ಹೈದರಾಬಾದ್: ಸಾಮಾಜಿಕ ಜಾಲತಾಣದ ಫೇಸ್ಬುಕ್ನಲ್ಲಿ ಪರಿಚಯವಾದ ಯುವತಿಯೊಬ್ಬಳು ಬಣ್ಣಬಣ್ಣದ ಮಾತನಾಡಿ, ವ್ಯಕ್ತಿಯೊಬ್ಬನನ್ನು ಪ್ರೀತಿಯ ಬಲೆಗೆ ಸಿಲುಕಿಸಿಕೊಂಡು, ತದನಂತರ ಆತನಿಗೆ ಹಣಕ್ಕೋಸ್ಕರ ಬ್ಲಾಕ್ ಮೇಲ್ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮೋಸ ಹೋಗಿರುವ ಯುವಕ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಹೈದರಾಬಾದ್ನ ಬಂಜಾರಾ ಹಿಲ್ಸ್ನಲ್ಲಿ ಈ ಪ್ರಕರಣ ನಡೆದಿದ್ದು, ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡ್ತಿದ್ದ 32 ವರ್ಷದ ವ್ಯಕ್ತಿ ಕಳೆದ ಜುಲೈ ತಿಂಗಳಲ್ಲಿ ಸಾಕ್ಷಿ ವರ್ಮಾ ಎಂಬ ಯುವತಿಯ ಫೇಸ್ಬುಕ್ ಫ್ರೆಂಡ್ ರಿಕ್ವೆಸ್ಟ್ ಪಡೆದುಕೊಂಡಿದ್ದಾನೆ. ಅದಕ್ಕೆ ಅನುಮೋದನೆ ನೀಡಿದ ಬಳಿ ಇಬ್ಬರ ನಡುವೆ ಚಾಟಿಂಗ್ ಆರಂಭಗೊಂಡಿದೆ. ತದನಂತರ ಇಬ್ಬರು ಸ್ನೇಹಿತರಾಗಿದ್ದಾರೆ. ಈ ವೇಳೆ ಯುವತಿ ತನ್ನೆಲ್ಲ ಬಟ್ಟೆ ತೆಗೆದು ಯುವಕನಿಗೂ ಅದೇ ರೀತಿ ಮಾಡಲು ಸೂಚನೆ ನೀಡಿದ್ದಾಳೆ. ಆಕೆಯ ಬಣ್ಣದ ಮಾತಿಗೆ ಮರುಳಾಗಿ ಬಟ್ಟೆ ತೆಗೆದಿದ್ದಾನೆ. ಈ ವೇಳೆ ಅದರ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾಳೆ.