ಜುನಾಗಢ, ಗುಜರಾತ್:ಗುಜರಾತ್ನ ಆಸ್ಪತ್ರೆಯಲ್ಲಿ ಯುವಕ ಮೃತಪಟ್ಟ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾಫಿ ಕುಡಿಯುವಾಗ ಕಟ್ಟಡದಿಂದ ಬಿದ್ದಿದ್ದು, ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದ ಕಾರಣ ಯುವಕ ಮೃತಪಟ್ಟಿದ್ದಾನೆ. ವೈದ್ಯರ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಹಿತಿಯ ಪ್ರಕಾರ, ಯುವಕ ಕಟ್ಟಡದ ಮೇಲೆ ಕುಳಿತು ಕಾಫಿ ಕುಡಿಯುತ್ತಿದ್ದಾಗ ಅಚಾನಕ್ಕಾಗಿ ಅಲ್ಲಿಂದ ಬಿದ್ದಿದ್ದಾನೆ. ಗಂಭೀರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ಕರೆತರಲಾಗಿದೆ. ಈ ವೇಳೆ ಸಿಬ್ಬಂದಿ ಆತನಿಗೆ ಚಿಕಿತ್ಸೆ ನೀಡುವ ಬದಲು ಸ್ಟ್ರೆಚರ್ ಮೇಲೆ ಕುಳ್ಳಿರಿಸಿ ಕಾಲಹರಣ ಮಾಡಿದ್ದಾರೆ.
ತುರ್ತು ಚಿಕಿತ್ಸೆ ನೀಡಲು ಕುಟುಂಬಸ್ಥರು ಕೇಳಿಕೊಂಡಿದ್ದಕ್ಕೆ ಅವರ ವಿರುದ್ಧ ಸಿಬ್ಬಂದಿ ವಾದ ಮಾಡಿದ್ದಾರೆ. ಇದಾದ ಕೆಲ ಸಮಯದ ಬಳಿಕ ಯುವಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಇದರಿಂದ ಕೆರಳಿದ ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ ಎಂದು ಆರೋಪಿಸಿದ್ದಾರೆ.
ಗಂಭೀರ ಗಾಯಗೊಂಡ ಯುವಕನನ್ನು ಆಸ್ಪತ್ರೆಯ ಆಮ್ಲಜನಕ ಘಟಕದ ಕೆಲಕಾಲ ವ್ಯರ್ಥವಾಗಿ ಉಳಿಸಿಕೊಂಡು ಕಾಲಹರಣ ಮಾಡಿದ್ದಕ್ಕೆ ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಚಿಕಿತ್ಸೆ ನೀಡಲು ಒತ್ತಾಯ ಮಾಡಿದ್ದಕ್ಕೆ ಕುಟುಂಬದ ಸದಸ್ಯನನ್ನೇ ಆಸ್ಪತ್ರೆಯಿಂದ ಹೊರದಬ್ಬಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಓದಿ:ಕೆಎಸ್ಆರ್ಟಿಸಿ ಬಸ್ ಹರಿದು ಬಾಲಕ ಸಾವು; ಆಂಬ್ಯುಲೆನ್ಸ್ ಸಿಗದೆ ತಂದೆಯ ಪರದಾಟ