ಕರ್ನಾಟಕ

karnataka

ETV Bharat / bharat

ಪಾಗಲ್​ ಪ್ರೇಮಿಯಿಂದ ಯುವತಿ ಮೇಲೆ ಚಾಕುವಿನಿಂದ ದಾಳಿ.. ಸಹೋದರಿ ಸಹಾಯಕ್ಕೆ ದೌಡಾಯಿಸಿದ್ದ ತಮ್ಮನನ್ನು ಕೊಂದ ಕೀಚಕ - ಗಾಯಗೊಂಡಿರುವ ಯುವತಿಯ ಸ್ಥಿತಿ ಚಿಂತಾಜನಕ

ಪ್ರೀತಿಯನ್ನು ನಿರಾಕರಿಸಿದ ಯುವತಿ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

Youngman attacked a young woman  woman as she rejected his love in Hyderabad  brother died while trying to save her  She is in critical condition  ಪಾಗಲ್​ ಪ್ರೇಮಿಯಿಂದ ಯುವತಿ ಮೇಲೆ ಚಾಕು ದಾಳಿ  ಸಹೋದರಿ ಸಹಾಯಕ್ಕೆ ದೌಡಾಯಿಸಿದ್ದ ತಮ್ಮ  ತಮ್ಮನನ್ನು ಕೊಂದ ಹಂತಕ  ಪ್ರೀತಿಯನ್ನು ನಿರಾಕರಿಸಿದ ಯುವತಿ ಮೇಲೆ ಯುವಕ  ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ  ಯುವತಿ ತನ್ನ ಪ್ರೀತಿಯನ್ನು ನಿರಾಕರಿಸಿದ್ದ  ಗಾಯಗೊಂಡಿರುವ ಯುವತಿಯ ಸ್ಥಿತಿ ಚಿಂತಾಜನಕ  ಚಾಕು ತೆಗೆದುಕೊಂಡು ಆಕೆಯ ನಿವಾಸಕ್ಕೆ ತೆರಳಿದ್ದ
ಪಾಗಲ್​ ಪ್ರೇಮಿಯಿಂದ ಯುವತಿ ಮೇಲೆ ಚಾಕು ದಾಳಿ

By ETV Bharat Karnataka Team

Published : Sep 4, 2023, 11:11 AM IST

ಹೈದರಾಬಾದ್ (ತೆಲಂಗಾಣ):ಯುವತಿ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವಕನೊಬ್ಬ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಯುವತಿ ತಂಗಿದ್ದ ಮನೆಗೆ ಬಂದ ಆರೋಪಿ ಯುವಕ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಆರೋಪಿ ಯುವಕನಿಂದ ತನ್ನ ಸಹೋದರಿಯನ್ನು ರಕ್ಷಿಸಲು ತೆರಳಿದ್ದ ಸಹೋದರ ಸಹ ಸಾವನ್ನಪ್ಪಿದ್ದಾನೆ. ಚಾಕು ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಯುವತಿಯ ಸ್ಥಿತಿ ಚಿಂತಾಜನಕವಾಗಿದೆ. ಭಾನುವಾರ ಮಧ್ಯಾಹ್ನ ಹೈದರಾಬಾದ್‌ನ ಎಲ್‌ಬಿ ನಗರದ ಆರ್‌ಟಿಸಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

ಪೊಲೀಸರು ಮತ್ತು ಸ್ಥಳೀಯರ ಪ್ರಕಾರ, ರಂಗಾರೆಡ್ಡಿ ಜಿಲ್ಲೆಯ ಕೊಂಡೂರ್ಗು ತಾಲೂಕಿನ ಗುಂಡುಮಲ್ಲ ಸುರೇಂದರ್ ಗೌಡ್ ಮತ್ತು ಇಂದಿರಮ್ಮ ಅವರಿಗೆ ಮೂವರು ಮಕ್ಕಳು. ಹಿರಿಯ ಮಗಳು ಸಾಂಘವಿ (26) ರಾಮಂತಪುರ ಹೋಮಿಯೋ ಕಾಲೇಜಿನಲ್ಲಿ ನಾಲ್ಕನೇ ವರ್ಷ ಓದುತ್ತಿದ್ದಾಳೆ. ಎರಡನೇ ಮಗ ಪೃಥ್ವಿ (23) ಇತ್ತೀಚೆಗಷ್ಟೇ ಇಂಜಿನಿಯರಿಂಗ್ ಮುಗಿಸಿ ಉದ್ಯೋಗ ಹಡುಕಾಟದಲ್ಲಿದ್ದ.

