ಕಡಲೂರು(ತಮಿಳುನಾಡು):ಕಡಲೂರಿನ ಕಮ್ಮಿಯಂಪೆಟ್ಟೈ ಪ್ರದೇಶದಲ್ಲಿ ತಡರಾತ್ರಿ ಇಬ್ಬರು ಲವರ್ಸ್ ಮಾತನಾಡುತ್ತಾ ನಿಂತಿದ್ದ ವೇಳೆ ಅಲ್ಲಿಗೆ ಬಂದಿರುವ ಮೂವರು ದುಷ್ಕರ್ಮಿಗಳು, ತಮ್ಮ ಮೊಬೈಲ್ನಲ್ಲಿ ಅವರ ಫೋಟೋ ತೆಗೆದು ಬೆದರಿಕೆ ಹಾಕಿದ್ದಾರೆ. ಇದರ ಬೆನ್ನಲ್ಲೇ 21 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ರಾತ್ರಿ ಗಸ್ತಿನಲ್ಲಿದ್ದ ಪೊಲೀಸರ ಮುಂದೆ ಯುವತಿ ತನ್ನ ಮೇಲೆ ನಡೆದಿರುವ ದುಷ್ಕೃತ್ಯದ ಬಗ್ಗೆ ಹೇಳಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಕಡಲೂರು ಹೆಡ್ಪೋಸ್ಟ್ ಆಫೀಸ್ ಬಳಿಯ ಬಸ್ ನಿಲ್ದಾಣದಲ್ಲಿ ತನ್ನ ಸ್ನೇಹಿತನೊಂದಿಗೆ ಯುವತಿ ಮಾತನಾಡುತ್ತಾ ನಿಂತಿದ್ದಾಗ ಈ ಘಟನೆ ನಡೆದಿದೆ. ಮೂವರು ದುಷ್ಕರ್ಮಿಗಳ ಪೈಕಿ ಇಬ್ಬರು ಯುವಕನನ್ನು ಬಲವಾಗಿ ಹಿಡಿದುಕೊಂಡಿದ್ದು, ಮತ್ತೋರ್ವ ಅತ್ಯಾಚಾರವೆಸಗಿದ್ದ.