ಹಲ್ದ್ವಾನಿ:ಸ್ಮಾರ್ಟ್ಫೋನ್ ಕಳೆದ ಬೇಸರದಲ್ಲಿ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ಗೌಲಾಪರ್ ಗ್ರಾಮದಲ್ಲಿ ನಡೆದಿದೆ.
ಆತನಿಗೆ ತನ್ನ ಜೀವಕ್ಕಿಂತ ಸ್ಮಾರ್ಟ್ಫೋನೇ ಹೆಚ್ಚಾಗಿತ್ತು.. ಬಿಟ್ಟಿರಲಾರದೇ ಆತ್ಮಹತ್ಯೆಗೆ ಶರಣಾದ ಯುವಕ! - ಹಲ್ದ್ವಾನಿಯಲ್ಲಿ ಸ್ಮಾರ್ಟ್ಫೋನ್ ಕಳೆದ ಹಿನ್ನೆಲೆ ಯುವಕ ಆತ್ಮಹತ್ಯೆಗೆ ಶರಣು,
ಆ ಯುವಕನಿಗೆ ತನ್ನ ಜೀವಗಿಂತ ಸ್ಮಾರ್ಟ್ಫೋನೇ ಹೆಚ್ಚಾಗಿತ್ತೇನೋ ಗೊತ್ತಿಲ್ಲ. ಸ್ಮಾರ್ಟ್ಫೋನ್ ಕಳೆದ ಬೇಸರದಲ್ಲಿ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಾಖಂಡ್ನ ಹಲ್ದ್ವಾನಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಖೇಡಾ ಗೌಲಾಪರ್ ನಿವಾಸಿ ಸೋಂಬೀರ್ (30) ಕುಟುಂಬ ಗೌಲಾಪರ್‌ನ ಬಾಟೈನಲ್ಲಿ ಕೃಷಿ ಕೆಲಸ ಮಾಡುತ್ತಿದೆ. ಕೆಲವು ದಿನಗಳ ಹಿಂದೆ ಸೋಂಬೀರ್ ತನ್ನ ಸ್ಮಾರ್ಟ್ಫೋನ್ ಕಳೆದುಕೊಂಡಿದ್ದಾರೆ. ಮೊಬೈಲ್ ಕಳೆದುಕೊಂಡಿದ್ದಕ್ಕೆ ಸೋಂಬೀರ್ ತೀವ್ರ ಆಘಾತಕ್ಕೊಳಗಾಗಿದ್ದರು. ಇದರಿಂದ ವಿಪರೀತ ಬೇಸರವಾಗಿದ್ದ ಸೋಂಬೀರ್ ವಿಷ ಸೇವಿಸಿದ್ದನು.
ವಿಷ ಸೇವಿಸಿದ್ದ ಸೋಂಬೀರ್ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಸೋಂಬೀರ್ ಸಾವನ್ನಪ್ಪಿದ್ದರು. ಮಗನನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.