ಕರ್ನಾಟಕ

karnataka

ETV Bharat / bharat

ಆ್ಯಪ್​ ಮೂಲಕ ಪ್ರೀತಿ.. ಸುತ್ತಾಡಿ ಕೈಕೊಟ್ಟನಂತೆ ಪ್ರೇಮಿ.. ಪೊಲೀಸರ ಮೊರೆ ಹೋದ ಯುವತಿ.. - ಆ್ಯಪ್​ ಮೂಲಕ ಪ್ರೀತಿಸಿ ವಂಚನೆ

ಹೈದರಾಬಾದ್​ಗೆ ಬಂದು ಮಣಿಕೊಂಡದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾಳೆ. ಬಳಿಕ ಇಬ್ಬರು ಧರ್ಮಶಾಲಾ, ಜಮ್ಮುಕಾಶ್ಮೀರ, ಶ್ರೀನಗರ, ಗೋವಾ ಎಲ್ಲಾ ಸುತ್ತಾಡಿದ ನಂತರ ಬಂಜಾರ ಹಿಲ್ಸ್​ಗೆ ಮನೆ ಶಿಫ್ಟ್ ಮಾಡಿದ್ದಾರೆ..

ಆ್ಯಪ್​ ಮೂಲಕ ಪ್ರೀತಿ
ಆ್ಯಪ್​ ಮೂಲಕ ಪ್ರೀತಿ

By

Published : Aug 14, 2021, 8:12 PM IST

ಹೈದರಾಬಾದ್ (ತೆಲಂಗಾಣ) :ಆ್ಯಪ್​ವೊಂದರ ಮೂಲಕ ಯುವಕನೊಬ್ಬ ಅಮೆರಿಕದಲ್ಲಿ ಓದುತ್ತಿದ್ದ ಯುವತಿ ಜತೆ ಸಂಪರ್ಕ ಬೆಳೆಸಿ ವಂಚಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಯುವತಿ ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದಾಳೆ.

ಸಂತ್ರಸ್ತೆಯು ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದು, ಆ್ಯಪ್​ವೊಂದರ ಮೂಲಕ ಆದಿತ್ಯ ಎಂಬಾತನ ಪರಿಚಯವಾಗಿದೆ. ಈ ವೇಳೆ, ಯುವಕ ನನ್ನ ಬಳಿ ಒಂದು ಕೋಟಿ ರೂಪಾಯಿ ಮೌಲ್ಯದ ಆಸ್ತಿಯಿದೆ. ನಾನು ನಿನ್ನನ್ನು ಮದುವೆಯಾಗುತ್ತೇನೆ. ಹೈದರಾಬಾದ್​ಗೆ ಬಾ ಎಂದು ಕರೆದಿದ್ದಾನೆ.

ಇದನ್ನು ನಂಬಿದ ಆಕೆ, ಹೈದರಾಬಾದ್​ಗೆ ಬಂದು ಮಣಿಕೊಂಡದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾಳೆ. ಬಳಿಕ ಇಬ್ಬರು ಧರ್ಮಶಾಲಾ, ಜಮ್ಮುಕಾಶ್ಮೀರ, ಶ್ರೀನಗರ, ಗೋವಾ ಎಲ್ಲಾ ಸುತ್ತಾಡಿದ ನಂತರ ಬಂಜಾರ ಹಿಲ್ಸ್​ಗೆ ಮನೆ ಶಿಫ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಕೆಳ ವರ್ಗದವರ ಬಗ್ಗೆ ಹಗುರ ಮಾತು ಆರೋಪ: ಕಾಲಿವುಡ್​ ನಟಿ ಬಂಧನ

ಕೆಲ ದಿನಗಳ ನಂತರ ಸಂತ್ರಸ್ತೆಯು ತಂದೆಯ ಜನ್ಮದಿನಕ್ಕೆಂದು ಹೈದರಾಬಾದ್​ನ ಎಂಎಸ್ ಮಕ್ತಾಗೆ ಹೋಗಿದ್ದು, ಯುವಕ ಬೆಂಗಳೂರಿಗೆ ಹೋಗಿದ್ದಾನೆ. ಎಷ್ಟೇ ದಿನಗಳಾದರೂ ಯುವಕ ಮರಳಿ ಬಂದಿಲ್ಲ. ಅವನ ಮೊಬೈಲ್​ ಕೂಡ ಸ್ವಿಚ್ಡ್ ಆಫ್ ಬರುತ್ತಿದ್ದು, ಯುವತಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ.

ABOUT THE AUTHOR

...view details