೊಗ್ಲಕಾರ್ ಎಂಬಲ್ಲಿ ನಡೆದಿದೆ.

young man drank dettol
ಮೊಬೈಲ್​ನಲ್ಲಿ ಮುಳುಗಿದಕ್ಕೆ ಗದರಿದ ತಂದೆ; ಕೋಪಗೊಂಡು ಡೆಟಾಲ್ ಕುಡಿದ ಮಗ

By

Published : Nov 12, 2022, 5:56 PM IST

ನಾವಡ( ಬಿಹಾರ): ನಿರಂತರ ಮೊಬೈಲ್​ನಲ್ಲಿ ಮುಳುಗಿದ್ದ ಮಗನನ್ನು ತಂದೆ ಗದರಿದ್ದು, ಕೋಪಗೊಂಡ ಮಗ ಡೆಟಾಲ್ ಕುಡಿದಿರುವ ಘಟನೆ ಬಿಹಾರ ರಾಜ್ಯದ ನಾವಡ ನಗರದ ಪೊಲೀಸ್​​​ ಠಾಣಾ ವ್ಯಾಪ್ತಿಯ ಮೊಗ್ಲಕಾರ್ ಎಂಬಲ್ಲಿ ನಡೆದಿದೆ.

ಮೊಹಮ್ಮದ್ ಅಲಿ ರಾಜಾ ಎಂಬಾತ ಮೊಬೈಲ್​ನಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದ. ಈ ವೇಳೆ ಆತನ ತಂದೆ ಮಹಮ್ಮದ್ ಬಬ್ಲು ಮಗನ ಮೊಬೈಲ್ ಪಡೆದುಕೊಂಡು ಆತನಿಗೆ ಬೈದಿದ್ದಾರೆ. ತಂದೆಯ ಮಾತು ಮಗನಿಗೆ ಇಷ್ಟವಾಗದೆ ಕೋಪಗೊಂಡು ಇಡೀ ಬಾಟಲ್ ಡೆಟಾಲ್​ನ್ನು ಕುಡಿದು ಮುಗಿಸಿದ್ದಾನೆ. ತಕ್ಷಣವೇ ಆತನನ್ನು ಸದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತನ ಸ್ಥಿತಿ ಗಂಭೀರವಾಗಿದ್ದು, ಪಾವಪುರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ಆನ್​ಲೈನ್​ ಹೂಡಿಕೆಯಿಂದ ಮೋಸ.. ನೊಂದ ಉಪನ್ಯಾಸಕಿ ಬಾವಿಗೆ ಹಾರಿ ಆತ್ಮಹತ್ಯೆ

ABOUT THE AUTHOR

...view details