ತಿರುವನಂತಪುರಂ(ಕೇರಳ):ತಿರುವನಂತಪುರಂ ಜಿಲ್ಲೆಯಕಝಕ್ಕೂಟಂನಲ್ಲಿ ಯುವತಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಅಟ್ಟಿಂಗಲ್ ಮೂಲದ ಕಿರಣ್ ಬಂಧಿತ ಆರೋಪಿ. ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಕಝಕ್‌ಕೂಟಂನ ರೆಸ್ಟೋರೆಂಟ್‌ನಲ್ಲಿ ಊಟ ಮಾಡಲು ಬಂದಿದ್ದ ಯುವತಿಯನ್ನು ಅಪಹರಿಸಿ ಗೋದಾಮಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರದ ನಂತರ ಆರೋಪಿ ಸಂತ್ರಸ್ತೆಯ ಬಟ್ಟೆಗಳನ್ನು ತೆಗೆದು ಗೋದಾಮಿನಲ್ಲಿ ಬಿಟ್ಟು ಹೋಗಿದ್ದ. ಸಂತ್ರಸ್ತೆ ನಂತರ ಮಹಿಳೆ ಸಹಾಯ ಕೇಳುತ್ತ ಹತ್ತಿರದ ಮನೆಗಳಿಗೆ ತಲುಪಿದ್ದಾಳೆ. ನೆರೆಹೊರೆಯವರು ಯುವತಿಯನ್ನು ಕಜಕ್ಕೂಟ್ಟಂ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ದೂರನ್ನು ಸ್ವೀಕರಿಸಿದ ಪೊಲೀಸರು ಆರೋಪಿ ಕಿರಣ್‌ನನ್ನು ಅತ್ಯಾಚಾರ ನಡೆದ ಕಝಕೂಟಂನ ಗೋದಾಮಿನ ಬಳಿಯಿಂದ ಬಂಧಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ಪ್ರಸ್ತುತ ತಿರುವನಂತಪುರಂ ಎಸ್‌ಎಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತರೆ ಕ್ರೈಮ್ ಸುದ್ದಿಗಳು..
ಲಿಫ್ಟ್ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ : ಇನ್ನೊಂದೆಡೆ ಬೆಂಗಳೂರಿನ ಅಪಾರ್ಟ್ಮೆಂಟ್ಗೆ ಫುಡ್ ಡೆಲಿವರಿ ಮಾಡಲು ಬಂದು ಲಿಫ್ಟ್ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಲಘಟ್ಟಪುರ ವ್ಯಾಪ್ತಿಯ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಜೂನ್ 21ರ ಸಂಜೆ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ತಲಘಟ್ಟಪುರ ಪೊಲೀಸರು ಆರೋಪಿ ಚೇತನ್ (30) ಎಂಬಾತನನ್ನು ಬಂಧಿಸಿದ್ದರು.
ಅಪಾರ್ಟ್ಮೆಂಟ್ನ 3ನೇ ಮಹಡಿಯಲ್ಲಿರುವವರಿಗೆ ಫುಡ್ ಡೆಲಿವರಿ ಮಾಡಲು ಚೇತನ್ ಲಿಫ್ಟ್ನಲ್ಲಿ ಹೋಗುತ್ತಿದ್ದ. ಇದೇ ಸಂದರ್ಭದಲ್ಲಿ ಲಿಫ್ಟ್ ಬಳಸಿ 13ನೇ ಮಹಡಿಯಲ್ಲಿ ಟ್ಯೂಷನ್ ಪಡೆಯಲು ಟೀಚರ್ ಬಳಿ ಬಾಲಕಿ ತೆರಳುತ್ತಿದ್ದಳು. ಈ ವೇಳೆ ಆರೋಪಿ ಬ್ಯಾಡ್ ಟಚ್ ಮೂಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದಾದ ನಂತರ ಲಿಫ್ಟ್ನಿಂದ ಹೊರಬಂದ ಬಾಲಕಿ ಟ್ಯೂಷನ್ ಟೀಚರ್ಗೆ ವಿಷಯ ತಿಳಿಸಿದ್ದಳು.
ತಕ್ಷಣವೇ ಶಿಕ್ಷಕಿ ಬಾಲಕಿಯ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಆರೋಪಿ ವಾಪಸ್ ಹೋಗುವುದರೊಳಗೆ ಅಪಾರ್ಟ್ಮೆಂಟ್ನ ಇತರ ನಿವಾಸಿಗಳು, ಸೆಕ್ಯೂರಿಟಿ ಸೇರಿ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ತಲಘಟ್ಟಪುರ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಡಿಗೆ ಕಾರು ಪಡೆದು ವಂಚಿಸುತ್ತಿದ್ದ ಆರೋಪಿ ಬಂಧನ : ಬಾಡಿಗೆಗೆಂದು ಕಾರುಗಳನ್ನು ಪಡೆದುಕೊಂಡು ನಂತರ ಅವುಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ ಫೈನಾನ್ಸಿಯರ್‌ಗಳ ಬಳಿ ಅಡಮಾನ ಇಟ್ಟು ಪರಾರಿಯಾಗಿದ್ದ ಆರೋಪಿಯನ್ನು ತಿಲಕನಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೇದಾಂತ್ ಗೌಡ ಅಲಿಯಾಸ್ ಜೀವನ್ (26) ಬಂಧಿತ ಆರೋಪಿ ಎಂಬುದು ತಿಳಿದುಬಂದಿದೆ. ಬಂಧಿತನಿಂದ 78.70 ಲಕ್ಷ ರೂ. ಮೌಲ್ಯದ ಆರು ವಿವಿಧ ಕಂಪನಿಗಳ ಕಾರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಹಾಸನ ಮೂಲದ ಆರೋಪಿ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ. ಕಾರುಗಳನ್ನು ಬಾಡಿಗೆಗೆ ನೀಡುವವರಿಂದ ಮದುವೆ ಸಮಾರಂಭ ಹಾಗೂ ಇತರೆ ಕಾರಣಗಳನ್ನು ನೀಡಿ ಕಾರುಗಳನ್ನು ಬಾಡಿಗೆಗೆ ಪಡೆದುಕೊಂಡು ಹೋಗುತ್ತಿದ್ದ. ಬಾಡಿಗೆಗೆ ಕಾರನ್ನು ಪಡೆಯುವಾಗ ಮಾಲೀಕರಿಂದ ಕಾರುಗಳ ಇನ್ಶುರೆನ್ಸ್, ಆರ್‌ಸಿ ಕಾರ್ಡ್, ಬ್ಯಾಂಕ್ ಎನ್‌ಒಸಿ ಸೇರಿದಂತೆ ಎಲ್ಲಾ ಅಸಲಿ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದ ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ:ಫುಡ್ ಡೆಲಿವರಿಗೆ ಬಂದು ಲಿಫ್ಟ್ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ; ಆರೋಪಿಗೆ ನ್ಯಾಯಾಂಗ ಬಂಧನ