ಕರ್ನಾಟಕ

karnataka

ETV Bharat / bharat

ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಜೈಲು ಸಜೆ - ಅತ್ಯಾಚಾರ ಮಾಡಿದ್ದ ಅಪರಾಧಿಗೆ ಶಿಕ್ಷೆ ವಿಧಿಸಿದ ಪೋಕ್ಸೋ ನ್ಯಾಯಾಲಯ

ಬಾಲಕಿಯನ್ನು ತನ್ನ ಸ್ನೇಹಿತನ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿದ್ದ ಆರೋಪಿ ಅತ್ಯಾಚಾರ ಎಸಗಿದ್ದ. ಬಳಿಕ ಆಕೆಯನ್ನು ಇತರ ಕೆಲವು ಸ್ಥಳಗಳಿಗೆ ಕರೆದೊಯ್ದು ಮತ್ತೆ ಅತ್ಯಾಚಾರ ಎಸಗಿದ್ದಾನೆ. ಪರಿಣಾಮ ಈಗ 20 ವರ್ಷ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಜೈಲು ಸಜೆ
ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಜೈಲು ಸಜೆ

By

Published : Jun 20, 2022, 8:41 PM IST

Updated : Jun 20, 2022, 9:03 PM IST

ರಾಜ್‌ಕೋಟ್​( ಗುಜರಾತ್​): ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಅಪರಾಧಿಗೆ ಇಲ್ಲಿನ ಪೊಕ್ಸೊ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಕೋಟಾ ನಗರದ ಮಹಾವೀರ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಸಂಜಯ್ ಬೈರ್ವಾ (22) 2019ರಲ್ಲಿ 15 ವರ್ಷದ ಬಾಲಕಿಯ ವಿರುದ್ಧ ನೀಚ ಕೃತ್ಯ ಎಸಗಿದ್ದ.

POCSO ಕೋರ್ಟ್- IIIರ ಪಬ್ಲಿಕ್ ಪ್ರಾಸಿಕ್ಯೂಟರ್ ಲಲಿತ್ ಶರ್ಮಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಾಲಕಿಯನ್ನು ತನ್ನ ಸ್ನೇಹಿತನ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿ ಈತ ಅತ್ಯಾಚಾರ ಎಸಗಿದ್ದ. ಬಳಿಕ ಆಕೆಯನ್ನು ಇತರ ಕೆಲವು ಸ್ಥಳಗಳಿಗೆ ಕರೆದೊಯ್ದು ಅಲ್ಲಿಯೂ ಅತ್ಯಾಚಾರ ಎಸಗಿದ್ದಾನೆ. ಅಂತಿಮವಾಗಿ ಆತನನ್ನು ಪೊಲೀಸರು ಬಂಧಿಸಿ ಅಪ್ರಾಪ್ತೆಯನ್ನು ರಕ್ಷಿಸಿದ್ದರು ಎಂದು ಹೇಳಿದ್ದಾರೆ.

ನ್ಯಾಯಾಲಯ ಅಪರಾಧಿಗೆ ಶಿಕ್ಷೆ ನೀಡುವುದರ ಜೊತೆಗೆ 70,000 ರೂಪಾಯಿ ದಂಡವನ್ನೂ ಸಹ ಸವಿಧಿಸಿದೆ.

ಇದನ್ನೂ ಓದಿ: ಅಧ್ಯಕ್ಷರ ಬದಲು ಸಂಸತ್ತಿ​ನ ಅಧಿಕಾರ ಹೆಚ್ಚಿಸುವ ಹೊಸ ತಿದ್ದುಪಡಿ ಅಂಗೀಕರಿಸಿದ ಶ್ರೀಲಂಕಾ

Last Updated : Jun 20, 2022, 9:03 PM IST

For All Latest Updates

ABOUT THE AUTHOR

...view details