ಸಮಸ್ತಿಪುರ (ಬಿಹಾರ): ಯುವಕನೊಬ್ಬನಿಗೆ ದುಷ್ಕರ್ಮಿಗಳ ಗುಂಪು ಥಳಿಸಿ, ರಸ್ತೆಯಲ್ಲಿ ಅಮಾನುಷವಾಗಿ ಧರಧರನೇ ಎಳೆದೊಯ್ದಿರುವ ಘಟನೆ ಬಿಹಾರದ ಸಮಸ್ತಿಪುರದ ದಲ್ಸಿಂಗ್ಸ್ರಾಯ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ವೈರಲ್ ಆಗಿದೆ.
ಇಲ್ಲಿನ ಸಂಸ್ಕೃತ ವಿದ್ಯಾಲಯ ರಸ್ತೆಯ ವಾರ್ಡ್ ಸಂಖ್ಯೆ 2 ನಿವಾಸಿಯಾದ ರಂಜನ್ ಕುಮಾರ್ ಎಂಬ ಯುವಕನೇ ಹಲ್ಲೆಗೆ ಒಳಗಾಗಿದ್ಧಾನೆ. ನಾಲ್ವರು ನಮ್ಮ ಮನೆಗೆ ಬಂದು ರಂಜನ್ ಕುಮಾರ್ನನ್ನು ಕರೆದುಕೊಂಡು ಹೋಗಿದ್ದರು. ನಂತರ ಆತನ ಮೇಲೆ ದಾಳಿ ಮಾಡಿರುವುದು ಗೊತ್ತಾಗಿದೆ. ಹೀಗಾಗಿಯೇ ಈ ಹಲ್ಲೆ ಘಟನೆ ಸಂಬಂಧ ಇದೇ ನಾಲ್ವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಸಹೋದರ ತಿಳಿಸಿದ್ಧಾನೆ.