ಬುಲಂದ್ಶಹರ್(ಉತ್ತರ ಪ್ರದೇಶ): ಮದ್ಯ ನೀಡಲು ಅಂಗಡಿ ಮಾಲೀಕ ನಿರಾಕರಿಸಿದ್ದರಿಂದ ಆಕ್ರೋಶಗೊಂಡಿರುವ ಯುವಕರ ಗುಂಪೊಂದು ವೈನ್ ಶಾಪ್ಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಬುಲಂದ್ಶಹರ್ದ ಅರ್ನಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.
ಮದ್ಯ ಸಿಗದ ಕಾರಣ ಆಕ್ರೋಶಗೊಂಡಿರುವ ಯುವಕರು ಈ ರೀತಿಯಾಗಿ ನಡೆದುಕೊಂಡಿದ್ದಾರೆಂದು ಹೇಳಲಾಗ್ತಿದ್ದು, ಮದ್ಯದಂಗಡಿಗೆ ಬೆಂಕಿ ಹಚ್ಚಿರುವ ಕಾರಣ ಬೈಕ್ ಮತ್ತು ಕಾರು ಸಹ ಸುಟ್ಟು ಕರಕಲಾಗಿವೆ. ಅಂಬೇಡ್ಕರ್ ಜಯಂತಿ ಅಂಗವಾಗಿ ಜಿಲ್ಲಾಡಳಿತದ ಸೂಚನೆ ಮೇರೆಗೆ ಮದ್ಯದ ಅಂಗಡಿ ಮುಚ್ಚಲಾಗಿತ್ತು. ಹೀಗಾಗಿ ಬುಲಂದ್ಶಹರ್ನಲ್ಲಿ ತಡರಾತ್ರಿಯಾದ್ರೂ ಮದ್ಯ ಸಿಕ್ಕಿಲ್ಲ. ಈ ವೇಳೆ ವೈನ್ ಶಾಪ್ಗೆ ಬಂದು ವಿಸ್ಕಿ ನೀಡುವಂತೆ ಕೇಳಿಕೊಂಡಿದ್ದಾರೆ.