ನವದೆಹಲಿ: 17 ವರ್ಷಕ್ಕಿಂತ ಮೇಲ್ಪಟ್ಟ ಯುವಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗಾಗಿ ಜನವರಿ 1, 2023ಕ್ಕೆ 18 ವರ್ಷ ಪೂರ್ಣಗೊಳ್ಳುವವರೆಗೆ ಕಾಯುವ ಅಗತ್ಯವಿಲ್ಲ ಎಂದು ಭಾರತದ ಚುನಾವಣಾ ಆಯೋಗ ತಿಳಿಸಿದೆ.
ECI on registration.. 17ವರ್ಷ ಮೇಲ್ಪಟ್ಟವರಿಗೆ ಚುನಾವಣಾ ಆಯೋಗದಿಂದ ಗುಡ್ ನ್ಯೂಸ್
ಭಾರತೀಯ ಚುನಾವಣಾ ಆಯೋಗದಿಂದ ತರುಣರಿಗೆ ಗುಡ್ ನ್ಯೂಸ್- 17 ವರ್ಷಕ್ಕಿಂತ ಮೇಲ್ಪಟ್ಟವರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಲು ಸಲ್ಲಿಸಬಹುದು ಅರ್ಜಿ - 18 ವರ್ಷಕ್ಕೂ ಮೊದಲೇ ಸಲ್ಲಿಸಿ ಅರ್ಜಿ
Election Commission of India
ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನೂಪ್ ಚಂದ್ರ ಪಾಂಡೆ ನೇತೃತ್ವದ ಚುನಾವಣಾ ಆಯೋಗವು ಎಲ್ಲಾ ರಾಜ್ಯಗಳ ಸಿಇಒಗಳು/ಇಆರ್‌ಒಗಳು/ಎಇಆರ್‌ಒಗಳಿಗೆ ಈ ಕುರಿತು ಕಾರ್ಯಪ್ರವೃತ್ತವಾಗುವಂತೆ ನಿರ್ದೇಶಿಸಿದೆ. ಜೊತೆಗೆ, ಯುವ ಜನತೆ ತಮ್ಮ ಮುಂಗಡ ಅರ್ಜಿಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲು ಹಾಗೂ ಮಾಹಿತಿ ನೀಡಲು ಸೂಚಿಸಿದೆ.
ಇದನ್ನೂ ಓದಿ:ಮೋದಿಯಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪ : RP ಕಾಯ್ದೆ ತಿದ್ದುಪಡಿ ಅಗತ್ಯವೆಂದ ಮಾಜಿ ಚುನಾವಣಾ ಆಯುಕ್ತ