ಕರ್ನಾಟಕ

karnataka

ETV Bharat / bharat

ತಂದೆಯ ಎದುರೇ ಯುವತಿ ಅಪಹರಣ: ವಿಡಿಯೋ - Woman Kidnapped in Sircilla district

ತೆಲಂಗಾಣದ ರಾಜಣ್ಣ ಸಿರ್ಸಿಲ್ಲ ಜಿಲ್ಲೆಯಲ್ಲಿ ಬೆಳಂಬೆಳಗ್ಗೆ ಯುವತಿಯನ್ನು ಕೆಲ ಯುವಕರು ಅಪಹರಣ ಮಾಡಿದ್ದಾರೆ. ತಂದೆಯ ಮುಂದೆಯೇ ಯುವತಿಯನ್ನು ಕರೆದೊಯ್ಯಲಾಗಿದೆ.

ತಂದೆಯ ಎದುರೇ ಯುವತಿ ಅಪಹರಣ
ತಂದೆಯ ಎದುರೇ ಯುವತಿ ಅಪಹರಣ

By

Published : Dec 20, 2022, 2:07 PM IST

ತಂದೆಯ ಎದುರೇ ಯುವತಿ ಅಪಹರಣ

ರಾಜಣ್ಣ ಸಿರ್ಸಿಲ್ಲ (ತೆಲಂಗಾಣ): ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಚಂದೂರ್ತಿ ಮಂಡಲದಲ್ಲಿ ಯುವತಿಯೊಬ್ಬಳನ್ನು ಅಪಹರಣ ಮಾಡಿರುವ ಪ್ರಕರಣ ಎಲ್ಲೆಡೆ ಸಂಚಲನ ಮೂಡಿಸಿದೆ. ಬೆಳ್ಳಂಬೆಳಗ್ಗೆಯೇ ಕಾರಿನಲ್ಲಿ ಬಂದ ಕೆಲವರು ಯುವತಿ ತಂದೆಯನ್ನು ತಳ್ಳಿ, ಆಕೆಯನ್ನು ಅಪಹರಿಸಿದ್ದಾರೆ.

ಮೂಡಪಲ್ಲಿ ಗ್ರಾಮದ ಮನೆಯೊಂದಕ್ಕೆ ಬೆಳಿಗ್ಗೆ ಕೆಲವರು ಮಾಸ್ಕ್ ಧರಿಸಿ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದಾರೆ. ಯುವತಿ ಹೊರಗೆ ಬಂದಾಗ ಅಪಹರಣ ಮಾಡಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಯುವತಿಯ ತಂದೆ ತಡೆಯಲು ಯತ್ನಿಸಿದ್ದಾರೆ. ಆಗ ಅಪಹರಣಕಾರರು ತಂದೆಯನ್ನು ತಳ್ಳಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಯುವತಿ ಕುಟುಂಬಸ್ಥರು ಅದೇ ಗ್ರಾಮದ ಕಾಟುಕುರಿ ಜಾನ್ ಎಂಬ ವ್ಯಕ್ತಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಯುವತಿ ಅಪಹರಣ... ಬಂದೂಕಿನಿಂದ ಬೆದರಿಸಿ ಕಾಮುಕರಿಂದ ಗ್ಯಾಂಗ್​ ರೇಪ್​​​!

ಒಂದು ವರ್ಷದ ಹಿಂದೆ ಜಾನ್ - ಯುವತಿ ಓಡಿ ಹೋಗಿದ್ದರು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಜಾನ್, ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ್ದಾನೆ ಎಂದು ಪೋಷಕರು ದೂರು ನೀಡಿದ್ದಾರೆ. ಸಿರ್ಸಿಲ್ಲ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details