ಕರ್ನಾಟಕ

karnataka

ETV Bharat / bharat

ನೂಪುರ್​ ಶರ್ಮಾ ವಿಡಿಯೋ ನೋಡುತ್ತಿದ್ದಾಗ ಯುವಕನ ಮೇಲೆ ಚಾಕುವಿನಿಂದ ಹಲ್ಲೆ.. ಆಸ್ಪತ್ರೆಗೆ ದಾಖಲು - ನೂಪುರ್ ಶರ್ಮಾ ಬೆಂಬಲಿತ ಯುವಕನ ಮೇಲೆ ಹಲ್ಲೆ

ನೂಪುರ್ ಶರ್ಮಾ ಅವರ ಹೇಳಿಕೆ ನೀಡಿರುವ ವಿಡಿಯೋ ವೀಕ್ಷಣೆ ಮಾಡ್ತಿದ್ದ ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

attack on nupur sharma supporter
attack on nupur sharma supporter

By

Published : Jul 19, 2022, 5:53 PM IST

Updated : Jul 19, 2022, 6:24 PM IST

ಸೀತಾಮರ್ಹಿ(ಬಿಹಾರ):ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮಹಮ್ಮದ್ ಕುರಿತು ವಿವಾದಿತ ಹೇಳಿಕೆ ನೀಡಿ ಒಂದೂವರೆ ತಿಂಗಳು ಕಳೆದರೂ, ಹಿಂಸಾತ್ಮಕ ಕೃತ್ಯಗಳು ಮಾಸುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ.

ರಾಜಸ್ಥಾನದ ಉದಯಪುರದಲ್ಲಿ ಹಿಂದೂ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಬೆನ್ನಲ್ಲೇ ಇದೀಗ ಬಿಹಾರದಲ್ಲೂ ಅಂತಹದೊಂದು ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.

ಯುವಕನ ಮೇಲೆ ಚಾಕುವಿನಿಂದ ಹಲ್ಲೆ

ಯುವಕನೊಬ್ಬ ನೂಪುರ್ ಶರ್ಮಾ ಹೇಳಿಕೆ ನೀಡಿದ್ದ ವಿಡಿಯೋ ನೋಡುತ್ತಿದ್ದಾಗ ಅವರ ಮೇಲೆ ಕೆಲವರು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಬಿಹಾರದ ಸೀತಾಮರ್ಹಿ ಜಿಲ್ಲೆಯ ನಾನ್​ಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಬಹೇರಾ ಜಾಹಿದ್​ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಯುವಕನೋರ್ವ ತನ್ನ ಮೊಬೈಲ್​​​ನಲ್ಲಿ ನೂಪುರ್ ಶರ್ಮಾ ಅವರ ವಿಡಿಯೋ ನೋಡುತ್ತಿದ್ದನು. ಈ ವೇಳೆ, ಆತನ ಮೇಲೆ ಕೆಲವರು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಅಂಕಿತ್​ ಗಂಭೀರವಾಗಿ ಗಾಯಗೊಂಡಿದ್ದಾನೆ.ಘಟನೆ ಬಗ್ಗೆ ಮಾತನಾಡಿರುವ ಅಂಕಿತ್​, ಪಾನ್​ ಅಂಗಡಿ ಮುಂದೆ ನಿಂತುಕೊಂಡು ಮೊಬೈಲ್​​​ನಲ್ಲಿ ನೂಪುರ್ ಶರ್ಮಾ ಅವರ ವಿಡಿಯೋ ಸ್ಟೇಟಸ್ ನೋಡುತ್ತಿದ್ದೇನು. ಈ ವೇಳೆ ಸಿಗರೇಟ್​ ಸೇದುತ್ತ ನಿಂತಿದ್ದ ಮೂವರು, ನನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಯುವಕ ಹೇಳಿಕೊಂಡಿದ್ದಾನೆ.

ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಅಂಕಿತ್​

ಇದನ್ನೂ ಓದಿರಿ:ನೂಪುರ್ ಶರ್ಮಾಗೆ ಸುಪ್ರೀಂಕೋರ್ಟ್​ನಿಂದ ರಿಲೀಫ್​... ಸದ್ಯಕ್ಕೆ ಬಂಧನ ಮಾಡದಂತೆ ಸೂಚನೆ

ಕೃತ್ಯದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇದೀಗ ಹಲ್ಲೆಗೊಳಗಾಗಿರುವ ಯುವಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಜೊತೆಗೆ ತಮಗೆ ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದಾರೆ. ಕಳೆದ ಕೆಲ ವಾರಗಳ ಹಿಂದೆ ರಾಜಸ್ಥಾನದ ಉದಯಪುರದಲ್ಲೂ ಟೈಲರ್​ ಆಗಿ ಕೆಲಸ ಮಾಡ್ತಿದ್ದ ಹಿಂದೂ ವ್ಯಕ್ತಿಯ ಮೇಲೆ ಇಬ್ಬರು ಹಲ್ಲೆ ನಡೆಸಿ, ಕೊಲೆ ಮಾಡಿದ್ದರು.

Last Updated : Jul 19, 2022, 6:24 PM IST

ABOUT THE AUTHOR

...view details