ಸಾಂಘವಿ ಮತ್ತು ಪೃಥ್ವಿ ಎಲ್​ಬಿ ನಗರದ ಆರ್​ಟಿಸಿ ಕಾಲೋನಿಯಲ್ಲಿ ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಸಾಂಘವಿ ಮತ್ತು ಫಾರೂಕ್‌ನಗರ ತಾಲೂಕಿನ ನೆರೆಲ್ಲ ಚೆರುವು ಗ್ರಾಮದ ಶಿವಕುಮಾರ್ ಶಾದ್‌ನಗರದ ಶಾಲೆಯೊಂದರಲ್ಲಿ ಹತ್ತನೇ ತರಗತಿ ಓದುತ್ತಿದ್ದರು. ಅಂದಿನಿಂದ ಶಿವಕುಮಾರ್ ಪ್ರೀತಿ ಹೆಸರಲ್ಲಿ ಸಾಂಘವಿಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಎಷ್ಟೇ ಸಾರಿ ನಿರಾಕರಿಸಿದರೂ ಸಹ ಸಾಂಘವಿಗೆ ಶಿವಕುಮಾರ್​ ತೊಂದರೆ ಕೊಡುತ್ತಿದ್ದನು.

ಸಾಂಘವಿ ಹೈದರಾಬಾದ್‌ಗೆ ಬಂದರೂ ಸಹ ಶಿವಕುಮಾರ್​ ಆಕೆಗೆ ಕಿರುಕುಳ ನೀಡುವುದನ್ನು ನಿಲ್ಲಿಸಿರಲಿಲ್ಲ. ಪದವಿ ಮುಗಿಸಿರುವ ಶಿವಕುಮಾರ್ ರಾಮಂತಪುರದಲ್ಲಿ ನೆಲೆಸಿದ್ದಾರೆ. ಇತ್ತೀಚೆಗಷ್ಟೇ ಯುವತಿ ಬಳಿ ಪ್ರೀತಿಯ ವಿಚಾರ ಮಾತನಾಡಿದಾಗ ಆಕೆ ನಿರಾಕರಿಸಿದ್ದಳು. ಪದೇ ಪದೇ ನಿರಾಕರಿಸುತ್ತಿದ್ದರಿಂದ ಶಿವಕುಮಾರ್ ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದ ಎಂದು ತನಖೆ ವೇಳೆ ತಿಳಿದು ಬಂದಿದೆ.

