ಗೊರೆಲ್ಲಾ-ಪೆಂಡ್ರಾ-ಮಾರ್ವಾಹಿ (ಚತ್ತೀಚ್ಗಢ): ಹುಡುಗಿ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಯುವಕನೋರ್ವ ಬೆಂಕಿ ಹಚ್ಚಿಕೊಂಡ ಘಟನೆ ಗೊರೆಲ್ಲಾ-ಪೆಂಡ್ರಾ-ಮಾರ್ವಾಹಿ ಜಿಲ್ಲೆಯ ಪೆಂಡ್ರಾದ ರಾಯ್ ಪೆಟ್ರೋಲ್ ಪಂಪ್ ಬಳಿ ನಡೆದಿದೆ.
ಪದೆ ಪದೇ ಪ್ರೀತಿಯನ್ನು ವ್ಯಕ್ತಪಡಿಸಿದರೂ, ಹುಡುಗಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂಬ ಕಾರಣಕ್ಕೆ ಯುವಕನೋರ್ವ ತನ್ನ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಲಾಟಾ ಗ್ರಾಮದ ಸಂಜಯ್ ತಿರ್ಕೀ ಎಂಬ ಯುವಕ ಯುವತಿವೋರ್ವಳನ್ನು ಇಷ್ಟಪಡುತ್ತಿದ್ದ. ಆದರೆ ಈತನ ಪ್ರೀತಿಯನ್ನು ಅವಳು ಒಪ್ಪಲಿಲ್ಲ. ಇದರಿಂದ ಮನನೊಂದ ಸಂಜಯ್ ತನ್ನ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಈ ವೇಳೆ ಹತ್ತಿರದಲ್ಲಿದ್ದ ಜವಳಿ ಅಂಗಡಿ ಮಾಲೀಕರು ಯುವಕನನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.