ಕರ್ನಾಟಕ

karnataka

ETV Bharat / bharat

ಗೆಳತಿಯನ್ನ ಮನೆಗೆ ಕರೆದ.. ತಂಪು ಪಾನೀಯದಲ್ಲಿ ಮತ್ತೇರುವ ಔಷಧಿ ಕಲಿಸಿದ.. ನಗ್ನಗೊಳಿಸಿ_____ - ಆಂಧ್ರಪ್ರದೇಶ ಅಪರಾಧ ಸುದ್ದಿ

ಇಂಟರ್​ ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯನ ಮನೆಗೆ ತೆರಳಿದ್ದಾಳೆ. ಈ ವೇಳೆ ಆ ವಿದ್ಯಾರ್ಥಿ ಆಕೆಗೆ ಕೂಲ್ಡ್ರಿಂಕ್ಸ್​ನಲ್ಲಿ ಮತ್ತು ಬರುವ ಔಷಧಿ ಕಲಿಸಿ ಕೊಟ್ಟಿದ್ದಾನೆ. ಬಳಿಕ ಆಕೆಯ ನಗ್ನ ಚಿತ್ರಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ..

young woman private photos viral, private photos viral in Social media, Andhra Pradesh crime news, ಯುವತಿ ಖಾಸಗಿ ಫೋಟೋಗಳು ವೈರಲ್​, ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಖಾಸಗಿ ಫೋಟೋಗಳು ವೈರಲ್​, ಆಂಧ್ರಪ್ರದೇಶ ಅಪರಾಧ ಸುದ್ದಿ,
ತಂಪು ಪಾನಿಯಾದಲ್ಲಿ ಮತ್ತು ಔಷಧಿ ಕಲಿಸಿ, ನಗ್ನ ಚಿತ್ರಗಳನ್ನ ಸೆರೆ ಹಿಡಿದು

By

Published : Apr 15, 2022, 1:10 PM IST

ಪ್ರಕಾಶಂ :ವಿದ್ಯಾರ್ಥಿನಿಯೊಬ್ಬಳು ತನ್ನ ಸಹಪಾಠಿ ಮನೆಗೆ ತೆರಳಿದ್ದಾಗ ಆತ ಕೂಲ್ಡ್ರಿಂಕ್ಸ್​ನಲ್ಲಿ ಮತ್ತು ಬರುವ ಔಷಧಿ ಕಲಿಸಿಕೊಟ್ಟಿದ್ದಾನೆ. ಇದನ್ನು ಸೇವಿಸಿದ ಕೆಲವೇ ಕ್ಷಣದಲ್ಲಿ ಮೂರ್ಛೆಗೆ ಹೋಗಿದ್ದ ವಿದ್ಯಾರ್ಥಿನಿಯ ನಗ್ನ ಚಿತ್ರಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿರುವ ಘಟನೆ ಪೆದ್ದದೊರ್ನಾಲ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಏನಿದು ಘಟನೆ? :ಗ್ರಾಮವೊಂದರ ನಿವಾಸಿ ದೂದೆಕುಲ ನಾಗೂರ್​ ಮೀರಾವಲಿ ಎಂಬ ಯುವಕ ಡಿಪ್ಲೋಮಾ ಓದುತ್ತಿದ್ದಾನೆ. ಮತ್ತೊಂದು ಗ್ರಾಮದ ನಿವಾಸಿ ವಿದ್ಯಾರ್ಥಿನಿಯೊಬ್ಬಳು ಸ್ನೇಹಿತಳ ಹುಟ್ಟು ಹಬ್ಬಕ್ಕೆ ಯುವಕನ ಗ್ರಾಮಕ್ಕೆ ತೆರಳಿದ್ದಾಳೆ. ಪರಿಚಯ ಇದ್ದದ್ದರಿಂದ ಯುವಕ ಮೀರಾವಲಿ ತನ್ನ ಮನೆಗೆ ಯುವತಿಯನ್ನು ಆಹ್ವಾನಿಸಿದ್ದಾನೆ. ಅದರಂತೆ ಮನೆಗೆ ತೆರಳಿದ್ದ ವೇಳೆ ಯುವತಿಗೆ ಮೀರಾವಲಿ ಮತ್ತು ಔಷಧಿ ಕಲಿಸಿ ಕೂಲ್ಡ್ರಿಂಕ್ಸ್​ ಕೊಟ್ಟಿದ್ದಾನೆ. ಅದರಂತೆ ಯುವತಿ ಸೇವಿಸಿ ಸ್ವಲ್ಪ ಸಮಯದ ಬಳಿಕ ಮೂರ್ಛೆಗೆ ಹೋಗಿದ್ದಾಳೆ.

ಓದಿ:ಕುಡಿದ ಮತ್ತಿನಲ್ಲಿ ಕಾಮುಕನ ಅಟ್ಟಹಾಸ.. ಹಸುಳೆ ಮೇಲೆ ಅತ್ಯಾಚಾರವೆಸಗಿದ ವೃದ್ಧ..

ಯುವತಿ ಮೂರ್ಛೆಗೆ ಹೋದ ನಂತರ ಮೀರಾವಲಿ ತನ್ನ ಮೆಕಾನಿಕ್​ ಗೆಳೆಯನಾದ ರಸೂಲ್​ನನ್ನು ಕರೆದಿದ್ದಾನೆ. ಬಳಿಕ ಇಬ್ಬರು ಯುವತಿಯ ನಗ್ನ ಚಿತ್ರಗಳನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮೀರಾವಲಿ ಹರಿಯಬಿಟ್ಟಿದ್ದಾನೆ.

ಈ ಫೋಟೋಗಳು ವೈರಲ್​ ಆಗಿದ್ದು, ಯುವತಿ ಕುಟುಂಬಸ್ಥರ ಗಮನಕ್ಕೆ ಬಂದಿದೆ. ಕೂಡಲೇ ಯುವತಿ ಪೋಷಕರು ಪೆದ್ದದೊರ್ನಾಲ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದರು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿರುವ ಯುವತಿಯ ಫೋಟೋಗಳನ್ನು ತೆಗೆದು ಹಾಕಿದ್ದಾರೆ. ಬಳಿಕ ಆ ಇಬ್ಬರು ಯುವಕರನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ಘಟನೆ ಕುರಿತು ಪೆದ್ದದೊರ್ನಾಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details