ಕರ್ನಾಟಕ

karnataka

ETV Bharat / bharat

ಯುವತಿಯರ ಮಧ್ಯೆ ಪ್ರೇಮಾಂಕುರ.. ಠಾಣೆಯ ಶೌಚಾಲಯದಲ್ಲೇ ವಿದ್ಯಾರ್ಥಿನಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಯತ್ನ - ಪೋಷಕರ ವಿರೋಧದ ನಡುವೆಯೂ ಇಬ್ಬರು ಆಗಾಗ ಭೇಟಿ

ತನ್ನ ಸ್ನೇಹಿಳ ಜೊತೆಗಿನ ಸಂಬಂಧ ಕಳೆದುಕೊಂಡ ಯುವತಿಯೊಬ್ಬಳು ಮನನೊಂದ ಪೊಲೀಸ್​ ಠಾಣೆಯ ವಾಶ್​ರೂಂನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ನಡೆದಿದೆ.

Young woman attempted suicide  attempted suicide after love fail with girl friend  TamilNadu young woman suicide attempt  ಯುವತಿಯರ ಮಧ್ಯೆ ಪ್ರೇಮಾಕುಂರ  ವಿದ್ಯಾರ್ಥಿನಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ  ಪೊಲೀಸ್​ ಠಾಣೆಯ ವಾಶ್​ರೂಂನಲ್ಲಿಯೇ ಆತ್ಮಹತ್ಯೆಗೆ ಯತ್ನ  ಪ್ರೀತಿ ಕುಟುಂಬಸ್ಥರಿಗೆ ತಿಳಿಯುತ್ತಿದ್ದಂತೆ ವಿರೋಧ  ಪೋಷಕರ ವಿರೋಧದ ನಡುವೆಯೂ ಇಬ್ಬರು ಆಗಾಗ ಭೇಟಿ  ಕೊಯಮತ್ತೂರಿನ ಖಾಸಗಿ ಕಂಪನಿಯಲ್ಲಿ ಕೆಲಸ
ಯುವತಿಯರ ಮಧ್ಯೆ ಪ್ರೇಮಾಂಕುರ

By

Published : Nov 10, 2022, 11:51 AM IST

ಧರ್ಮಪುರಿ(ತಮಿಳುನಾಡು): ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಯುವತಿಯರ ಮಧ್ಯೆ ಪ್ರೇಮಾಂಕುರವಾಗಿದ್ದು, ಇವರ ಪ್ರೀತಿ ಕುಟುಂಬಸ್ಥರಿಗೆ ತಿಳಿದಿದೆ. ಪೋಷಕರ ವಿರೋಧದ ನಡುವೆಯೂ ಈ ನಾರಿಯರು ಮನೆ ಬಿಟ್ಟು ಓಡಿ ಹೋಗಿ ಜೀವನ ಸಾಗಿಸುತ್ತಿರುವ ಪ್ರಕರಣ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ: ಧರ್ಮಪುರಿಯ ಇಬ್ಬರು ವಿದ್ಯಾರ್ಥಿನಿಯ ಸೇಲಂನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇವರ ಪರಿಚಯ ಸ್ನೇಹಕ್ಕೆ ತಿರುಗಿದ್ದು, ಬಳಿಕ ಈ ಇಬ್ಬರು ಯುವತಿಯರು ಪ್ರೀತಿಯಲ್ಲಿ ಬಿದ್ದಿದ್ದಾರೆ. ಇವರ ಪ್ರೀತಿ ಕುಟುಂಬಸ್ಥರಿಗೆ ತಿಳಿಯುತ್ತಿದ್ದಂತೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಪೋಷಕರು ಇಬ್ಬರಿಗೂ ಒಬ್ಬರಿಗೊಬ್ಬರು ಭೇಟಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.

ಆದರೂ ಸಹ ಪೋಷಕರ ವಿರೋಧದ ನಡುವೆಯೂ ಇಬ್ಬರು ಆಗಾಗ್ಗೆ ಭೇಟಿಯಾಗುತ್ತಿದ್ದರು. ಇಬ್ಬರು ಒಬ್ಬರಿಗೊಬ್ಬರು ಬಿಟ್ಟು ಇರಲಾರದೇ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಮನೆ ಬಿಟ್ಟ ಈ ಜೋಡಿ ನೇರ ಕೊಯಮತ್ತೂರಿಗೆ ತೆರಳಿ ಮನೆ ಮಾಡಿದ್ದರು. ಜೀವನ ಸಾಗಿಸುವುದಕ್ಕೆ ಇಬ್ಬರಲ್ಲಿ ಒಬ್ಬರು ಕೊಯಮತ್ತೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಇನ್ನೊಂದೆಡೆ ನಮ್ಮ ಮಗಳು ಮನೆಯಿಂದ ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ಧರ್ಮಪುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಇವರ ಸ್ಥಳವನ್ನು ಪತ್ತೆ ಹಚ್ಚಿ ಇಬ್ಬರನ್ನೂ ಧರ್ಮಪುರಿ ಮಹಿಳಾ ಪೊಲೀಸ್ ಠಾಣೆಗೆ ಕರೆತರಲಾಯಿತು. ಅಲ್ಲಿ ಇಬ್ಬರಿಗೂ ಸಲಹೆ ನೀಡಿದರು. ಆಗ ಇಬ್ಬರಲ್ಲಿ ಓರ್ವ ಯುವತಿ ಪೊಲೀಸ್​ ಠಾಣೆಯ ಶೌಚಾಲಯಕ್ಕೆ ತೆರಳಿ ಬ್ಲೇಡ್‌ನಿಂದ ಕುತ್ತಿಗೆ ಹಾಗೂ ಕೈಗಳನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಮಹಿಳಾ ಪೊಲೀಸರು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಗಾಯಗೊಂಡ ವಿದ್ಯಾರ್ಥಿನಿ ಮತ್ತು ಇನ್ನೊಬ್ಬ ಯುವತಿಯನ್ನು ಪೊಲೀಸರು ಪೋಷಕರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

ಓದಿ:ಪ್ರೀತಿ ಬಿಡದ ಮಗಳು... ಕೊಲೆಗೈದು ಶವದ ಮುಂದೆ ವಿಡಿಯೋ ಮಾಡಿ ತಂದೆ ಹೇಳಿದ್ದೇನು?

ABOUT THE AUTHOR

...view details