ಕೌಶಂಬಿ (ಉತ್ತರ ಪ್ರದೇಶ) :ವಿದ್ಯುತ್ ಬಿಲ್ ಜಾಸ್ತಿಯಾದ ಹಿನ್ನೆಲೆ ವ್ಯಕ್ತಿಯೊಬ್ಬ ಹೈವೋಲ್ಟೇಜ್ ವಿದ್ಯುತ್ ಟವರ್ ಏರಿ, ವಿದ್ಯುತ್ ತಂತಿಗಳ ಮೇಲೆ ಸಾಗಿದ ವಿಚಿತ್ರ ಘಟನೆ ಜಿಲ್ಲೆಯಲ್ಲಿ ನಡೆದಿದೆ. ನಿಧಾನವಾಗಿ ವ್ಯಕ್ತಿ ವಿದ್ಯುತ್ ತಂತಿಗಳ ಮೇಲೆ ನಡೆದುಕೊಂಡೇ ಮುಂದೆ ಸಾಗಿದ್ದಾನೆ. ಅದೃಷ್ಟ ಎಂದರೆ ಆ ವೇಳೆ ತಂತಿಯಲ್ಲಿ ವಿದ್ಯುತ್ ಹರಿಯುತ್ತಿರಲಿಲ್ಲ. ಪರಿಣಾಮ ವ್ಯಕ್ತಿ ದುರಂತದಿಂದ ಪಾರಾಗಿದ್ದಾರೆ.
ಉಚಿತ ವಿದ್ಯುತ್ ಸಂಪರ್ಕವಾದರೂ ಹಣ ವಸೂಲಿ: ಮಾಹಿತಿ ಪ್ರಕಾರ ಸರಾಯಿ ಅಕಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ನಂದಾ ಗ್ರಾಮದ ಪುರ ನಿವಾಸಿ ಅಶೋಕ್ ಕುಮಾರ್ ಕೃಷಿ ಮಾಡಿಕೊಂಡು ಮನೆ ನಿರ್ವಹಣೆ ಮಾಡುತ್ತಿದ್ದಾರೆ. ಅಶೋಕ್ ಸೌಭಾಗ್ಯ ಯೋಜನೆಯಡಿ ಮೂರು ವರ್ಷಗಳ ಹಿಂದೆ ಉಚಿತ ವಿದ್ಯುತ್ ಸಂಪರ್ಕ ಪಡೆದಿದ್ದರು. ಆದರೂ ಅಧಿಕಾರಿಗಳು ಅಂದಿನಿಂದ ನಿರಂತರವಾಗಿ ಬಿಲ್ ವಸೂಲಿ ಮಾಡುತ್ತಿದ್ದರಂತೆ. ಶನಿವಾರ ಅಶೋಕ್ ಮನೆಗೆ 8 ಸಾವಿರದ 700 ರೂಪಾಯಿ ವಿದ್ಯುತ್ ಬಿಲ್ ಬಂದಿದೆ. ಇದರಿಂದ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ. ಬಿಲ್ ನೋಡಿ ಅಶೋಕ್ ಮಾನಸಿಕವಾಗಿ ಕಂಗೆಟ್ಟಿದ್ದಾರೆ ಎಂದು ಅಶೋಕ್ ಪತ್ನಿ ಮೋಹಿನಿ ದೇವಿ ಆರೋಪಿಸಿದ್ದಾರೆ.