ಮಹಬೂಬ್‌ನಗರ(ತೆಲಂಗಾಣ):ಅನೇಕ ಯುವಕ ಮತ್ತು ಯುವತಿಯರು ಪೊಲೀಸ್ ಇಲಾಖೆಯಲ್ಲಿ ಸೇರಲು ಇಚ್ಛಿಸುತ್ತಾರೆ. ಅದಕ್ಕಾಗಿ ಕಷ್ಟಪಟ್ಟು ಓದಿ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೈಪೋಟಿಗೆ ಸಜ್ಜಾಗುತ್ತಾರೆ. ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ, ದೈಹಿಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಆದ್ರೆ ಕೆಲ ಯುವತಿಯರಿಗೆ ಅವರ ಎತ್ತರ ಶಾಪವಾಗಿ ಪರಿಣಮಿಸುತ್ತಿದೆ. ಹೀಗಾಗಿ ಪೊಲೀಸ್ ಸಮವಸ್ತ್ರ ಧರಿಸುವ ಮತ್ತು ಲಾಠಿ ಹಿಡಿಯುವ ಅವರ ಕನಸು ಕನಸಾಗಿಯೇ ಉಳಿದಿದೆ. ಯುವತಿಯೊಬ್ಬರು ತಮ್ಮ ಎತ್ತರವನ್ನು ಹೆಚ್ಚಿಸಿಕೊಳ್ಳಲು ಅಡ್ಡದಾರಿ ಹಿಡಿದು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.
ಏನಿದು ಘಟನೆ: ಮಹಬೂಬ್‌ನಗರದ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ಮಹಿಳಾ ಅಭ್ಯರ್ಥಿಗಳಿಗೆ ಫಿಟ್‌ನೆಸ್ ಪರೀಕ್ಷೆ ನಡೆಸಲಾಗುತ್ತಿದೆ. ಬುಧವಾರ ನಡೆದ 800 ಮೀಟರ್ ಓಟದಲ್ಲಿ ಮಹಬೂಬ್‌ನಗರ ಜಿಲ್ಲೆಯ ಯುವತಿಯೊಬ್ಬರು ಅರ್ಹತೆ ಪಡೆದು ಎತ್ತರ ಅಳೆಯುವ ಹಂತಕ್ಕೆ ತಲುಪಿದ್ದರು. ಪೊಲೀಸ್ ಉದ್ಯೋಗಕ್ಕೆ ಅರ್ಹತೆ ಪಡೆಯಲು ಮಹಿಳಾ ಅಭ್ಯರ್ಥಿಯೊಬ್ಬರು ತನ್ನ ಎತ್ತರವನ್ನು ಹೆಚ್ಚಿಸಲು ಮಾಡಿದ ಪ್ರಯತ್ನವನ್ನು ಮಹಬೂಬ್‌ನಗರ ಜಿಲ್ಲಾ ಪೊಲೀಸರು ವಿಫಲಗೊಳಿಸಿದ್ದಾರೆ.