ಹೈದರಾಬಾದ್(ತೆಲಂಗಾಣ) : ಸಮಯಕ್ಕೆ ಸರಿಯಾಗಿ ಕಾರು ವಿತರಣೆಯಾಗಲಿಲ್ಲ ಎಂದು ನೊಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಮರೆಡ್ಡಿ ಜಿಲ್ಲೆಯ ಎಲ್ಲರೆಡ್ಡಿ ತಾಲೂಕಿನಲ್ಲಿ ಭಾನುವಾರ ಈ ಪ್ರಕರಣ ನಡೆದಿದೆ.
ಸ್ಥಳೀಯರು ಮತ್ತು ಪೊಲೀಸರ ಮಾಹಿತಿ ಪ್ರಕಾರ, ಎಲ್ಲರೆಡ್ಡಿ ಮಂಡಲದ ಕಲ್ಯಾಣಿ ಗ್ರಾಮದ ನಿವಾಸಿ ತೆಲಗಾಪುರಂ ಕೃಷ್ಣ (21) ಕಾರು ಖರೀದಿಸಿ ನಂತರ ಅದನ್ನು ಬಾಡಿಗೆಗೆ ಬಿಟ್ಟು ಉದ್ಯೋಗ ಮಾಡಲು ಬಯಸಿದ್ದ. ಇದಕ್ಕಾಗಿ ಎಲ್ಲರೆಡ್ಡಿ ಪಟ್ಟಣದ ಶೋರೂಂನ್ನು ಸಂಪರ್ಕಿಸಿದ್ದ. ಆ ವೇಳೆ ಕಾರಿನ ಬೆಲೆ ರೂ.8.71 ಲಕ್ಷ ರೂಪಾಯಿ ಆಗಿದ್ದು ರೂ.2.5 ಲಕ್ಷವನ್ನು ಮುಂಗಡ ಪಾವತಿಯಾಗಿ ನೀಡುವಂತೆ ತಿಳಿಸಿದ್ದರು. ಅದರಂತೆ ಮೇ 23 ರಂದು 50 ಸಾವಿರ ರೂ. ಹಣ ಪಾವತಿಸಿದ್ದ. ಉಳಿದ ರೂ.2 ಲಕ್ಷ ಪಾವತಿಸಿ ಕಾರು ತೆಗೆದುಕೊಂಡು ಹೋಗುವಂತೆ ಶೋರೂಮ್ ಸಿಬ್ಬಂದಿ ಸೂಚಿಸಿದ್ದರು.