ಸಿಂಹ ರಾಶಿಯವರಿಗೆ 2022ರಲ್ಲಿ ಜವಾಬ್ದಾರಿಯು ಹೆಚ್ಚಲಿದೆ. ನಿಮ್ಮ ಆತ್ಮವಿಶ್ವಾಸವು ಮರಳಿ ಬರಲಿದೆ. ವ್ಯಾಪಾರೋದ್ಯಮಿಗಳಿಗೆ ಈ ವರ್ಷವೂ ಅತ್ಯುತ್ತಮ ಫಲಿತಾಂಶ ದೊರೆಯಲಿದ್ದು, ನಿಮ್ಮ ವೃತ್ತಿಯಲ್ಲಿ ಎಲ್ಲಾ ರೀತಿಯಲ್ಲಿಯೂ ಅತ್ಯುನ್ನತ ಫಲಿತಾಂಶ ದೊರೆಯಲಿದೆ.
ಆದರೆ, ಈ ವರ್ಷದಲ್ಲಿ ಶನಿಯು ನಿಮ್ಮ ಜಾತಕದಲ್ಲಿ ಏಳನೇ ಮನೆಗೆ ಬರುವುದರಿಂದ ಈ ವರ್ಷದಲ್ಲಿ ನಿಮ್ಮ ವ್ಯವಹಾರ ಪಾಲುದಾರ ಮತ್ತು ನಿಮ್ಮ ನಡುವೆ ಭಿನ್ನಾಭಿಪ್ರಾಯ ಉಂಟಾಗಲಿದೆ. ಇದೇ ವೇಳೆ ಜೀವನ ಸಂಗಾತಿಯ ಜೊತೆಗೂ ಒಂದಷ್ಟು ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಹಣಕಾಸಿನ ವಿಚಾರದಲ್ಲಿ ನೀವು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದರೂ, ನೀವು ಹಣಕಾಸಿನ ದಕ್ಷ ನಿರ್ವಹಣೆಗೆ ಒತ್ತು ನೀಡಬೇಕು. ಇಲ್ಲದಿದ್ದರೆ ನೀವು ದುಡಿದ ಎಲ್ಲಾ ಹಣವನ್ನು ಬೇರೆ ಬೇರೆ ಖರ್ಚುಗಳಿಗಾಗಿ ವೆಚ್ಚ ಮಾಡಬೇಕಾದೀತು. ನೀವು ಈ ವರ್ಷದಲ್ಲಿ ಪ್ರಯತ್ನಿಸಿದರೆ, ನಿಮ್ಮ ಕೈಗೆ ದೊಡ್ಡ ಪ್ರಮಾಣದ ಭೂಮಿ ಅಥವಾ ರಿಯಲ್ ಎಸ್ಟೇಟ್ ಸಿಗಲಿದೆ.
ಈ ಮೂಲಕ ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ವರ್ಷದ ಮಧ್ಯ ಭಾಗದಲ್ಲಿ ನಿಮ್ಮ ಜೀವನ ಸಂಗಾತಿಯ ಆರೋಗ್ಯದಲ್ಲಿ ಕುಸಿತ ಉಂಟಾಗುವ ಕಾರಣ ಸಮಸ್ಯೆಗಳು ಉಂಟಾಗಬಹುದು. ಆದರೆ, ಇದನ್ನು ನೀವು ಯಶಸ್ವಿಯಾಗಿ ನಿಭಾಯಿಸಲಿದ್ದು ಎಲ್ಲವೂ ಸುಗಮಗೊಳ್ಳಲಿದೆ. ನೀವು ವಿದೇಶಕ್ಕೆ ಹೋಗಲು ಇಚ್ಛಿಸುವುದಾದರೆ, ಫೆಬ್ರುವರಿಯಲ್ಲಿ ಮತ್ತು ಮೇ ಮತ್ತು ಜೂನ್ ನಡುವೆ ಇಂತಹ ಅವಕಾಶ ನಿಮ್ಮ ಪಾಲಿಗೆ ಒದಗಿ ಬರಬಹುದು. ಮುಖ್ಯವಾಗಿ ಫೆಬ್ರುವರಿ ತಿಂಗಳಿನಲ್ಲಿ ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ಇದರ ನಂತರ ಜುಲೈ ಮತ್ತು ಆಗಸ್ಟ್ ನಡುವೆ ನಿಮ್ಮ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು.