ಭಿಲ್ವಾರ್(ರಾಜಸ್ಥಾನ):ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಯುವಕನನ್ನು ಥಳಿಸಿದ ಜನರು ಕೈಕಾಲು ಕಟ್ಟಿ ಹಾಕಿದ್ದಲ್ಲದೇ, ಗುಪ್ತಾಂಗದಲ್ಲಿ ಮೆಣಸಿನಕಾಯಿ ಪುಡಿಯನ್ನು ಹಾಕಿ ಹಿಂಸಿಸಿದ ಅಮಾನವೀಯ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಈ ಬಗ್ಗೆ ಯುವಕನ ತಂದೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಆಗಿದ್ದೇನು?:ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಗ್ರಾಮದ 22 ವರ್ಷದ ಯುವಕ ಬಾಲಕಿಯೊಬ್ಬಳಿಗೆ ಕಿರುಕುಳ ನೀಡುತ್ತಿದ್ದ ಎಂಬ ಆಪಾದನೆ ಇತ್ತು. ಇದರಿಂದ ಕೆರಳಿದ ಕೆಲ ಗ್ರಾಮಸ್ಥರು ಯುವಕನನ್ನು ನಿರ್ಜನ ಪ್ರದೇಶದಲ್ಲಿ ಎಳೆದೊಯ್ದು ದೊಣ್ಣೆಗಳಿಂದ ಬಡಿದು, ಬಳಿಕ ವಿವಸ್ತ್ರಗೊಳಿಸಿ ಆತನ ಹಿಂಭಾಗದ ಗುಪ್ತಾಂಗಕ್ಕೆ ಕಾರದ ಪುಡಿ ಹಾಕಲಾಗಿದೆ.
ನೋವಿನಿಂದ ಯುವಕ ಕಿರುಚಾಡಿದರೂ ಬಿಡದ ಜನರು ಆತನ ಕೈ ಕಾಲುಗಳನ್ನು ಹಗ್ಗದಿಂದ ಬಿಗಿದು ನಿರ್ಜನ ಪ್ರದೇಶದಲ್ಲಿ ದಿನವಿಡೀ ಕೂಡಿ ಹಾಕಿದ್ದಾರೆ. ಇತ್ತ ಯುವಕನ ತಂದೆ ಮಗ ಮನೆಗೆ ವಾಪಸ್ ಬಾರದೇ ಇದ್ದಾಗ ಹುಡುಕಾಡಿದ್ದಾರೆ. ಬಳಿಕ ವಿಷಯ ತಿಳಿದು ಘಟನಾ ಸ್ಥಳಕ್ಕೆ ತೆರಳಿ ಯುವಕನನ್ನು ರಕ್ಷಿಸಿದ್ದಾರೆ.