ಭಾನುವಾರ ಸಾಂಘವಿ ವಿಳಾಸ ತಿಳಿದ ಆರೋಪಿ ಚಾಕು ತೆಗೆದುಕೊಂಡು ಆಕೆಯ ನಿವಾಸಕ್ಕೆ ತೆರಳಿದ್ದನು. ಸಾಂಘವಿ ಸಹೋದರ ಪೃಥ್ವಿ ಹೊರಗೆ ಹೋಗುತ್ತಿರುವುದನ್ನು ಗಮನಿಸಿದ ಆರೋಪಿ ಶಿವ ಯುವತಿಯ ಮನೆಯೊಳಗೆ ಪ್ರವೇಶಿಸಿದ್ದಾನೆ. ಬಳಿಕ ಪ್ರೇಮ ವಿಚಾರ ಪ್ರಸ್ತಾಪಿಸಿದ ಶಿವ ಚಾಕು ತೋರಿಸಿ ಬೆದರಿಸಿ ವಾಗ್ವಾದಕ್ಕೆ ಇಳಿದಿದ್ದಾನೆ. ಈ ವೇಳೆ ಹೊರಗೆ ಹೋಗಿದ್ದ ಪೃಥ್ವಿ ಮನೆಗೆ ವಾಪಸ್​ ಬಂದಿದ್ದಾನೆ. ಆರೋಪಿ ತನ್ನ ಅಕ್ಕಳಿಗೆ ಚಾಕುವಿನಿಂದ ಬೆದರಿಸುತ್ತಿದ್ದನ್ನು ಸಹೋದರ ತಡೆಯಲು ಮುಂದಾಗಿದ್ದ. ಈ ವೇಳೆ ಆರೋಪಿ ಪೃಥ್ವಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಆರೋಪಿಯು ಪೃಥ್ವಿ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಸಾಂಘವಿ ಮುಖದ ಮೇಲೂ ಹಲ್ಲೆ ನಡೆಸಿದ್ದಾನೆ. ಬಳಿಕ ಸಾಂಘವಿ ಭಯದಿಂದ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು. ತೀವ್ರ ಗಾಯಗೊಂಡಿದ್ದ ಪೃಥ್ವಿ ಆರೋಪಿಯಿಂದ ತಪ್ಪಿಸಿಕೊಂಡು ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿದ್ದಾನೆ. ಬಳಿಕ ರಸ್ತೆ ಮೇಲೆ ಕುಸಿದು ಬಿದ್ದಿದ್ದಾನೆ.

ಯುವತಿ ಕಿರುಚಾಟ ಕೇಳಿ ಪಕ್ಕದ ಮನೆಯ ಮಹಿಳೆ ಝಾನ್ಸಿ ಸಹಾಯಕ್ಕೆ ದೌಡಾಯಿಸಿದ್ದಾರೆ. ಅಷ್ಟೊತ್ತಿಗಾಗಲೇ ಚಾಕು ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯ ಸಹೋದರ ಎಲ್ಲ ವಿಷಯವನ್ನು ವಿವರಿಸಿದ್ದಾನೆ. ಇದರಿಂದ ಎಚ್ಚೆತ್ತಕೊಂಡ ಝಾನ್ಸಿ ದೊಣ್ಣೆ ತೆಗೆದುಕೊಂಡು ರೂಮಿನ ಮುಂದೆ ಹೋಗಿ ಬಾಗಿಲು ತಟ್ಟಿದ್ದಾರೆ. ನನಗೆ ಏನಾದ್ರೂ ಮಾಡಿದರೆ ಶಿಕ್ಷೆಯಾಗುತ್ತೆ ಎಂದು ಆರೋಪಿಗೆ ಎಚ್ಚರಿಸಿದ್ದರು. ಇದರಿಂದ ಭಯಭೀತನಾದ ಆರೋಪಿ ಯುವತಿ ಅಡಗಿಕೊಂಡಿದ್ದ ಕೊಠಡಿಯ ಬಾಗಿಲು ಒಡೆಯುವ ಯತ್ನ ನಿಲ್ಲಿಸಿದ್ದಾನೆ. ಇದಕ್ಕೂ ಮುನ್ನ ಝಾನ್ಸಿ ಚಾಕಚಕ್ಯತೆಯಿಂದ ಯುವತಿಯನ್ನು ಮತ್ತೊಂದು ಬಾಗಿಲಿನಿಂದ ಹೊರಗೆ ಕರೆತಂದಿದ್ದರು.

ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಪೃಥ್ವಿಯನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಆದ್ರೆ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು. ಯುವತಿಯನ್ನು ಉತ್ತಮ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ಠಾಣೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಲ್ ಬಿ ನಗರ ಡಿಸಿಪಿ ಸಾಯಿಶ್ರೀ ತಿಳಿಸಿದ್ದಾರೆ.

ಓದಿ:ಮಗಳಿಗೆ ಕಿರುಕುಳ ನೀಡುತ್ತಿದ್ದ ಯುವಕರಿಬ್ಬರನ್ನು ಕೊಂದು ಮೂಟೆ ಕಟ್ಟಿದ ತಂದೆ!

ABOUT THE AUTHOR

...view details