ಕರ್ನಾಟಕ

karnataka

ETV Bharat / bharat

ನಿಶ್ಚಿತಾರ್ಥ ಮಂಟಪದಲ್ಲೇ ರಂಪಾಟ ಮಾಡಿದ ಯುವತಿ.. ಕಾರಣ? - Civil Line Police Officer Dharmendra Vaishnav

ಪೆಟ್ರೋಲ್ ತುಂಬಿದ ಬಾಟಲ್​ ಹಿಡಿದುಕೊಂಡು ಬಂದ ಯುವತಿ, ನಿಶ್ಚಿತಾರ್ಥ ನಿಗದಿಯಾಗಿದ್ದ ವ್ಯಕ್ತಿ ತನ್ನೊಂದಿಗೆ ಈ ಹಿಂದೆ ಅಕ್ರಮ ಸಂಬಂಧ ಹೊಂದಿದ್ದು, ನನ್ನ ಗರ್ಭಕ್ಕೆ ಕಾರಣನಾಗಿದ್ದಾನೆ ಎಂದು ಆರೋಪಿಸಿದ್ದಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುದಾಗಿ ಬೆದರಿಕೆ ಕೂಡ ಹಾಕಿದ್ದಾರೆ.

young woman creates ruckus at engagement in Bailaspur
ನಿಶ್ಚಿತಾರ್ಥ ಮಂಟಪದಲ್ಲೆ ರಂಪಾಟ ಮಾಡಿದ ಯುವತಿ

By

Published : Dec 5, 2022, 5:14 PM IST

ಬಿಲಾಸ್‌ಪುರ:ಯುವತಿಯೊಬ್ಬಳು ಅಶುತೋಶ್​ ಎನ್ನುವ ಯುವಕನ ನಿಶ್ಚಿತಾರ್ಥ ನಡೆಯುವ ಸ್ಥಳಕ್ಕೆ ತೆರಳಿ, ಅಶುತೋಶ್​ ನನ್ನ ಮೇಲೆ ಅತ್ಯಾಚಾರವೆಸೆಗಿದ್ದಾನೆ ಎಂದು ರಂಪಾಟ ಮಾಡಿರುವ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ನಡೆದಿದೆ. ತಾರಾಬಹಾರ್ ಪ್ರದೇಶದ ಸಿಎಂಡಿ ಚೌಕ್ ಹೋಟೆಲ್‌ನಲ್ಲಿ ಅಶುತೋಷ್ ಎನ್ನುವವರ ನಿಶ್ಚಿತಾರ್ಥ ನಡೆಯುತಿತ್ತು. ಈ ಸಂದರ್ಭದಲ್ಲಿ ಆಗಮಿಸಿದ ಯುವತಿ ಗಲಾಟೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೆಟ್ರೋಲ್ ತುಂಬಿದ ಬಾಟಲ್ ಹಿಡಿದುಕೊಂಡು ಬಂದ ಯುವತಿ, ನಿಶ್ಚಿತಾರ್ಥ ನಿಗದಿಯಾಗಿದ್ದ ವ್ಯಕ್ತಿ ತನ್ನೊಂದಿಗೆ ಈ ಹಿಂದೆ ಅಕ್ರಮ ಸಂಬಂಧ ಹೊಂದಿದ್ದು, ನನ್ನ ಪ್ರಗ್ನೆನ್ಸಿಗೆ ಕಾರಣನಾಗಿದ್ದಾನೆ ಎಂದು ಆರೋಪಿಸಿದ್ದಾಳೆ. ಅಷ್ಟೇ ಅಲ್ಲ ತಾನು ಆತ್ಮಹತ್ಯೆ ಮಾಡಿಕೊಳ್ಳುದಾಗಿ ಬೆದರಿಕೆ ಕೂಡ ಹಾಕಿದ್ದಾಳೆ.

ಅಶುತೋಷ್ ವಿರುದ್ಧ ನಾನು ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 376 ರ ಅಡಿ ಪ್ರಕರಣ ದಾಖಲಿಸಿದ್ದೆ. ಅಶುತೋಷ್ ಅವರ ತಂದೆ ಪೊಲೀಸರ ಮುಂದೆ ನನ್ನ ಅವನ ಮದುವೆಗೂ ಒಪ್ಪಿಗೆ ನೀಡಿದ್ದರು. ಆದರೆ, ಆ ಬಳಿಕ ಈ ಕುರಿತು ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲಿಲ್ಲ ಎಂದು ಯುವತಿ ಹೇಳಿದ್ದಾಳೆ.

ಆರೋಪ ನಿರಾಕರಿಸಿರುವ ಅಶುತೋಷ್​:ಆದರೆ ಯುವತಿಯ ಈ ಆರೋಪವನ್ನು ಅಶುತೋಷ್ ಅವರ ತಂದೆ ಅಲ್ಲಗಳೆದಿದ್ದಾರೆ. ಯುವತಿ ಮತ್ತು ಆಕೆಯ ಕುಟುಂಬದವರು ತಮ್ಮ ಮಗನ ಮೇಲೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಯುವತಿಯನ್ನು ಸಮಾಧಾನ ಪಡಿಸಿದರು. ಸದ್ಯ ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಸಿವಿಲ್ ಲೈನ್ ಪೊಲೀಸ್ ಠಾಣೆಯ ಅಧಿಕಾರಿ ಧರ್ಮೇಂದ್ರ ವೈಷ್ಣವ್ ತಿಳಿಸಿದ್ದಾರೆ.

ಇದನ್ನೂ ಓದಿ:ಉದ್ಯಮಿ ಪುತ್ರ ನಾಪತ್ತೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​: ಮಗನ ಕೊಲೆಗೆ ತಂದೆಯಿಂದಲೇ ಸುಪಾರಿತಿಳಿಸಿದ್ದಾರೆ.

ABOUT THE AUTHOR

...view details